Home ಜಿಲ್ಲೆ ವಿಕಲಚೇತನರು ದುರ್ಬಲರಲ್ಲ-ಸಬಲರು: ಡಾ.ನೀಲಾಂಬಿಕಾ

ವಿಕಲಚೇತನರು ದುರ್ಬಲರಲ್ಲ-ಸಬಲರು: ಡಾ.ನೀಲಾಂಬಿಕಾ

ಗುರುಮಠಕಲ್,ಜು.30-ವಿಕಲಚೇತನರು ದುರ್ಬಲರಲ್ಲ-ಸಬಲರು ಎಂದು ಸಮುದಾಯ ಆರೋಗ್ಯಾಧಿಕಾರಿ ಡಾ.ನೀಲಾಂಬಿಕಾ ಹೇಳಿದರು.
ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ.ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯ ವತಿಯಿಂದ ವಿಕಲಚೇತನರು ಬಳಸುವ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಆರೋಗ್ಯಧಿಕಾರಿಗಳು ವಿಕಲಚೇತನರು ದುರ್ಬಲರಲ್ಲ, ಅವರು ಸಬಲರು ಅವರಿಗೆ ತಮ್ಮದೆ ಆದ ವಿಶೇಷ ಸಾಮಥ್ರ್ಯವಿರುತ್ತದೆ, ಅದನ್ನವರು ಬಳಸಿಕೊಂಡು ಸಮಾಜದ ಮುಖವಾಗಿ ಬರಬೇಕು ಹಾಗೂ ಸಮಾಜವು ಅವರನ್ನು ಗೌರವಹಿತವಾಗಿ ಕಾಣುವಂತೆ ಮಾಡಬೇಕಾಗಿರೋದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಎಲ್ಲಾ ರಂಗಗಳಲ್ಲೂ ತಮ್ಮ ಸಾಮಥ್ರ್ಯವನ್ನು ತೋರ್ಪಡಿಸುತ್ತಿದ್ದಾರೆ. ಅಂತವರು ನಮಗೆ ಸ್ಪೂರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಎಪಿಡಿ ಸಂಸ್ಥೆಯು ಗಡಿಭಾಗದ ಗುರುಮಠಕಲ್ ತಾಲೂಕಿನಾದ್ಯಂತ ವಿಕಲಚೇತನ ಆರೋಗ್ಯ,ಶಿಕ್ಷಣ, ಜೀವನೋಪಾಯ, ಸಮಾಜೀಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಇಂತಹ ಕಾರ್ಯಗಳು ಶ್ಲಾಘನೀಯ ಈ ನಿಟ್ಟಿನಲ್ಲಿ ಸಂಸ್ಥೆಯು ಇದೆ ರೀತಿಯಾಗಿ ಮುಂಬರುವ ದಿನಗಳಲ್ಲಿಯೂ ಇಂತಹ ಕಾರ್ಯಗಳು ಸದಾಕಾಲವೂ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಈ ಒಂದು ಸಂದರ್ಭದಲ್ಲಿ ಸಂಸ್ಥೆಯು ನಡೆಯು, ನಡೆದು ಬಂದ ಇತಿಹಾಸ ಹಾಗೂ ಕಳೆದ 4 ವರ್ಷಗಳಿಂದ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ.
ಉದಾಹರಣೆಗೆ ಫೀಜೊಯೊಥೆರಪಿ, ಅಂಗವಿಕಲವನ್ನು ಶೀರ್ಘ ಪತ್ತೆಹಚ್ಚುವಿಕೆ, ಸಮನ್ವಯ ಶಿಕ್ಷಣ, ಉದ್ಯೋಗವಕಾಶಗಳು, ಸ್ವ ಉದ್ಯೋಗ ಕೈಗೊಳ್ಳುಲು ಸೀಡ್ ಫಂಡ್, ಅನೇಕ ರೀತಿಯ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.ಇದರೊಂದಿಗೆ ವಿಕಲಚೇತನರ ಸ್ವ ಸಹಾಯ ಸಂಘಗಳನ್ನು ಪುಷ್ಠಿ ನೀಡುವಂತಹ ಕಾರ್ಯಗಳನ್ನು ಮಾಡುತ್ತ ಬಂದಿದೆ.ಇದರೊಂದಿಗೆ ಸರ್ಕಾರ ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಅನೇಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಎಂಬುದರ ಕುರಿತು ತಾಲೂಕ ಸಂಯೋಜಕರಾದ ವಿರುಪಾಕ್ಷಿ ಮಾಲಿ ಪಾಟೀಲ್ ತಿಳಿಸಿದರು. ವಿವಿಧ ಗ್ರಾಮಗಳಿಂದ ಬಂತಹದ ವಿಕಲಚೇತನರಿಗೆ ಅವರ ಅಗತ್ಯಕ್ಕೆಗಳಿಗೆ ತಕ್ಕಂತೆ ಸಿಪಿ ಚೇರ್, ಸ್ಟಾಂಡಿಗ್ ಪ್ರಮ್, ರೋಲೆಟರ್, ಸ್ಟಿಕ್, ವಾಕರ್, ಎಎಫ್‍ಓ, ಗೇಟರ್ಸ್, ಬ್ಲೈಂಟ್ ಸ್ಟಿಕ್ , ಸೇರಿದಂತೆ ಒಟ್ಟಾರೆ 46 ವಿಕಲಚೇತನರಿಗೆ ವಿತರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಎಪಿಡಿ ಸಂಸ್ಥೆಯ ತಾಂತ್ರಿಕ ವಿಭಾಗದ ರಷ್ಮಾತಾ, ಸುರೇಶ್, ಸತೀಸ್, ಫಿಜಿಯೋಥೆರಪಿಸ್ಟ್ ಗಳಾದ ಅತೀಶ್ ಕುಮಾರ, ವೆಂಕಟೇಶ್, ಸಮುದಾಯ ಸಂಯೋಜಕರಾದಂತಹ ಅಂಬಿಕಾ, ಶಿಲ್ಪಾ ಎಂ.ಶಿಲ್ಪಾ ಎಸ್, ರೇಷ್ಮಾ, ಸುರೇಶ್ ಅನಿಮೇಟರ್ಸಗಳಾದ ಗೌರಮ್ಮ,ಸವಿತಾ,ಲಕ್ಷೀ,ಯಲ್ಲಪ್ಪ ಸೇರಿದಂತೆ ಅಸ್ಪತ್ರೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.