
ನವಲಗುಂದ ,ಸೆ.೧೧: ಗಣೇಶೋತ್ಸವದಲ್ಲಿ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ೧೦ ಗಂಟೆಯ ನಂತರ ಯಾವುದೇ ರೀತಿಯ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ ಎಂದು ಸಿಪಿಐ ರವಿಕುಮಾರ ಕಪ್ಪತನವರ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಧರ್ಮಗಳ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡ ಶಾಂತಿ ಸಭೆಯಲ್ಲಿ ಮಾತನಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಮೆರವಣಿಗೆ ನಡೆಸುವುದು, ಸಾರ್ವಜನಿಕರಿಗೆ ತೊಂದರೆ ಮಾಡುವುದು, ಅಶಾಂತಿ ಸೃಷ್ಟಿಸುವುದು ಹಾಗೂ ಕಾನೂನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಗಲಾಟೆ, ಅಹಿತಕರ ಘಟನೆಗಳಿಗೆ ಕಾರಣವಾಗುವ ರೀತಿಯಲ್ಲಿ ವರ್ತಿಸಿದರೆ ಸಂಬAಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಲಕ್ಷಾಂತರ ರೂಪಾಯಿ ಡಿಜೆಗೆ ಹಣ ವ್ಯರ್ಥ ಮಾಡುವುದು ಸರಿಯಲ್ಲ.ಅದೇ ಹಣ ವನ್ನು ಅನ್ನಪ್ರಸಾದ, ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಬಳಸಿ ಎಂದು ರವಿಕುಮಾರ ಸಲಹೆ ನೀಡಿದರು.
ಪಿಎಸ್‌ಐ ಜನಾರ್ದನ್ ಭಟ್ರಳ್ಳಿ ಮಾತನಾಡಿ ಗ್ರಾಮೀಣ ಪ್ರದೇಶ ಸೇರಿ ನಮ್ಮ ಠಾಣೆವ್ಯಾಪ್ತಿಯಲ್ಲಿ ೧೬೪ ಕಡೆ ಗಜಾನನ ಪ್ರತಿಷ್ಠಾಪಿಸಲಾಗುತ್ತದೆ. ನವಲಗುಂದ ಪಟ್ಟಣದಲ್ಲಿಯೇ ೩೪ ಕಡೆ ಗಜಾನನ ಪ್ರತಿಷ್ಠಾಪಿಸಲಾಗುತ್ತಿದೆ. ಗಜಾನನ ಯುವಕ ಮಂಡಲದವರು ಗಜಾನನ ಪ್ರತಿಷ್ಠಾಪಿಸಲು ಪರವಾನಿಗೆ ಪಡೆಯಬೇಕು. ಗಣೇಶೋತ್ಸವ ಸಮಿತಿಯವರು ಹಾಗೂ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಅಧಿಕಾರಿಗಳಾದ ರವೀಂದ್ರಗೌಡ ಪಾಟೀಲ, ಐ.ಆರ್. ಭಜಂತ್ರಿ, ಅನೀಲ ಜೋಶಿ ಸೇರಿ ಗಜಾನನ ಮಂಡಳಿ ಪದಾಧಿಕಾರಿಗಳು, ನಗರದ ಹಿರಿಯರು ಪಾಲ್ಗೊಂಡಿದ್ದರು.































