Home ಜಿಲ್ಲೆ ಬೆಂಗಳೂರು ಗುಣಮಟ್ಟದ ಹಾಲಿನಿಂದ ಸಂಘದ ಅಭಿವೃದ್ಧಿ ಸಾಧ್ಯ- ಕೇಶವರೆಡ್ಡಿ

ಗುಣಮಟ್ಟದ ಹಾಲಿನಿಂದ ಸಂಘದ ಅಭಿವೃದ್ಧಿ ಸಾಧ್ಯ- ಕೇಶವರೆಡ್ಡಿ

ಕೋಲಾರ,ಸೆ,೮- ಹಾಲಿನ ಗುಣಮಟ್ಟ ಕಾಪಾಡಿಕೊಂಡಾಗ ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್‌ಯ ಎಂದು ಅಮ್ಮನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ. ಕೇಶವರೆಡ್ಡಿ ತಿಳಿಸಿದರು


ತಾಲೂಕಿನ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ರತರ ಪ್ರಮುಖ ಆದಾಯದ ಮೂಲವಾಗಿದೆ. ಹಾಲಿಗೆ ನಿಗದಿತ ಬಲೆ ಇರುವುದರಿಂದ ಉತ್ಪಾದಕರು ಗುಣಮಟ್ಟದ ಹಾಲು ನೀಡುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದರು


ಕೋಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಹಲವು ಸೌಲಭ್‌ಯಗಳನ್ನು ಒದಗಿಸಲಾಗುತ್ತಿದ್ದು, ರತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಸಭಯಲ್ಲಿ ಕೋಮುಲ್ ಉಪ ವ್ಯವಸ್ಥಾಪಕ ಅಶ್ವಕ್ ಅಹಮದ್, ವಿಸ್ತರಣಾಧಿಕಾರಿ ನಾಗೇಂದ್ರ, ಸಂಘದ ಉಪಾಧ್‌ಯಕ್ಷ ಸಿ. ಶ್ರೀನಿವಾಸ್, ಕಾರ್ಯದರ್ಶಿ ಬಿ. ಸತ್ಯನಾರಾಯಣ, ಹಾಲು ಪರೀಕ್ಷಕ ಆರ್. ಬಚ್ಚೇಗೌಡ, ಸಹಾಯಕ ವಿ. ಜಗದೀಶ್, ಸುಚಿಗಾರ ಆರ್. ಶ್ರೀನಿವಾಸ್ ಹಾಗೂ ನಿರ್ದೇಶಕರಾದ ಟಿ. ಚಂದ್ರಪ್ಪ, ಕೆ.ಎಂ. ರಾಮಚಂದ್ರಪ್ಪ, ಕೆ. ಸತೀಶ್, ಎಸ್. ನಾಗೇಶ್, ಎ.ಎಲ್. ವೇಣು, ಸಿ. ಕೇಶವ, ಎನ್. ಮುನಿರಾಜು, ಎ.ಎನ್. ಆನಂದ್, ಪದ್ಮಮ್ಮ, ಎಸ್.ಪಿ. ಮಂಜುಳ, ಗ್ರಾಮದ ಹಿರಿಯರಾದ ದೊಡ್ಡಗೌಡ, ಮುನೇಗೌಡ, ಜಯರಾಮರಡ್ಡಿ, ಮುನಿಯಪ್ಪ ಸೇರಿದಂತೆ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಸಭಯಲ್ಲಿ ಭಾಗವಹಿಸಿದ್ದರು.