
ಬೀದರ್ : ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್, ಗುಂಪಾ ಬ್ರಾಂಚ್, ಬೀದರನಲ್ಲಿ ಬುಧವಾರದಂದು ಡಾಕ್ಟರ್ ಡೇ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ್ ಡಾ. ಕಾವೇರಿ ಬುದರೆ ಅವರು ವೈದ್ಯರು ಅಂದರೆ ದೇವರ ಸಮಾನ್. ವೈದ್ಯರು ಯಾವುದೇ ಭೇದ ಭಾವವಿಲ್ಲದೇ ರೋಗಿಗಳನ್ನು ಸಮಾನವಾಗಿ ನೋಡಿ ಜನರ ಅರೋಗ್ಯ ವನ್ನು ಕಾಪಾಡುತ್ತಾರೆ. ಅದಕ್ಕಾಗಿಯೇ ವೈದ್ಯರನ್ನು ದೇವರೆಂದು ಕರೆಯುತ್ತಾರೆ ಅಂದ ಅವರು ಮಕ್ಕಳು ಅರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು.
ಮಕ್ಕಳು ಪೋಸ್ಟಿಕ್ ಆಹಾರ ಸೇವನೆ ಮಾಡಬೇಕು. ಹಾಗೂ ಸ್ವಚ್ಛ ವಾಗಿ ಇರಬೇಕು ಎಂದು
ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸೆಂಟರ್ ಹೆಡ್ ಸಂದ್ಯಾ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ. ಕೇಂದ್ರ ಸಂಯೋಜಕಿ ಸ್ಮಿತಾ ಕುಲಕರ್ಣಿ. ಶಿಕ್ಷಕಿಯರಾದ ಆರತಿ. ಪ್ರೀತಿ. ದೇವಿಕಾ. ಸಂಜನಾ ಸೇರಿ ದಂತೆ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.































