Home Uncategorized ಎಸ್.ಐ. ಆರ್ : ಮತದಾರರ ನೋಂದಣಿ, ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವರ

ಎಸ್.ಐ. ಆರ್ : ಮತದಾರರ ನೋಂದಣಿ, ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವರ

ಉಡುಪಿ-ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೬ , ಮತದಾರರ ನೋಂದಣಿ ಮತ್ತು ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಇತ್ತೀಚಿನ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ೧೦,೦೦,೭೫೪ ಮತದಾರರಿದ್ದು, ಇವರಲ್ಲಿ ೪,೮೪,೨೩೬ ಪುರುಷರು, ೫,೧೬,೫೦೯ ಮಹಿಳೆಯರು, ೯ ತೃತೀಯ ಲಿಂಗಿಗಳು ಇದ್ದಾರೆ. ಜಿಲ್ಲೆಯಾದ್ಯಂತ ಒಟ್ಟು ೧,೨೪೪ ಮತದಾನ ಕೇಂದ್ರಗಳಿವೆ.
ಜಿಲ್ಲೆಗೆ ಸಂಬಂಧಿಸಿದಂತೆ ೯೭,೬೭೩ ನೋಟೀಸ್‌ಗಳನ್ನು ಸೃಜಿಸಲಾಗಿದ್ದು, ೮೪,೧೨೦ ನೋಟೀಸ್ ಗಳನ್ನು ವಿತರಿಸಿ, ಶೇ. ೮೬.೧೨ ರಷ್ಟು ಸಾಧನೆ ಮಾಡಲಾಗಿರುತ್ತದೆ. ೧೩,೫೫೩ ನೋಟೀಸ್‌ಗಳು ವಿತರಣೆಗೆ ಬಾಕಿ ಇರುತ್ತವೆ. ವಿತರಿಸಲಾದ ನೋಟಿಸ್ ಗಳಲ್ಲಿ ೧೮,೩೭೧ ವಿಚಾರಣೆಗಳು ಪೂರ್ಣಗೊಂಡಿದ್ದು, ೬೫,೭೪೯ ನೋಟೀಸ್ ಗಳ ವಿಚಾರಣೆಗಳು ಬಾಕಿ ಇರುತ್ತವೆ.
ವಿಚಾರಣೆ ನಡೆಸಲು ಅಕ್ಟೋಬರ್ ೧೨ ಕೊನೆಯ ದಿನ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ ೨೨ ಕೊನೆಯ ದಿನವಾಗಿದ್ದು, ಅಕ್ಟೋಬರ್ ೨೭ ರಂದು
ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ.
ಜಿಲ್ಲೆಯಲ್ಲಿ ಒಟ್ಟು ೪೪,೮೪೧ ಅರ್ಜಿಗಳು (ನಮೂನೆ ೬, ೬ಂ, ೭, ಮತ್ತು ೮) ಸ್ವೀಕೃತವಾಗಿದ್ದು, ಇದರಲ್ಲಿ ನಮೂನೆ ೬ (ಹೊಸ ಮತದಾರರ ಸೇರ್ಪಡೆ)ಗೆ ೧೦,೨೩೧ ಅರ್ಜಿಗಳು, ನಮೂನೆ ೬ಂ (ಅನಿವಾಸಿ ಭಾರತೀಯರು) ಗೆ ೩೨೧ ಅರ್ಜಿಗಳು, ನಮೂನೆ ೭ (ಆಕ್ಷೇಪಣೆ ಹೆಸರು ತೆಗೆದುಹಾಕುವುದು) ಗೆ ೭೪೪ ಅರ್ಜಿಗಳು ಹಾಗೂ ನಮೂನೆ ೮ (ಟoಛಿಚಿಣiಟಿg ತಿದ್ದುಪಡಿ/ಬದಲಿ /ವಿಕಲಚೇತನರ ಗುರುತಿಸುವಿಕೆ)ಗೆ ೩೩,೫೪೫ ಅರ್ಜಿಗಳು ಸೇರಿವೆ.
ಅರ್ಹ ನಾಗರಿಕರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು, ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಎರಡನೇ ಹಂತದ ವಿಶೇಷ ಅಭಿಯಾನವನ್ನು ಸೆಪ್ಟೆಂಬರ್ ೧೯ ( ಶನಿವಾರ ) ಮತ್ತು ೨೦ ( ಭಾನುವಾರ )ರಂದು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೧, ೨೦೨೬ ಕ್ಕೆ ೧೮ ವರ್ಷ ಭರ್ತಿಯಾಗುವ ಎಲ್ಲಾ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಅನಿವಾಸಿ ಭಾರತೀಯರಿಗೆ ವಿಶೇಷ ರಿಯಾಯಿತಿ :
ಹಿರಿಯ ನಾಗರಿಕರು, ವಿಕಲ ಚೇತನರು, ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ ಭಾರತೀಯರ ಪರವಾಗಿ ಅವರ ಕುಟುಂಬದ ಪ್ರೌಢ ಸದಸ್ಯರೊಬ್ಬರು ನಂಬಂಧಪಟ್ಟ ಇಖಔ/ಂಇಖಔ ಕಚೇರಿಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳು/ಮಾಹಿತಿಯನ್ನು ಸಲ್ಲಿಸಿ ನೋಟೀಸ್‌ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ.
ಮತದಾನ ಕೇಂದ್ರಗಳ ಪುನರಚನೆ ಹಾಗೂ ಸರಣಿ ಸಂಖ್ಯೆಗಳ ಬದಲಾವಣೆಯಿಂದಾಗಿ, ಕೆಲ ಮತದಾರರ ಭಾಗದ ಅಥವಾ ಕ್ರಮ ಸಂಖ್ಯೆ ಬದಲಾಗಿರಬಹುದಾಗಿದ್ದು, ಹಳೆಯ ಭಾಗದ ಸಂಖ್ಯೆಯಲ್ಲಿ ಹೆಸರು ಸಿಗದ ಮತದಾರರು ತಮ್ಮ ಇPIಅ ಸಂಖ್ಯೆಯನ್ನು ಬಳಸಿ voಣeಡಿs.eಛಿi.gov.iಟಿ ವೆಬ್ ಸೈಟ್ ಅಥವಾ ಇಅIಓಇಖಿ ಮೊಬೈಲ್ ಆಪ್ ಮೂಲಕ ತಮ್ಮ ಹೆಸರನ್ನು ಹುಡುಕಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ voಣeಡಿs.eಛಿi.gov.iಟಿ ವೆಬ್ ಸೈಟ್ ಅಥವಾ ಇಅIಓಇಖಿ ಆಪ್ ಮೂಲಕ ಅಗತ್ಯ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ (ವಯಸ್ಸು ಮತ್ತು ವಿಳಾಸದ ಪುರಾವೆ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಭರ್ತಿ ಮಾಡಿದ ನಮೂನೆ ೬ ಮತ್ತು ಘೋಷಣಾ ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಃಐಔ) ಅಥವಾ ಇಖಔ/ಂಇಖಔ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : ೧೯೫೦ / ೧೮೦೦ ೪೨೫೫ ೧೯೫೦ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.