Home ಜಿಲ್ಲೆ ಬೆಂಗಳೂರು ಎಸ್‌ಸಿಎಸ್‌ಟಿ ವರ್ಗಗಳ ಅಭಿವೃದ್ಧಿಗೆ ಹಣ ಬಳಸಲು ಆಗ್ರಹ

ಎಸ್‌ಸಿಎಸ್‌ಟಿ ವರ್ಗಗಳ ಅಭಿವೃದ್ಧಿಗೆ ಹಣ ಬಳಸಲು ಆಗ್ರಹ

ಬೆಂಗಳೂರು,ಸೆ.೭-೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಅಭಿವೃದ್ಧಿಗೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಸುಮಾರು ೪೪ ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಈ ಹಣವನ್ನು ಬೇರೆ ಬಾಬುಗಳಿಗೆ ಬಳಸದೆ ಈ ಸಮುದಾಯದ ಅಭಿವೃದ್ಧಿಗಾಗಿ ಬಳಸಬೇಕೆಂದು ಮತ್ತು ಕೆ.ಐ.ಎ.ಡಿ.ಬಿಯಲ್ಲಿ ೨೪.೧ ರಷ್ಟು ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲು ಎಂಬಂತೆ ಸರ್ಕಾರದ ಎಲ್ಲಾ ೩೪ ಇಲಾಖೆಗಳಲ್ಲಿಯೂ ಸಹಾ ಪರಿಶಿಷ್ಟ ಜಾತಿ/ವರ್ಗದವರಿಗೆ ೨೪.೧ ರಷ್ಟು ಮಿಸಲಾತಿಯನ್ನು ನೀಡಬೇಕೆಂದು ಎಐ ಬಿಸ್ ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


ಈಗಾಗಲೇ ಭಾರತದೇಶಕ್ಕೆ ಸ್ವಾತಂತ್ರ ಬಂದು ೮೦ ವರ್ಷಗಳು ಕಳೆಯುತ್ತಿದ್ದರೂ ಸಹ ಪರಿಶಿಷ್ಟ ಜಾತಿ/ವರ್ಗಗಳು ರಾಜಕೀಯವಾಗಿ ಮಾತ್ರ ಸಬಲರಾಗಿದ್ದಾರೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನೂ ಸಹ ಬಹಳ ಹೀನಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಹ ಅದೇ ಪರಿಸ್ಥಿತಿ ಇದೆ. ಉತ್ತರ ಪ್ರದೇಶ, ಬಿಹಾರ ಬಿಟ್ಟರೆ ಸುಮಾರು ೧೦-೧೫ ವರ್ಷಗಳಿಂದಿಚೆಗೆ ಕರ್ನಾಟಕ ದೌರ್ಜನ್ಯ ನಡೆಯುತ್ತಿರುವುದರಲ್ಲಿ ೨-೩ನೇ ಸ್ಥಾನದಲ್ಲಿ ಇದೆ ಇದನ್ನು ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಹಿಂದಿನ ಗೃಹ ಸಚಿವರಾದ ಪರಮೇಶ್ವರ್‌ರವರು ಒಪ್ಪಿಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಈ ಸಮುದಾಯ ಒಂದಿಷ್ಟು ಗಟ್ಟಿಯಾಗಿ ನಿಲ್ಲಬೇಕಾದರೆ ಆರ್ಥಿಕವಾಗಿ ಸಬಲೀಕರಣರಾಗಬೇಕು. ಸಬಲೀಕರಣರಾದರೆ ಮಾತ್ರ ಸಮಾಜದಲ್ಲಿ ಗೌರವ ಮತ್ತು ಘನತೆ ಸಿಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಈ ಹಿಂದೆ ೨೦೧೩ ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹೊಸ ಕಾಯ್ದೆ ಮಾಡಿ ಈ ಸಮುದಾಯಗಳಿಗೆ ