
ಸೈದಾಪುರ: ಯಾದಗಿರಿ ತಾಲೂಕಿನ ಬಾಲಚೇಡ್ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಾದ ಆಹಾರ ಸಾಮಗ್ರಿಗಳ ನಿರ್ವಹಣೆ ಹಾಗೂ ವಿತರಣೆಯ ಕುರಿತು ಅನುಮಾನ ವ್ಯಕ್ತವಾಗಿದೆ. ಶಾಲೆಯ ಹೊರಭಾಗದ ಪೊದೆ ಪ್ರದೇಶದಲ್ಲಿ ಮೊಟ್ಟೆಗಳ ಕ್ರೇಟ್, ಬಾಳೆಹಣ್ಣು ಸೇರಿದಂತೆ ಆಹಾರ ಸಾಮಗ್ರಿಗಳು ಕಂಡುಬAದಿರುವ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ಭಾಗವಾಗಿ ಸರ್ಕಾರದ ವತಿಯಿಂದ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಆದರೆ, ಇವುಗಳನ್ನು ಶಾಲೆಯ ಹೊರಭಾಗದಲ್ಲಿ ಇಡಲಾಗಿರುವುದು ಏಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜುಲೈ ೧೦ರಂದು ತೆಗೆದಿರುವುದಾಗಿ ಹೇಳಲಾಗುತ್ತಿರುವ ಛಾಯಾಚಿತ್ರಗಳಲ್ಲಿ ಶಾಲೆಯ ಹೊರಭಾಗದ ಪೊದೆ ಪ್ರದೇಶದಲ್ಲಿ ಮೊಟ್ಟೆಗಳ ಕ್ರೇಟ್‌ಗಳು, ಬಾಳೆಹಣ್ಣು ಹಾಗೂ ಇತರೆ ಸಾಮಗ್ರಿಗಳು ಕಂಡುಬರುತ್ತಿವೆ. ಈ ಸಾಮಗ್ರಿಗಳು ವಿದ್ಯಾರ್ಥಿಗಳಿಗಾಗಿ ಸರಬರಾಜಾಗಿದ್ದವೇ ಅಥವಾ ಬೇರೆ ಉದ್ದೇಶಕ್ಕೆ ಸಂಬAಧಿಸಿದವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ಸ್ಪಷ್ಟಪಡಿಸಬೇಕಾಗಿದೆ.
ಶಾಲೆಗೆ ಇದುವರೆಗೆ ಎಷ್ಟು ಮೊಟ್ಟೆ ಮತ್ತು ಬಾಳೆಹಣ್ಣು ಸರಬರಾಜಾಗಿದೆ, ಯಾವ ದಿನಾಂಕದAದು ಖರೀದಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಹಾಗೂ ಉಳಿದ ಸಾಮಗ್ರಿಗಳ ಲೆಕ್ಕವೇನು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಖರೀದಿ ಬಿಲ್, ಸರಬರಾಜು ದಾಖಲೆ, ಸ್ಟಾಕ್ ರಿಜಿಸ್ಟರ್, ಆಹಾರ ವಿತರಣಾ ದಾಖಲೆ ಹಾಗೂ ವಿದ್ಯಾರ್ಥಿಗಳ ಹಾಜರಾತಿ ವಿವರಗಳನ್ನು ಪರಿಶೀಲಿಸಿದರೆ ವಾಸ್ತವಾಂಶ ಹೊರಬರಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೆ, ಆಹಾರ ಸಾಮಗ್ರಿಗಳನ್ನು ಪೊದೆ ಪ್ರದೇಶಕ್ಕೆ ಯಾರು ತೆಗೆದುಕೊಂಡು ಹೋದರು? ಯಾವ ಸಂದರ್ಭದಲ್ಲಿ ಅಲ್ಲಿಗೆ ಸಾಗಿಸಲಾಯಿತು? ಎಂಬುದನ್ನು ದೃಶ್ಯಾವಳಿಗಳ ಮೂಲಕ ಪರಿಶೀಲಿಸಬೇಕು.
ಆಹಾರ ಸಾಮಗ್ರಿಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ದೃಢಪಡಿಸಬೇಕಾಗಿದೆ.
ವಿದ್ಯಾರ್ಥಿಗಳ ಆಹಾರಕ್ಕೆ ಸಂಬAಧಿಸಿದ ವಿಷಯವಾಗಿರುವುದರಿಂದ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಅದೇ ವೇಳೆ, ಛಾಯಾಚಿತ್ರಗಳ ಆಧಾರದ ಮೇಲೆ ಯಾರ ಮೇಲೂ ನೇರ ಆರೋಪ ಮಾಡದೆ, ದಾಖಲೆಗಳು ಮತ್ತು ಸ್ಥಳ ಪರಿಶೀಲನೆಯ ಮೂಲಕ ಸತ್ಯಾಂಶವನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.
ತನಿಖೆಯಲ್ಲಿ ಯಾವುದೇ ಅಕ್ರಮ ಅಥವಾ ಆಹಾರ ಸಾಮಗ್ರಿಗಳ ದುರ್ಬಳಕೆ ದೃಢಪಟ್ಟರೆ, ಸಂಬAಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಆಹಾರ ಸಾಮಗ್ರಿಗಳು ಪೊದೆ ಪ್ರದೇಶದಲ್ಲಿ ಕಂಡುಬAದಿರುವುದಕ್ಕೆ ಸೂಕ್ತ ಕಾರಣವೇನು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿದ್ಯಾರ್ಥಿಗಳ ತಟ್ಟೆಗೆ ಸೇರಬೇಕಾದ ಆಹಾರ ಸಾಮಗ್ರಿಗಳು ಎಲ್ಲಿಗೆ ಹೋದವು ಎಂಬ ಪ್ರಶ್ನೆಗೆ ಅಧಿಕಾರಿಗಳ ಪರಿಶೀಲನೆಯಿಂದ ಉತ್ತರ ಸಿಗಬೇಕಿದೆ.


































