Home ಜಿಲ್ಲೆ ಬೆಂಗಳೂರು ದೇವರಾಜ್ ಅರಸು – ರಾಜೀವ್ ಗಾಂಧಿ ಜನ್ಮದಿನಾಚರಣೆ

ದೇವರಾಜ್ ಅರಸು – ರಾಜೀವ್ ಗಾಂಧಿ ಜನ್ಮದಿನಾಚರಣೆ

ಚಿಕ್ಕಬಳ್ಳಾಪುರ: ಆ.೨೨– ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿ|| ಡಿ.ದೇವರಾಜ್ ಅರಸು ಮತ್ತು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ನಗರದ ಹೆರಿಗೆ ಮತ್ತು ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ಹಾಗೂ ಬ್ರೆಡ್-ಹಾಲು ವಿತರಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಲಾಯರ್ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.


ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಲಾಯರ್ ನಾರಾಯಣಸ್ವಾಮಿ ಅವರು, ದಿ|| ದೇವರಾಜ್ ಅರಸು ಅವರು ೧೯೧೫ ರಲ್ಲಿ ಜನಿಸಿ, ಹಿಂದುಳಿದ ವರ್ಗದವರಿಗೆ ಧ್ವನಿಯಾದವರು. ಬಡವರು, ರೈತರು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂದು ತಿಳಿಸಿದರು.


ಮುಂದುವರೆದು ಮಾತನಾಡಿದ ಅವರು, ೧೯೪೪ ರಲ್ಲಿ ಜನಿಸಿದ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿ ಯುವಕರಿಗೆ ಮತದಾನದ ಹಕ್ಕನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಇಳಿಸಿದರು, ಹಾಗೂ ದೇಶದಲ್ಲಿ ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಕ್ರಾಂತಿಗೆ ನಾಂದಿ ಹಾಡಿದರು ಎಂದು ತಿಳಿಸಿದರು.


ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನು ತಂದು ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕಾರ್ಯಕ್ರಮವನ್ನು ರೂಪಿಸಿದರು.


ಈ ಸಂದರ್ಭದಲ್ಲಿ ಅಹಿಂದ ಅಧ್ಯಕ್ಷರಾದ ಕಳವಾರ ಶ್ರೀಧರ್, ಕಾಂಗ್ರೆಸ್ ಪಕ್ಷದ ಮಹಿಳಾ ತಾ. ಅಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಮಹಿಳಾ ಮುಖಂಡರಾದ ಉಷಾ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರಾ ನಾರಾಯಣಸ್ವಾಮಿ, ತಾ. ಅಧ್ಯಕ್ಷೆ ಮಂಜುಳಾ, ಗೌರಿಬಿದನೂರು ತಾಲ್ಲೂಕಿನ ಅಧ್ಯಕ್ಷ ಮಂಜುನಾಥ್, ಮಂಚೇನಹಳ್ಳಿ ತಾ. ಅಧ್ಯಕ್ಷ ತಿರುಮಳಪ್ಪ ಸೇರಿದಂತೆ ಇತರ ಪಕ್ಷದ ಮುಖಂಡರು ಇದ್ದರು.