
ಮುದ್ದೇಬಿಹಾಳ: ವಿಘ್ನಗಳನ್ನು ನಿವಾರಿಸಿ, ಬುದ್ಧಿ-ಸಿದ್ಧಿ ಹಾಗೂ ಸುಖ-ಸಮೃದ್ಧಿಯನ್ನು ಕರುಣಿಸುವ ವಿಘ್ನ ನಿವಾರಕ ಶ್ರೀ ಗಣಪತಿಯ ಆರಾಧನೆಗೆ ಪಟ್ಟಣ ಸಜ್ಜಾಗಿದ್ದು, ಭಕ್ತರು ಭಕ್ತಿ-ಭಾವ ಹಾಗೂ ಸಂಭ್ರಮದೊAದಿಗೆ ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.
ಸೋಮವಾರರಂದು ಗಣೇಶ ಚತುರ್ಥಿಯ ಅಂಗವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಗಣೇಶ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ತಮ್ಮ ತಮ್ಮ ಮನೆಗಳಿಗೆ ಕರೆತಂದ ಭಕ್ತರು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಗಣಪತಿಯನ್ನು ಪ್ರತಿಷ್ಠಾಪಿಸಿದರು.
ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ಸೇರಿದಂತೆ ಕುಟುಂಬದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಗಣಪತಿ ಬಪ್ಪಾ ಮೋರಯಾ ಘೋಷಣೆಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಮನೆಗಳಿಗೆ ಗಣಪತಿಯನ್ನು ಬರಮಾಡಿಕೊಂಡ ಭಕ್ತರು ವಿಶೇಷ ಪೂಜೆ, ಆರತಿ ಹಾಗೂ ಮೋದಕ, ಉಂಡೆಗಳAತ ಪಕ್ವಾನ್ನ ಭೋಜನವನ್ನ ನೈವೇದ್ಯ ಮಾಡಿ ಸಮರ್ಪಿಸಿ ವಿಘ್ನ ನಿವಾರಕನ ಕೃಪೆಗಾಗಿ ಪ್ರಾರ್ಥಿಸಿದರು. ಗಣೇಶನ ಆಗಮನದಿಂದ ಮನೆಗಳಲ್ಲಿ ಆಧ್ಯಾತ್ಮಿಕ ವಾತಾವರಣ ಮೂಡಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿತು.
ಈ ಮೆರವಣಿಗೆಯಲ್ಲಿ ನೇತಾಜಿ ನಲವಡೆ, ಹಣಮಂತ ನಲವಡೆ, ರಾಜಶೇಖರ ಮ್ಯಾಗೇರಿ, ಮಾರುತಿ ನಲವಡೆ, ಯುವರಾಜ ನಲವಡೆ, ಗಜಾನನ ನಲವಡೆ, ರಾಘವೇಂದ್ರ ನಲವಡೆ, ಅಭಿಷೇಕ ನಲವಡೆ, ರೋಹನ್ ನಲವಡೆ, ನಿಖಿಲ್ ನಲವಡೆ, ಆಕಾಶ ನಲವಡೆ, ಗೋಪಾಲ ಸಾಳುಂಕೆ, ಸಮರ್ಥ ನಲವಡೆ, ಅಥರ್ವ ನಲವಡೆ, ರಾಜು ದೆಶಪಾಂಡೆ ಮೊದಲಾದವರು ಪಾಲ್ಗೊಂಡಿದ್ದರು.



























