Home ಜಿಲ್ಲೆ ಸಾಂಸ್ಕೃತಿಕ ಅರಿವಿನೊಂದಿಗೆ ಶಿಕ್ಷಣ ಕಲಿಕೆಯಾಗಬೇಕು: ಡಾ. ಭೀಮಾಶಂಕರ ಬಿರಾದಾರ

ಸಾಂಸ್ಕೃತಿಕ ಅರಿವಿನೊಂದಿಗೆ ಶಿಕ್ಷಣ ಕಲಿಕೆಯಾಗಬೇಕು: ಡಾ. ಭೀಮಾಶಂಕರ ಬಿರಾದಾರ

ಸಂಜೆ ವಾಣಿ ವಾರ್ತಾ
ಬಸವಕಲ್ಯಾಣ: ಮನುಷ್ಯನಲ್ಲಿ ಸಹಜವಾಗಿರುವ ಕಲಿಕೆಗಾಗಿ ಅಧ್ಯಾಪಕನಿಲ್ಲ. ಸಮಾಜವನ್ನು ಗ್ರಹಿಸಲು, ರಾಜಕಾರಣ ಅರ್ಥಮಾಡಿಕೊಳ್ಳಲು, ಸಾಂಸ್ಕೃತಿಕ ಅರಿವು ಮೂಡಿಸಲು ಅಧ್ಯಾಪಕ ಅಗತ್ಯ ಎಂದು ನುಡಿದರು.
ನಗರದ ಎ???ಸ್ ಕೆಬಿ ಕಾಲೇಜಿನಲ್ಲಿ ಐಕ್ಯುಎಸಿ, ಎನ್ನೆಸ್ಸೆಸ್ ಮತ್ತು ಎನ್ ಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು .
ಶಿಕ್ಷಕರಾದವರು ಲೋಕದ ವ್ಯವಹಾರಗಳು, ಪ್ರಕೃತಿಯ ಸಂಗತಿಗಳನ್ನು ಗ್ರಹಿಸುವ ಅರಿವಿನ ನೋಟ ನೀಡುತ್ತಾನೆ. ಒಂದು ವರ್ಗ ಕೋಣೆಯಲ್ಲಿ ಪ್ರಜಾಪ್ರಭುತ್ವದ ವಾತಾವರಣವಿದ್ದರೆ ಅಲ್ಲಿಂದ ಹೊರಬಂದ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ‍್ಯ, ಸಮಾನತೆಯ ಪರಿಕಲ್ಪನೆ ಗಟ್ಟಿಗೊಂಡಿರುತ್ತದೆ. ಒಂದು ಸಂಶೋಧನೆಯ ಹಿಂದಿನ ಶ್ರಮ, ಒಂದು ಸಿದ್ಧಾಂತದ ತಾತ್ವಿಕತೆ ಮನವರಿಕೆ ಮಾಡುವ ಹೊಣೆಗಾರಿಕೆ ಅಧ್ಯಾಪಕರ ಮೇಲಿರುತ್ತದೆ.
ಅತಾ ತರಗತಿಗಳಲ್ಲಿ ಸಂವಾದ ಮತ್ತು ಚರ್ಚೆಗಳು ನಡೆಸಿದರೆ ಮಾತ್ರ ಆ ಕಾಲೇಜುಗಳು ಬೌದ್ಧಿಕವಾಗಿ ಬೆಳೆಯುತ್ತದೆ.
ವೈಚಾರಿಕವಾಗಿ, ಸೃಜನಾತ್ಮಕವಾಗಿ ಹೊರ ಜಗತ್ತಿನಲ್ಲಿ ಅಸ್ಮಿತೆ ಕಂಡುಕೊಳ್ಳಲು ಸಾಧ್ಯ. ಪಠ್ಯದ ಜೊತೆಗೆ ಲೋಕ ವ್ಯವಹಾರದ ಬಗೆಗೆ, ಹೊಸ ಆವಿಷ್ಕಾರ, ಸಂಶೋಧನೆಗಳ ಬಗೆಗೆ ವಿದ್ಯಾರ್ಥಿಗಳು
ಮಾತನಾಡುವ ಪರಿಸರ ಸೃಷ್ಟಿಸುವ ಜವಾಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ ಎಂದರು. ಅದಾಗಲೇ ಅಂಥ ಕ್ಯಾಂಪಸ್ಸು ಅರಿವಿನ ಕೇಂದ್ರವಾಗಿ ರೂಪುಗೊಳ್ಳುತ್ತವೆ.ಹೀಗಾಗಿ
ಬುದ್ಧ, ಬಸವ, ಅಕ್ಕ, ಅಲ್ಲಮ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಜೆಪಿ , ಪೇರಿಯಾರ್, ಕುವೆಂಪು, ಕಾರಂತ ಮೊದಲಾದವರು ನಮ್ಮಲ್ಲಿ ಹಲವು ಬಗೆಯ ತಿಳುವಳಿಕೆ ಮತ್ತು ಪ್ರಜ್ಞೆ ಮೂಡಿಸಿದ ಚಿಂತಕರು. ಅವರೆಲ್ಲರೂ ನಮ್ಮ ದೇಶದ ಸಾಂಸ್ಕೃತಿಕ ಗುರುಗಳಾಗಿದ್ದಾರೆ ಶ್ರೀ ಬವವೇಶ್ವರ ಪದವಿ ಕಾಲೇಜು ಅಧ್ಯಾಪಕರಾದ ಡಾ! ಭೀಮಾ ಶಂಕರ ಬೀರಾದಾರ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಕುಮಾರ್ ಪಾಟೀಲ್ ಅವರು ನಮ್ಮ ದೇಶ ವೈವಿಧ್ಯತೆಯಿಂದ ಕೂಡಿದೆ. ಹಲವು ಪಂಥಗಳು, ಹಲವು ತತ್ವಗಳು ಇರುವ ಈ ದೇಶ ಗುರು ಪರಂಪರೆಗೆ ಪ್ರಧಾನವಾಗಿದೆ. ಎಲ್ಲ ಸಂಗತಿಗಳನ್ನೂ ವಿಶ್ಲೇಷಣೆ ಮಾಡಿ ಒಮ್ಮತಕ್ಕೆ ಬರಲಾಗುತ್ತದೆ. ಈ ದೇಶದ ಸೌಂದರ್ಯ ಇರುವುದೇ ವೈವಿಧ್ಯತೆಯಲ್ಲಿ ಎಂದರು ಮತ್ತು ಭಾರತದಲ್ಲಿ ಆಕ್ರಮಣಶೀಲತೆಗಿಂತ ಶಾಂತಿ ಮತ್ತು ಸೌಹಾರ್ದತೆಗೆ ಪ್ರಾಮುಖ್ಯತೆ ಇದೆ. ಇದರ ಮೂಲ ಇಲ್ಲಿನ ಗುರು ಪರಂಪರೆಯಾಗಿದೆ. ಇಲ್ಲಿ ಯಾವ ಗುರುಗಳು ಕ್ರೌರ್ಯವನ್ನು ಪ್ರಚೋದಿಸಿಲ್ಲ. ಸಹನೆ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ಮಾನ್ಯತೆ ಮಾಡಿದ್ದಾರೆ. ಪಾಠ ದೊಂದಿಗೆ ಮೌಲ್ಯವನ್ನು ತಿಳಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದೇನುತ್ತಾ
ಹಕ್ಕು ನೀಡಿದ ನಮ್ಮ ಸಂವಿಧಾನ ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸ್ವತಂತ್ರ ಪೂರ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಕೆಲಸಗಳನ್ನು ಮಾಡಿದ್ದಾರೆ. ಒಂದು ಕುಟುಂಬದಲ್ಲಿ ತಾಯಿಯೇ ಮೊದಲ ಗುರುವಾಗುತ್ತಾಳೆ. ಅಧ್ಯಾಪಕ ನಂತರದ ಗುರುವಾಗುತ್ತಾನೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದಿAದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಎಚ್. ಆರ್. ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ. ವಿಠೋಬಾ ಡೊಣ್ಣೇಗೌಡರು, ಸೂರ್ಯಕಾಂತ ನಾಸೆ, ಮಹಾದೇವ ದೇಗಾಂವ, ನಾಗರಾಜ್ ನಿಂಬಾಳ್ಕರ್, ಭಾರತಿ ಮಠ, ವೈಶಾಲಿ, ಸತೀಶ್ ರಾಥೋಡ್, ಅಶ್ವಿನಿ ಹಾಗೂ ಶಾಲಾ ಮಕ್ಕಳು ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕ ಡಾ. ವಿಜಯಕುಮಾರ ತಳವಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಶಂಕರ ಪೂಜಾರಿ ನಿರೂಪಿಸಿದರು. ಕಲ್ಯಾಣಪ್ಪ ನಾವದಗಿ ವಂದಿಸಿದರು.