
ಮಾಲೂರು ಜೂ.೨೬:ಕಂಪನಿಯು ಹಲವಾರು ವರ್ಷಗಳಿಂದ ಉತ್ಪಾದನೆ ಜೊತೆಗೆ ಕಾರ್ಮಿಕರ ಸುರಕ್ಷತೆ ಹಾಗೂ ಕಾರ್ಮಿಕ ಇಲಾಖೆಯು ನಿಯಮಾನುಸಾರ ಕಾರ್ಮಿಕರಿಗೆ ಸವಲತ್ತುಗಳನ್ನು ನೀಡುವುದರ ಜೊತೆಗೆ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಕ್ಲೋರೈಡ್ ಮೆಟಲ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥ ಪ್ರದ್ಯುತ್ ದಾಸ್ ಹೇಳಿದರು.
ತಾಲೂಕಿನ ಮಾಲೂರು ಹೊಸೂರು ರಸ್ತೆಯ ಸೀತನಾಯಕನಹಳ್ಳಿ ಸಮೀಪ ಇರುವ ಕ್ಲೋರೈಡ್ ಮೆಟಲ್ ಲಿಮಿಟೆಡ್ ಮಾಲೂರು ಘಟಕದಿಂದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಸುಮಾರು ೫ ಲಕ್ಷ ಬೆಲೆಬಾಳುವ ಆಪರೇಷನ್ ಥಿಯೇಟರ್‌ನ ಎಲೆಕ್ಟ್ರಿಕ್ ಆರ್ಥೋ ಟೇಬಲ್, ವೀಲ್‌ಚೇರ್‌ಗಳು, ರೋಗಿಯ ಶಿಫ್ಟಿಂಗ್ ಸ್ಟ್ರಕ್ಚರ್ ವಿತರಿಸಿ ಮಾತನಾಡಿದರು.
ಕಂಪನಿಯು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಸಮವಸ್ತ್ರ ಮುಂಬರುವ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಳ್ಳಲಾಗುವುದು.ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮನವಿ ಮೇರೆಗೆ ರೋಗಿಗಳ ಅನುಕೂಲಕ್ಕಾಗಿ ಸಿಎಸ್‌ಆರ್ ಅನುದಾನದಲ್ಲಿ ಸುಮಾರು ೫ ಲಕ್ಷ ವೆಚ್ಚದಲ್ಲಿ ಸ್ಟ್ರಕ್ಟರ್ ಹಾಗೂ ವಿಲ್‌ಚೆರ್ ಗಳನ್ನು ವಿತರಿಸಲಾಗಿದೆ.ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಈ ಸಲಕರಣೆಗಳನ್ನು ರೋಗಿಗಳ ಅನುಕೂಲಕ್ಕೆ ಬಳಸಿಕೊಳ್ಳುವಂತೆ ತಿಳಿಸಿದರು.
ಆಪರೇಷನ್ ಥಿಯೇಟರ್‌ನ ಎಲೆಕ್ಟ್ರಿಕ್ ಆರ್ಥೋ ಟೇಬಲ್, ವೀಲ್‌ಚೇರ್‌ಗಳು, ರೋಗಿಯ ಶಿಫ್ಟಿಂಗ್ ಸ್ಟ್ರಕ್ಚರ್, ವಿತರಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ವೈದ್ಯರುಗಳಾದ ಮಧುಸೂದನ್, ವೆಂಕಟರೆಡ್ಡಿ, ಕಂಪನಿಯ ಎಚ್.ಆರ್ ಅಂಬುಜ ಶ್ರೀ ವಾತ್ಸವ, ಮುತ್ತು ಅರಸನ್, ಮುಖಂಡ ರಮೇಶ್ ಬಾಬು, ಇನ್ನಿತರರು ಹಾಜರಿದ್ದರು.























