
ಸಂಜೆವಾಣಿ ವಾರ್ತ
ಹುಮನಾಬಾದ್ : ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ಸಂಘಟನೆಯ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ಕಾರ್ಮಿಕರು ಬಿ.ಎಸ್.ಎಸ್.ಕೆ ಹರಾಜು ಪ್ರಕ್ರಿಯೆ ಕುರಿತು ಮಾಜಿ ಸಚಿವ ರಾಜಶೇಖರ ಪಾಟೀಲ್ ಜತೆಗೆ ಚರ್ಚಿಸಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಬೀದರ್ ಸಹಕಾರ ಸಕ್ಕರೆ ಕಾರಖಾನೆ ಪುನಶ್ಚೇತನಕ್ಕಾಗಿ ಸೆ. ೨೧ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ರೈತ ಮುಖಂಡರು ಹಾಗೂ ಬಿ.ಎಸ್.ಎಸ್.ಕೆ ಕಾರ್ಮಿಕರು ಜತೆಗೂಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸೌದಿ ರವರ ಹತ್ತಿರ ನಿಯೋಗ ಕೊಂಡೊಯ್ದು ಬೀದರ ಸಹಕಾರ ಸಕ್ಕರೆ ಕಾರಖಾನೆ ಪುನಶ್ಚೇತನಕ್ಕೆ ಒತ್ತಾಯಿಸಿ, ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ರೈತ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಿಎ???ಸ್ಕೆಕಾರ್ಮಿಕರಾದ ಅರ್ಜುನ್ ತಮಗಿಕರ್, ಗುರುಲಿಂಗಯ್ಯ ಹಾಲಾ, ಝರ್ನಾರೆಡ್ಡಿ, ರಾಜು ಪಾಟೀಲ್, ಮಲ್ಲಿಕಾರ್ಜುನ್ ಭಂಡಾರಿ, ಶಿವಕುಮಾರ ಚಳಕಾಪೂರೆ, ಝರನು ಕಾವಲೆ, ಜಾನ್ಸನ್ ಸೇರಿ ಅನೇಕರಿದ್ದರು.



























