
ಕಲಬುರಗಿ: ಹೈದರಾಬಾದ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಮೀಟ್ (ನಿಡ್ಜಮ್-೨೦೨೬)ನಲ್ಲಿ ಭಾಗವಹಿಸುವ ಕಲಬುರಗಿ ಜಿಲ್ಲಾ ತಂಡದ ಆಯ್ಕೆಗಾಗಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ ೨೯ರಂದು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೮.೩೦ಕ್ಕೆ ಕ್ರೀಡಾಪಟುಗಳು ವರದಿ ಮಾಡಿಕೊಳ್ಳಬೇಕು. ೧೪ ವರ್ಷದೊಳಗಿನ ಹಾಗೂ ೧೬ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅರ್ಹ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ತಿಳಿಸಿದೆ.
ವಿವಿಧ ಸ್ಪರ್ಧೆಗಳು: ೧೪ ವರ್ಷದೊಳಗಿನವರ ವಿಭಾಗದಲ್ಲಿ ಟ್ರಯಥ್ಲಾನ್ ಎ, ಬಿ ಮತ್ತು ಸಿ ಸ್ಪರ್ಧೆಗಳು ನಡೆಯಲಿವೆ. ಟ್ರಯಥ್ಲಾನ್ ಎ ವಿಭಾಗದಲ್ಲಿ ೬೦ ಮೀಟರ್ ಓಟ, ೫ ಮೀಟರ್ ಅಪ್ರೋಚ್ನೊಂದಿಗೆ ಲಾಂಗ್ಜAಪ್ ಹಾಗೂ ಕತ್ತರಿ ವಿಧಾನದಲ್ಲಿ ಹೈಜಂಪ್ ಸ್ಪರ್ಧೆ ನಡೆಯಲಿದೆ. ಟ್ರಯಥ್ಲಾನ್ ಬಿ ವಿಭಾಗದಲ್ಲಿ ೬೦ ಮೀಟರ್ ಓಟ, ಲಾಂಗ್ಜAಪ್ ಮತ್ತು ೧ ಕೆ.ಜಿ. ತೂಕದ ಬಾಲ್ನಿಂದ ಬ್ಯಾಕ್ಥ್ರೋ ಸ್ಪರ್ಧೆ ನಡೆಯಲಿದೆ. ಟ್ರಯಥ್ಲಾನ್ ಸಿ ವಿಭಾಗದಲ್ಲಿ ೬೦ ಮೀಟರ್ ಓಟ, ಲಾಂಗ್ಜAಪ್ ಹಾಗೂ ೬೦೦ ಮೀಟರ್ ಓಟ ಇರಲಿವೆ.
೧೬ ವರ್ಷದೊಳಗಿನವರ ವಿಭಾಗದಲ್ಲಿ ೬೦ ಮೀಟರ್ ಓಟ, ೮೦ ಮೀಟರ್ ಹರ್ಡಲ್ಸ್, ೬೦೦ ಮೀಟರ್ ಓಟ, ಕತ್ತರಿ ವಿಧಾನದಲ್ಲಿ ಹೈಜಂಪ್, ೫ ಮೀಟರ್ ಅಪ್ರೋಚ್ನೊಂದಿಗೆ ಲಾಂಗ್ಜAಪ್, ಸ್ಟ್ಯಾಂಡಿAಗ್ ಶಾಟ್ಪುಟ್, ಜಾವೆಲಿನ್ ಥ್ರೋ ಹಾಗೂ ಪೆಂಟಾಥ್ಲಾನ್ ಸ್ಪರ್ಧೆಗಳು ನಡೆಯಲಿವೆ.
ವಯಸ್ಸಿನ ಮಿತಿ ಮತ್ತು ಅರ್ಹತೆ: ೧೪ ವರ್ಷದೊಳಗಿನ ವಿಭಾಗದಲ್ಲಿ ಭಾಗವಹಿಸುವ ಬಾಲಕ ಮತ್ತು ಬಾಲಕಿಯರು ೧೭-೧೧-೨೦೧೨ರಿಂದ ೧೬-೧೧-೨೦೧೪ರ ನಡುವೆ ಜನಿಸಿರಬೇಕು. ೧೬ ವರ್ಷದೊಳಗಿನ ವಿಭಾಗದಲ್ಲಿ ಭಾಗವಹಿಸುವವರು ೧೭-೧೧-೨೦೧೦ರಿಂದ ೧೬-೧೧-೨೦೧೨ರ ನಡುವೆ ಜನಿಸಿರಬೇಕು. ವಯಸ್ಸಿನ ಪರಿಶೀಲನೆಗಾಗಿ ಕ್ರೀಡಾಪಟುಗಳು ಮೂಲ ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕು.
ಎಎಫ್ಐ ಯುಐಡಿ ನೋಂದಣಿ ಕಡ್ಡಾಯ: ರಾಷ್ಟ್ರೀಯ ಮಟ್ಟದ ನಿಡ್ಜಮ್-೨೦೨೬ ಸ್ಪರ್ಧೆಯಲ್ಲಿ ಭಾಗವಹಿಸಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಯುಐಡಿ ನೋಂದಣಿ ಕಡ್ಡಾಯವಾಗಿದೆ. ಆದ್ದರಿಂದ ಆಯ್ಕೆ ಟ್ರಯಲ್ಸ್ಗೂ ಮುನ್ನವೇ ಕ್ರೀಡಾಪಟುಗಳು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಯುಐಡಿ ಇಲ್ಲದವರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಹಾಗೂ ಪ್ರಮಾಣಪತ್ರ ಪಡೆಯಬಹುದಾದರೂ, ಯುಐಡಿ ಇಲ್ಲದೆ ರಾಷ್ಟ್ರೀಯ ಮಟ್ಟದ ನಿಡ್ಜಮ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ. ಯುಐಡಿ ನೋಂದಣಿಗಾಗಿ ತಿತಿತಿ.iಟಿಜiಚಿಟಿಚಿಣhಟeಣiಛಿs.iಟಿ ಜಾಲತಾಣವನ್ನು ಸಂಪರ್ಕಿಸಬಹುದು.
ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸಿ ತಮ್ಮ ಅಥ್ಲೆಟಿಕ್ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಅಸೋಸಿಯೇಷನ್ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ೯೮೮೦೮೮೮೩೯೦ ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಎಂದು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















