
ಕಲಬುರಗಿ:ಜೂ.26: ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಮಾನವನ ಜೀವದ ಸುರಕ್ಷತೆ ಕಾಪಾಡಲು ಸೂಕ್ಷ್ಮಜೀವÀ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳು ಸಹಕಾರಿಯಾಗಿವೆ. ಭವಿಷ್ಯದ ನಾಳೆಗಾಗಿ ಆರೋಗ್ಯಕರ ಪ್ರಪಂಚವನ್ನು ರೂಪಿಸಲು ಕೃಷಿ, ಪರಿಸರ, ವೈದ್ಯಕೀಯ, ಕೈಗಾರಿಕೆ ಮತ್ತು ಔಷಧ ಕ್ಷೇತ್ರಗಳ ಸಂಶೊಧನೆಗಳು ಜೀವ ಸಂಕುಲಗಳ ರಕ್ಷಣೆಗೆ ನೆರವಾಗಲಿವೆ ಎಂದು ಆಂಧ್ರಪ್ರದೇಶದ ಶಾಸಕ ಹಾಗೂ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಅಲುಮ್ನಿ ಗದ್ದೆ ರಾಮಮೋಹನ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಪ್ಯಾಶ್ಚರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಸುವರ್ಣ ಮಹೋತ್ಸವ ವμರ್Áಚರಣೆ ಮತ್ತು ‘ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ’ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕೋವಿಡ್ ನಂತಹ ವಿಷಮ ಸ್ಥಿತಿಯ ಸಂದರ್ಭಗಳಲ್ಲಿ ಜಾಗತಿಕ ಆರೋಗ್ಯ ರಕ್ಷಣೆ ಸೂಕ್ಷ್ಮಜೀವ ವಿಜ್ಞಾನ, ಆಧುನಿಕ ತಂತ್ರಜ್ಞಾನ, ಸೋಂಕು ನಿಯಂತ್ರಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಜೀವ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು. ಮುಂದಿನ ಪೀಳಿಗೆಯ ಭವಿಷ್ಯ ಮತ್ತು ಆರೋಗ್ಯಕ್ಕಾಗಿ ರೋಗಗಳ ಸೋಂಕಿನ ಅರಿವು, ರೋಗದ ಮುನ್ನೆಚ್ಚರಿಕೆ, ರೋಗ ನಿಯಂತ್ರಣ, ಅಗತ್ಯ ಲಸಿಕೆ, ಪ್ರತಿರೋಧಕ ಔಷಧಗಳು ಮತ್ತು ಚಿಕಿತ್ಸೆ ಸುಧಾರಣೆ ಬಗ್ಗೆ ಮುಂಜಾಗ್ರತೆ ವಹಿಸುವುದು ಅμÉ್ಟೀ ಮುಖ್ಯ. ತಂತ್ರಜ್ಞಾನ ಬೆಳದಂತೆ ವೈದ್ಯ ವಿಜ್ಞಾನದ ಮುಂದೆ ಹಲವು ಸವಾಲುಗಳು ಎದುರಾಗುತ್ತಿವೆ. ಆದರಿಂದ ಸೂಕ್ಷ್ಮಜೀವಶಾಸ್ತ್ರ ಮತ್ತು ಮುಂದುವರಿದ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿ ಮತ್ತು ಪ್ರಯೋಗಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ ಎಸ್. ಉಡಿಕೇರಿ ಮುಖ್ಯ ಅತಿಥಿಯಾಗಿ ಮಾತನಾಡಿ ಸುವರ್ಣ ಮಹೋತ್ಸವ ಮತ್ತು ಸಮ್ಮೇಳನ ಆಯೋಜನೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸ್ನೇಹ ಮತ್ತು ಬಾಂಧವ್ಯ ಬೆಸೆಯುವ ಕಾರ್ಯಕ್ರಮ. ವಿಭಾಗ ಆರಂಭದಿಂದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಬೋಧನೆ ಕಡೆಗೆ ಸೆಳೆದು ಉತ್ತಮ ಪ್ರತಿಭೆಗಳನ್ನಾಗಿ ರೂಪಿಸಿದ್ದಾರೆ. ವಿಭಾಗದ ಉನ್ನತ ಸಾಧನೆಯಿಂದ ಈ ಸಮ್ಮೇಳನ ಜರುಗುತ್ತಿದೆ. ಇದರ ಭಾಗವಾಗಿ ಸೂಕ್ಷ್ಮ ಜೀವ ಮತ್ತು ಮಾನವನ ಅಂಗಗಳ ಸುರಕ್ಷತೆ, ಔಸಧೋಪಚಾರ, ವೈರಸ್‍ಗಳ ನಿಯಂತ್ರಣ, ಕೃಷಿ ಮತ್ತು ಕೈಗಾರಿಕೆಗಳ ಪ್ರಗತಿಯಲ್ಲಿ ನೂತನ ತಂತ್ರಜ್ಞಾನ ಬಹು ಉಪಯೋಗಕರವಾಗಿದೆ. ದಿನದಿಂದ ದಿನಕ್ಕೆ ಜನರಲ್ಲಿ ಆರೋಗ್ಯ ಕಾಳಜಿ, ಉತ್ತಮ ಆಹಾರ ಸೇವನೆ ಮತ್ತು ಸಾವಯವ ಪದಾರ್ಥಗಳ ಬಳಕೆ ಬಗ್ಗೆ ಅರಿವು ಮೂಡುತ್ತಿದೆ. ಸೋಂಕುಗಳ ಬಗ್ಗೆ ಎಚ್ಚರಿಕೆ ಮತ್ತು ಆರಾಮದಾಯಕ ಜೀವನ ಕಂಡುಕೊಳ್ಳಲು ಸೂಕ್ಷ್ಮ ವಿಜ್ಞಾನದಲ್ಲಿನ ಆಧುನಿಕ ಶೋಧನೆಗಳಿಂದ ಸಾಧ್ಯವಾಗಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ದಯಾನಂದ ಅಗಸರ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಾನವ ಜೀವರಕ್ಷಣೆ ಮತ್ತು ಭವಿಷ್ಯದ ನಾಳೆಗಾಗಿ ಆಲೋಚಿಸುವ ಅಗತ್ಯವಿದೆ. ಆಧುನಿಕತೆಯ ಜೀವನ ಶೈಲಿಯಿಂದ ಜೀವ ಸಂಕುಲವನ್ನು ಅನೇಕ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಜನಸಾಮಾನ್ಯರನ್ನು ಬಾದಿಸುತ್ತಿವೆ. ಅವುಗಳ ಉಪಕ್ರಮ ಮತ್ತು ಪರಿಹಾರಕ್ಕೆ ಒತ್ತು ನೀಡಬೇಕು. ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಏಳಿಗೆಗೆ ಶ್ರಮಿಸಿರುವ ಎಲ್ಲಾ ಪ್ರಾಧ್ಯಾಪಕರನ್ನು ನಾವಿಂದು ಸ್ಮರಿಸಿಕೊಳ್ಳಬೇಕು. ಅಲ್ಲದೆ, ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸೂಕ್ಷ್ಮಜೀವ ಶಾಸ್ತ್ರಜ್ಞರ ಕೊಡುಗೆ ಕೂಡ ಅಪಾರವಾಗಿದೆ. ಅವರೆಲ್ಲರನ್ನೂ ನಾವಿಂದು ಅಭಿಮಾನದಿಂದ ನೆನಪಿಸಿಕೊಳ್ಳಬೇಕಿದೆ ಎಂದರು.
ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಪೆÇ್ರ. ಎಂ.ಬಿ. ಸುಲೋಚನಾ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಭಾಗದ ಸುವರ್ಣ ಸಂಭ್ರಮ ಮತ್ತು ಸಮ್ಮೇಳನದಲ್ಲಿ ಭಾವಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆ ಉತ್ಸಾಹ, ಸಂಶೊಧನೆಯಲ್ಲಿನ ಹೊಸ ಪರಿಕಲ್ಪನೆ, ನಾವೀನ್ಯ ಬೆಳವಣಿಗೆ ಮತ್ತು ಇತ್ತೀಚಿನ ತಂತ್ರಜ್ಞಾನದ ಅರಿವಿನ ಗ್ರಹಿಕೆ ಸಾಧ್ಯವಾಗಲಿದೆ. ಅದರ ಭಾಗವಾಗಿ ಸಮ್ಮೇಳನದಲ್ಲಿನ ವಿದ್ವಾಂಸರ ಉಪನ್ಯಾಸಗಳು ವಿದ್ಯಾರ್ಥಿಗಳು ಮತ್ತು ಕಿರಿಯ ಸಂಶೋಧಕರಿಗೆ ಉಪಯುಕ್ತವಾಗಲಿದೆ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪೆÇ್ರ. ಚಂದ್ರಕಾಂತ ಕೆಳಮನಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸೂಕ್ಷ್ಮಜೀವಸಾಶ್ತ್ರ ವಿಭಾಗ ಐವತ್ತು ವರ್ಷಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮತ್ತು ಸಂಶೊಧನೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದೆ. ವಿಭಾಗದ ವಿದ್ಯಾರ್ಥಿಗಳು ದೇಶ ಮತ್ತು ವಿದೇಶಗಳ ಪ್ರಸಿದ್ಧ ಸಂಸ್ಥೆಗಳಲ್ಲಿ ಬೋಧಕರಾಗಿ, ಸಂಶೊಧಕರಾಗಿ, ಕೈಗಾರಿಕೋದ್ಯಮಿಗಳಾಗಿ, ಉದ್ಯಮಿಗಳಾಗಿ, ಔಷಧ ತಯಾರಿಕೆ ಕಂಪನಿಗಳಲ್ಲಿ ವಿಜ್ಞಾನಿಗಳಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ವಿಭಾಗ ಉತ್ಕøಷ್ಟ ಸಂಶೊಧನೆ ಮತ್ತು ಶ್ರೇಷ್ಠ ಪ್ರಕಟಣೆಗಳನ್ನು ತಂದಿದೆ. ಸುವರ್ಣ ಸಂಭ್ರಮಾಚರಣೆಯಲ್ಲಿ ವಿಭಾಗದ ಪ್ರಾಧ್ಯಾಪಕರು, ವಿದ್ವಾಂಸರು, ಸಂಶೋಧಕರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಹೆಮ್ಮೆ ಎನಿಸಿದೆ ಎಂದು ವಿಭಾಗದ ಸಾಧನೆಯ ಮೈಲಿಗಲ್ಲುಗಳನ್ನು ವಿವರಿಸಿದರು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಸಾವಳಗಿ, ಶ್ರೀಮತಿ ಅನುರಾಧ ಗದ್ದೆ, ಕುಲಸಚಿವ ರಮೇಶ್ ಲಂಡನಕರ್, ಸಿಂಡಿಕೇಟ್ ಸದಸ್ಯ ಪೀರಜಾದೆ ಫಹೀಮುದ್ದೀನ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ. ಲಿಂಗಪ್ಪ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಿದರು, ಡಾ. ಯಶವಂತ ಮೆಂಜಿ, ಹಾಗೂ ಡಾ. ಮಹೇಶ್ ದಿವಟರ್ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸೂಕ್ಷ್ಮಜೀವಶಾಸ್ತ್ರ ಹಾಗೂ ಜೀವವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ರಾಷ್ಟ್ರೀಯಗೀತೆ ಮತ್ತು ನಾಡಗೀತೆ ಹಾಡಿದರು. ನರ್ಮದಾ ತಳ್ಳೋಳ್ಳಿ ವಂದಿಸಿದರು. ಹುಜ್ಮಾ ಮತ್ತು ಹುಸ್ನಾ ಕಾರ್ಯಕ್ರಮ ನಿರ್ವಹಿಸಿದರು.





















