
ಕಲಬುರಗಿ,ಸೆ.18: ಗುಲಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಿಂದ ಬ್ರಹ್ಮಕುಮಾರಿ ವಿ.ವಿ ಸ್ಥಾಪಕರ ಆಧ್ಯಾತ್ಮಿಕಜೀವನ ಸಾಧನೆ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಲಭಿಸಿದಕಾರಣ ಡಾ. ಅಣವೀರಪ್ಪ ಬೋಳೆವಾಡ ಅವರಿಗೆ ತಾಲ್ಲೂಕಿನ ಬೋಳೆವಾಡ ಗ್ರಾಮದ ಭೋಗಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿಉತ್ಸವದ ಸಮಯದಲ್ಲಿ ಊರಿನ ಪ್ರಮುಖ ಗಣ್ಯವ್ಯಕ್ತಿಗಳ ,ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಶಂಕರರಾವ್ ಬೋಗಶೆಟ್ಟಿ, ಅಪ್ಪರಾವ ಹಂಗರಗಿ, ಲಿಂಗರಾಜ ಹಂಗರಗಿ, ರೇವಣಸಿದ್ಧಪ್ಪ ಬೋಗಶೆಟ್ಟಿ, ಹಣಮಂತರರಾವ್ ಮಾಲೀಪಾಟೀಲ್, ಗಿರೀಶ್‍ಕುಲಕರ್ಣಿ, ಅಣವೀರಯ್ಯ ಸ್ವಾಮಿ, ಜೀತೇಂದ್ರ ಬೋಗಶೆಟ್ಟಿ, ಮಲ್ಲಣ್ಣಗೌಡ ಪಾಟೀಲ್, ನಸರೋದ್ದೀನ, ಧೂಳಪ್ಪ ದೀವಟಗಿ, ತಿಪ್ಪಣ್ಣಕಟ್ಟಿಮನಿ, ಕಲ್ಯಾಣಿ ಹಾಗೂ ಶ್ರೀ ಸುಂದರಕಮಠಾಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.




























