Home ಜಿಲ್ಲೆ ಬೆಂಗಳೂರು ಕಸ ನಿರ್ವಹಣೆ ಘಟಕ ಸ್ಥಳಾಂತರ ಮಾಡುವಂತೆ ನಾಗರೀಕರ ಆಕ್ರೋಶ

ಕಸ ನಿರ್ವಹಣೆ ಘಟಕ ಸ್ಥಳಾಂತರ ಮಾಡುವಂತೆ ನಾಗರೀಕರ ಆಕ್ರೋಶ

ಕೆಂಗೇರಿ, ಜೂ. ೧೫: ಶಿವನಪಾಳ್ಯ ವಾರ್ಡ್ ಬಿಜೆಪಿ ಅಧ್ಯಕ್ಷ ಆರ್.ಸತ್ಯನಾರಾಯಣ ಮಾತನಾಡಿ ಶಿವನಪಾಳ್ಯ,ಶಿರ್ಕೆ,ಜ್ಞಾನಭಾರತಿ ಬಡಾವಣೆ ವ್ಯಾಪ್ತಿಯಲ್ಲಿ ಬಡವರು, ಕೂಲಿಕಾರ್ಮಿಕರು,ಮಧ್ಯಮ ವರ್ಗದವರು ವಾಸ ಮಾಡುತ್ತಿದ್ದು,ಕೊಳೆತ ಹಸಿಕಸದಿಂದ ಬರುವ ಕೆಟ್ಟ ವಾಸನೆ,ನೊಣ,ಸೊಳ್ಳೆ ಹಾವಳಿಯಿಂದ ಕೆಮ್ಮು,ಜ್ವರ,ಅಸ್ತಮಾ,ಕ್ಷಯ,ಉಸಿರಾಟದ ಸಮಸ್ಯೆಯಿಂದ ನಿತ್ಯ ಖಾಸಗಿ ಆಸ್ಪತ್ರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ,ಪದೇ ಪದೇ ಕಾಯಿಲೆಗೆ ತುತ್ತಾಗುತ್ತಿದ್ದು,ಸರ್ಕಾರ,ಜಿಬಿಎ ತುರ್ತಾಗಿ ಇಲ್ಲಿನ ಸಮಸ್ಯೆ ಬಗೆಹರಿಸಿ ಬೇರೆಡೆ ಸ್ಥಳಾಂತರ ಮಾಡಿ ಸ್ಥಳೀಯರ ಆರೋಗ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.


:ಶಿವನಪಾಳ್ಯ ಮುಖ್ಯರಸ್ತೆಯಲ್ಲಿ ಕಸ ನಿರ್ವಹಣೆ ಘಟಕದಲ್ಲಿ ಸರಿಯಾಗಿ ಕಸ ನಿರ್ವಹಣೆ ಮಾಡದೆ ಹಸಿಕಸ ಕೊಳೆತು ಬಾರಿ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ಜೀವನ ಸಾಗಿಸಲು ದುಸ್ಥರವಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಬೆಂಗಳೂರು ಪಶ್ಚಿಮನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ಶಿವನಪಾಳ್ಯ,ನೇತಾಜಿ ಬಡಾವಣೆ (ಶಿರ್ಕೆ),ಜ್ಞಾನಭಾರತಿ ಬಡಾವಣೆ ನಿವಾಸಿಗಳು ಕಸ ವಿಂಗಡನೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಜಿಬಿಎ ಘನತ್ಯಾಜ್ಯ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಅವರು ಹಸಿ ಮತ್ತು ಒಣಕಸವನ್ನು ಪ್ರತಿನಿತ್ಯ ಸರಿಯಾಗಿ ವಿಂಗಡಿಸಿ,ವಿಲೇವಾರಿ ಮಾಡದೆ ಹಸಿಕಸ ದೊಡ್ಡಮಟ್ಟದಲ್ಲಿ ಸಂಗ್ರಹವಾಗಿ ಕೊಳೆತು ದುರ್ವಾಸನೆಯಿಂದ ಗಾಳಿ ಬೀಸಿದಾಗ ಬರುವ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ.ಈ ಬಗ್ಗೆ ಘನತ್ಯಾಜ್ಯ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್,ಗುತ್ತಿಗೆದಾರರಿಗೆ ಅನೇಕ ಬಾರಿ ಗಮನಕ್ಕೂ ತಂದರು ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಮಹಿಳೆಯರು ಜಿಬಿಎ ವಿರುದ್ದ ವಾಗ್ದಾಳಿ ನಡೆಸಿದರು.


