Home ಜಿಲ್ಲೆ ಕಲಬುರಗಿ ವೈದ್ಯರ ದಿನ: ಶ್ರೀ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ

ವೈದ್ಯರ ದಿನ: ಶ್ರೀ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ

ಕಲಬುರಗಿ,ಜು.4-ನಗರದ ಹಳೇ ಜೇವರ್ಗಿ ರಸ್ತೆಯ ಶ್ರೀ ಆಸ್ಪತ್ರೆಯ ವೈದ್ಯರ ತಂಡ ಸೈಯ್ಯದ್ ಚಿಂಚೋಳಿ ರಸ್ತೆಯಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವೃದ್ಧಾಶ್ರಮದಲ್ಲಿನ ವಿಕಲಚೇತನ ಮತ್ತು ಹಿರಿಯನಾಗರಿಕರಿಗೆ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ವೈದ್ಯಕೀಯ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಿತು.
ವೃದ್ಧಾಶ್ರಮದಲ್ಲಿ ವಾಸಿಸುವವರ ಸಬಲೀಕರಣ ಮತ್ತು ಉತ್ತಮ ಆರೋಗ್ಯ ನಿರ್ವಹಣೆ ಕುರಿತು ತಿಳುವಳಿಕೆ ನೀಡಲಾಯಿತು. ಅಲ್ಲದೆ ಶ್ರೀ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವೃದ್ಧಾಶ್ರಮದಲ್ಲಿನ ಹಿರಿಯನಾಗರಿಕರು ಮ್ತು ವಿಕಲಚೇತನರೊಂದಿಗೆ ಭೋಜನ ಸವಿದರು.
ಶ್ರೀ ಆಸ್ಪತ್ರೆಯು ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, 18.12.2025 ರಂದು ಆಸ್ಪತ್ರೆಯ ನಿರ್ದೇಶಕರಾದ ಡಾ.ಶ್ವೇತಾ ನಿಧಿ ಎಸ್.ಬಿ.ಅವರ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
23.3.2022 ರಂದು ಚಿಂಚನಸೂರ ಗ್ರಾಮದಲ್ಲಿ ಶ್ರೀ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಸಚಿನ್ ಎಸ್.ಬಿ.ಅವರ ಹುಟ್ಟುಹಬ್ಬದ ಪ್ರಯುಕ್ತ 1000ಕ್ಕೂ ಹೆಚ್ಚು ಜನ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧಿ ಮತ್ತು ಊಟೋಪಚಾರ ಮಾಡಲಾಯಿತು.
ಹೀಗೆ 2016 ರಿಂದ ಇಲ್ಲಿಯವರೆಗೆ ವೈದ್ಯರ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಸಲಹೆ ಮತ್ತು ಉಚಿತ ಔಷಶಿ ವಿತರಣೆ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿರುವುದು ಶ್ರೀ ಆಸ್ಪತ್ರೆಯ ವೈದ್ಯರ ಹೊಂದಿರುವ ಸಮಾಜಮುಖಿ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.