Home ಜಿಲ್ಲೆ ಬೆಂಗಳೂರು ಪ್ರಸೂತಿ-ಸ್ತ್ರೀರೋಗ ತಜ್ಞರಾಗಿ ಡಾ.ವರ್ಷಿಣಿ ಅಧಿಕಾರ ಸ್ವೀಕಾರ

ಪ್ರಸೂತಿ-ಸ್ತ್ರೀರೋಗ ತಜ್ಞರಾಗಿ ಡಾ.ವರ್ಷಿಣಿ ಅಧಿಕಾರ ಸ್ವೀಕಾರ

ಮಾಲೂರು,ಜು.೩: ಮಾಲೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾಗಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ನೇಮಕಗೊಂಡಿರುವ ಕೊಮ್ಮನಹಳ್ಳಿ ಗ್ರಾಮದ ಡಾ.ವರ್ಷಿಣಿ ಸುನೀಲ್ ಗೌಡ ಅಧಿಕಾರ ವಹಿಸಿಕೊಂಡರು.


ತಾಲ್ಲೂಕಿನ ಟೇಕಲ್ ಹೋಬಳಿಯ ಕೊಮ್ಮನಹಳ್ಳಿ ಗ್ರಾಮದ ಶಾಸಕ ಕೆ.ವೈ.ನಂಜೇಗೌಡ ಪುತ್ರ ಕೆ.ಎನ್.ಸುನಿಲ್ ನಂಜೇಗೌಡ ಪತ್ನಿ ಡಾ.ವರ್ಷಿಣಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾಗಿ ಎಂಡಿ ಪದವಿ ಪಡೆದು ಗ್ರಾಮೀಣ ಬಾಗದಲ್ಲಿ ಸೇವೆ ಸಲ್ಲಿಸುವ ಹಂಬಲದಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞ ವೈದ್ಯರಾಗಿ ನೇಮಕ ಗೊಂಡಿದ್ದಾರೆ


ಇನ್ನು ಗ್ರಾಮೀಣ ಪ್ರದೇಶದ ತಾಯಂದಿರು ಹಾಗೂ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಡಾ.ವರ್ಷಿಣಿ ನೇಮಕ ಮಹತ್ವದ್ದಾಗಿದೆ.ಅವರ ವೃತ್ತಿನಿಷ್ಠೆ, ಸರಳತೆ ಮಾನವೀಯ ಕಾಳಜಿ,ಸೇವಾ ಮನೋಭಾವ ಹಾಗೂ ನಿಸ್ವಾರ್ಥ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.


ವಿಶೇಷವಾಗಿ ಗ್ರಾಮೀಣ ಭಾಗದ ಬಡ ಹಾಗೂ ಅಗತ್ಯವಿರುವ ಮಹಿಳೆಯರಿಗೆ ಉತ್ತಮ ವೈದ್ಯಕೀಯ ಸೇವೆ ದೊರೆಯಲಿ,ಅವರ ಸೇವೆಯಿಂದ ಇನ್ನಷ್ಟು ಜನರು ಆರೋಗ್ಯವಂತರಾಗಿ ಹೊಸ ಭರವಸೆಯನ್ನು ಪಡೆಯಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.ಅಲ್ಲದೆ, ವೃತ್ತಿ ಜೀವನದಲ್ಲಿ ಇನ್ನಷ್ಟು ಯಶಸ್ಸು,ಗೌರವ ಹಾಗೂ ಉನ್ನತ ಸಾಧನೆಗಳು ಅವರದಾಗಲಿ ಎಂದು ಅವರ ಕುಟುಂಬ ಸ್ನೇಹಿತರು ಬಂಧುಬಳಗ ತಾಲೂಕಿನ ಜನತೆ ಶುಭ ಕೋರಿದ್ದಾರೆ.