
ಕಲಬುರಗಿ,ಆ 19:ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಕೇವಲ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಾರ್ಗದರ್ಶಕರಾಗಿರದೆ, ಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಸೃಜನಶೀಲತೆಯ ಪೆÇ್ರೀತ್ಸಾಹಕರಾಗಿಯೂ ಗಮನಾರ್ಹ ಕೊಡುಗೆ ನೀಡಿದವರು ಎಂದು ಶರಣಬಸವ ವಿವಿಯ ಚಿತ್ರಕಲಾ ವಿಭಾಗದ ಮುಖ್ಯಸ್ಥ ಡಾ.ಸುಬ್ಬಯ್ಯ ನೀಲಾ ಅವರು ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಚಿತ್ರಕಲಾ ಮತ್ತು ಶಿಲ್ಪಕಲಾ ದಾಸೋಹ ಎಂಬ ವಿಷಯ ಕುರಿತು ಮಾತನಾಡಿದರು.
ಚಿತ್ರಕಲೆ ಮಾನವನ ಭಾವನೆ, ಕಲ್ಪನೆ, ಸಂಸ್ಕೃತಿ ಮತ್ತು ಜೀವನಾನುಭವಗಳನ್ನು ದೃಶ್ಯರೂಪದಲ್ಲಿ ವ್ಯಕ್ತಪಡಿಸುವ ಶಕ್ತಿಶಾಲಿ ಮಾಧ್ಯಮ. ಈ ಕಲೆಯ ಮಹತ್ವವನ್ನು ಅರ್ಥಮಾಡಿಕೊಂಡು ಶಿಕ್ಷಣದಲ್ಲಿ ಕಲೆಗೆ ಸ್ಥಾನ ನೀಡುವುದು ಪೂಜ್ಯ ಅಪ್ಪ ಅವರ ವಿಶಾಲ ದೃಷ್ಟಿಯ ಒಂದು ಭಾಗವಾಗಿತ್ತು.
ಅವರ ಮಾರ್ಗದರ್ಶನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಚಿತ್ರಕಲೆ ಆರಂಭಿಸಿದರು. ಮೊದಲಿಗೆ ಶರಣಬಸವೇಶ್ವರ ಪದವಿ ಕಲಾ ಮತ್ತು ಗೋದುತಾಯಿ ಪದವಿ ಮಹಾವಿದ್ಯಾಲಯಲ್ಲಿ ನಂತರ ಶರಣಬಸವ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಆರಂಭಿಸಿದರು. ಇದರ ಮೂಲಕ ಶಿಕ್ಷಣವೆಂದರೆ ಕೇವಲ ಪುಸ್ತಕದ ಜ್ಞಾನವಲ್ಲ, ಬುದ್ಧಿ, ಭಾವನೆ, ಸೃಜನಶೀಲತೆ ಮತ್ತು ಸೌಂದರ್ಯಪ್ರಜ್ಞೆಯ ಸಮಗ್ರ ಬೆಳವಣಿಗೆ ಎಂಬ ಸಂದೇಶವನ್ನು ಅವರು ನೀಡಿದರು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು, ಕಲೆಯ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವುದು, ಪ್ರತಿಭಾವಂತ ಕಲಾವಿದರಿಗೆ ಅವಕಾಶ ಕಲ್ಪಿಸುವುದು, ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಮಹತ್ವ ನೀಡುವುದು.ಕಲೆಯ ಮೂಲಕ ಮಾನವೀಯ ಮೌಲ್ಯಗಳು ಮತ್ತು ಸೌಂದರ್ಯಪ್ರಜ್ಞೆಯನ್ನು ಬೆಳೆಸುವುದು.ಮುಂದಿನ ಪೀಳಿಗೆಗೆ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ವಾತಾವರಣ ನಿರ್ಮಿಸುವುದು ಅವರ ಮಹತ್ವದ ಉದ್ದೇಶವಾಗಿತ್ತು.
ರಾಷ್ಟ್ರಮಟ್ಟದ ಅನೇಕ ಚಿತ್ರಕಲಾವಿದರಿಂದ ಶರಣಬಸವೇಶ್ವರ ಶಿವಜೀವನ ಕುರಿತು ಚಿತ್ರಕಲೆಗಳು ಮತ್ತು ಅನೇಕ ಮಹಾಪುರುಷರ ಶಿಲ್ಪಕಲೆಗಳನ್ನು ಕೆತ್ತಿಸಿದರು. ಶರಣಬಸವೇಶ್ವರ ದೇವಾಲಯದ ನಿರ್ಮಾಣದಲ್ಲಿ ಸೂಕ್ಷ್ಮ ಕೆತ್ತನೆ ಮತ್ತು ಶಿಲ್ಪಕೌಶಲ್ಯದ ಕಾಣಬಹುದು. ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಶಿಲ್ಪಕಲಾ ಕ್ಷೇತ್ರದ ಪ್ರಮುಖ ಕೊಡುಗೆಗಳಲ್ಲಿ ನವದೆಹಲಿಯ ಸಂಸತ್ ಆವರಣದಲ್ಲಿ ಮಹಾತ್ಮ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ವಹಿಸಿದ ಪಾತ್ರವಿದೆ. ಅವರು ಕಲ್ಯಾಣ ಕರ್ನಾಟಕ ಭಾಗದ ಅನೇಕ ಕಲಾವಿದರನ್ನು ಬೆಳೆಸಿದ್ದಾರೆ ಎಂದು ಹೇಳಿದರು.






























