Home ಜಿಲ್ಲೆ ಬೆಂಗಳೂರು ಮಹಿಳೆಯರಿಗೆ ಹೂಲಿಗೆ ಯಂತ್ರ ವಿತರಣೆ

ಮಹಿಳೆಯರಿಗೆ ಹೂಲಿಗೆ ಯಂತ್ರ ವಿತರಣೆ

ಭಾಗ್ಯನಗರ,ಸೆ.೮:ಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನಾ ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ,ಕಾರ್ಮಿಕ ಇಲಾಖೆ, ವಿಕಲ ಚೇತನರ ಕಲ್ಯಾಣ ಇಲಾಖೆಯಿಂದ ವಿವಿಧ ಸಲಕರಣೆಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಣೆ ಮಾಡಿದರು.


ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೮೦ ಹೊಲಿಗೆ ಯಂತ್ರಗಳನ್ನು ಮತ್ತು ೮೦ ಸುಧಾರಿತ ಉಪಕರಣಗಳನ್ನು ವೃತ್ತಿನಿರತ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.


ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದ ಈ ಪ್ರಜಾಸೇವಾ ಆಂದೋಲನ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಮುಕೂಂದ,ತಹಶೀಲ್ದಾರರ್ ಮನೀಷ ಎನ್ ಪತ್ರಿ, ತಾ.ಪಂ.ಇ.ಓ ನಾಗ ಮಣಿ , ಕೈಗಾರಿಕಾ ವಿಸ್ತರಣಾಧಿಕಾರಿ ಎ.ಮಹಬುಭಾಷಾ (ಬಾಬು) ಮತ್ತಿತರರು ಹಾಜರಿದ್ದರು.