ಪ್ರತಿನಿತ್ಯ ಸಂಗ್ರಹಿಸುವ ಹಸಿಕಸವನ್ನು ಬೇರೆಡೆ ಸ್ಥಳಾಂತರ ಮಾಡದ ಕಾರಣ ಕೊಳೆತು ದುರ್ವಾಸನೆ, ಸೊಳ್ಳೆ,ನೊಣ ಹಾವಳಿ ವಿಪರೀತವಾಗಿದೆ.ಸಂಜೆ,ಮುಂಜಾನೆ ನೊಣ ಸೊಳ್ಳೆ ಕಾಟ ಹೇಳತೀರದಾಗಿದೆ.ಇದರಿಂದ ವೃದ್ದರು, ಮಕ್ಕಳು, ವಯಸ್ಸಿನ ಭೇದ-ಭಾವವಿಲ್ಲದೆ ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ ಎಂದರು.


ಬಿಜೆಪಿ ಮುಖಂಡ ದುಬಾಸಿಪಾಳ್ಯ ಕೆ.ರಾಮು ಮಾತನಾಡಿ ಒಣ,ಹಸಿ ಕಸವನ್ನು ವಿಂಗಡಣೆ ಮಾಡುವ ಜವಾಬ್ದಾರಿ ಘನತ್ಯಾಜ್ಯ, ಗುತ್ತಿಗೆದಾರರಾಗಿದ್ದರೂ, ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.ನಾಗರೀಕರ ಮೇಲೆ ಕೆಟ್ಟ ಪರಿಣಾಮ ಹೇಳತೀರದಾಗಿದ್ದು, ಇಲ್ಲಿಂದ ಘಟಕವನ್ನು ತೆರವುಗೊಳಿಸದಿದ್ದರೆ,ಎಲ್ಲ ಬಡಾವಣೆಯ ನಿವಾಸಿಗಳು ಹಗಲು-ರಾತ್ರಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ನಾಗರೀಕರಾದ ಎನ್.ಶಶಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ತಾರಾ ಮಾತನಾಡಿ ಎಂದು ಸ್ವಚ್ಚನಗರ ಸುಂದರ,ಆರೋಗ್ಯ ಎಂದು ನಮ್ಮನಾಳುವ ಸರ್ಕಾರ,ಜಿಬಿಎ ಅಧಿಕಾರಿಗಳು ಹೇಳುತ್ತಾರೆ.ಆದರೆ ಸ್ವಚ್ಛತೆ,ಆರೋಗ್ಯ ಕನಸಿನ ಮಾತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಘನತಾಜ್ಯ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹಲವಾರು ವರ್ಷಗಳಿಂದ ಎರಡೆರಡು ಇಲಾಖೆ ನಿಭಾಯಿಸುತ್ತಿದ್ದು ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ


ನಗರಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಅನಿಲ್‌ಚಳಗೇರಿ,ಬಿಬಿಎಂಪಿ ಮಾಜಿ ಸದಸ್ಯ ಸತ್ಯನಾರಾಯಣ, ಯುವ ಮೋರ್ಚಾ ಅಧ್ಯಕ್ಷ ಶಿವನಪಾಳ್ಯ ನಾಗರಾಜು.ಎಂ , ಬೆಂಗಳೂರು ನಗರ ಜಿಲ್ಲಾ ಹಿಂದುಳಿದ ವಿಭಾಗದ ಕಾರ್ಯದರ್ಶಿ ಆಶಾ ಲೋಹಿತ್, ಮೇತಾ,ಶಿವನಪಾಳ್ಯ ವಾರ್ಡ್ ಬಿಜೆಪಿ ಪ್ರಧಾನಕಾರ್ಯದರ್ಶಿ ತಾರಾ, ಸಂತೋಷ, ಬಿ.ಎಸ್.ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.