Home ಜಿಲ್ಲೆ ಕಲಬುರಗಿ ಪ್ರತಿಯೊಬ್ಬರು ಅಯೋಡಿನಯುಕ್ತ ಆಹಾರ ಸೇವಿಸಿ

ಪ್ರತಿಯೊಬ್ಬರು ಅಯೋಡಿನಯುಕ್ತ ಆಹಾರ ಸೇವಿಸಿ

ಕಲಬುರಗಿ: ಗಂಟಲಿಗೆ ಸಂಬAಧಿಸಿದAತೆ ಉಂಟಾಗುವ ಗಳಗಂಡ, ಥೈರಾಯಿಡ್ ಅಂತಹ ಸಮಸ್ಯೆಗಳು ಬರದಂತೆ ತಡೆಯಲು, ಪ್ರತಿಯೊಬ್ಬರು ಅಯೋಡಿನಭರಿತ ಉಪ್ಪು, ಸಮುದ್ರ ಆಹಾರಗಳು, ಮೊಟ್ಟೆಯಂತಹ ಆಹಾರ ಸೇವಿಸುವದು ತುಂಬಾ ಅವಶ್ಯಕವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ
ಸಹಯೋಗದೊಂದಿಗೆ ಜರುಗಿದ ‘ವಿಶ್ವ ಅಯೋಡಿನ್ ಕೊರತೆ ನಿವಾರಣೆ ದಿನಾಚರಣೆ’ಯಲ್ಲಿ ಜಾಗೃತಿ ಕರ ಪತ್ರಗಳನ್ನು ವಿತರಿಸಿ ನಂತರ ಅವರು ಮಾತನಾಡುತ್ತಿದ್ದರು.
ಮುಖ ಊದಿಕೊಳ್ಳುವುದು, ಬೇಗನೆ ಆಯಾಸವಾಗುವದು, ಮಲ ವಿಸರ್ಜನೆಯ ಸಮಸ್ಯೆ, ಒಣಗಿದ ಚರ್ಮ, ಗರ್ಭಪಾತದ ಸಂಭವ, ಮಾನಸಿಕ ಬೆಳವಣಿಗೆಯ ನ್ಯೂನತೆ, ಅನಿಯಮಿತವಾಗಿ ತೂಕ ಹೆಚ್ಚಳವಾಗುವಂತಹದ್ದು, ಅಯೋಡಿನ ಕೊರತೆಯ ಸಾಮಾನ್ಯ ಲಕ್ಷಣಗಳಾಗಿವೆ. ಆದ್ದರಿಂದ ಸಾಮಾನ್ಯರು ಪ್ರತಿದಿನ ೧೫೦ ಮೈಕ್ರೋ ಗ್ರಾಮ್ಸ್, ಗರ್ಭೀಣಿಯರು ೨೦೦ ಮೈಕ್ರೋ ಗ್ರಾಮ್ಸ್
ಅಯೋಡಿನಯುಕ್ತ ಆಹಾರ ಸೇವೆನೆಯನ್ನು ಕಡ್ಡಾಯವಾಗಿ ಮಾಡುವ ಮೂಲಕ, ಇಂತಹ ಸಮಸ್ಯೆಗಳಿಂದ ಮುಕ್ತವಾಗಿರಬಹುದಾಗಿದೆ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಶ್ರೀದೇವಿ, ನಾಗೇಶ್ವರಿ ಮುಗಳಿವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.