Home ಜಿಲ್ಲೆ ಬೆಂಗಳೂರು ಅಂಗನವಾಡಿ ಶಾಲೆಗಳಿಗೆ ದಿನಸಿ ಕಿಟ್ ವಿತರಣೆ

ಅಂಗನವಾಡಿ ಶಾಲೆಗಳಿಗೆ ದಿನಸಿ ಕಿಟ್ ವಿತರಣೆ

ಕೆ.ಆರ್.ಪುರ, ಜು.೩- ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬ್ಯಾಗ್, ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಬಿಜೆಪಿ ಮುಖಂಡ ನಲ್ಲೂರಹಳ್ಳಿ ಡಿ. ಕೆ.ಚಂದ್ರಶೇಖರ್ ರೆಡ್ಡಿ ಅವರು ವಿತರಣೆ ಮಾಡಿದರು.


ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ವಾರ್ಡ್‌ನ ಅಂಗನವಾಡಿ ಶಾಲೆಗಳಿಗೆ ಜಮ್ಕಾನಾ ಮತ್ತು ಆಟೋ ಚಾಲಕರಿಗೆ ದಿನಸಿ ಕಿಟ್ ಹಾಗೂ ಸಮವಸ್ತ್ರವನ್ನು ವಿತರಿಸಿ ಮಾತನಾಡಿದರು.


ಕುಂದಲಹಳ್ಳಿ ವಾರ್ಡ್ ನ ಸಿದ್ದಾಪುರ, ತೂಬರಹಳ್ಳಿ, ಕುಂದಲಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸಲಾಯಿತು. ನಲ್ಲೂರಹಳ್ಳಿ ಯ ನೂರಕ್ಕೂ ಅಧಿಕ ಆಟೋ ಚಾಲಕರಿಗೆ ದಿನಸಿ ಕಿಟ್ಟ್ ಹಾಗೂ ಸಮವಸ್ತ್ರ ನೀಡಿದರು.


ಬಡವರಿಗೆ ಸಹಾಯವಾಗುವ ರೀತಿಯಲ್ಲಿ ಸೇವಾ ಮನೋಭಾವದಿಂದ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿರವರ ಮಾರ್ಗದರ್ಶನದಂತೆ ಹುಟ್ಟುಹಬ್ಬವನ್ನು ಸೇವಾದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ರಾಜಶೇಖರ್ ರೆಡ್ಡಿ, ಮೋನಿಷ್, ನಂದೀಶ್, ಎಲ್ಲಾರೆಡ್ಡಿ, ಹರೀಶ್ ರೆಡ್ಡಿ, ವೆಂಕಟೇಶ್ ರೆಡ್ಡಿ, ವೇಣು, ಕೇಶವ್, ಸಿದ್ದಾಪುರ ರವಿ, ಎಂಪಿ ಶ್ರೀನಿವಾಸ್, ಆಟೋ ಶ್ರೀನಿವಾಸ್, ಸುರೇಶ್ ಸೇರಿದಂತೆ ಗ್ರಾಮಗಳ ಮುಖಂಡರು ಇದ್ದರು.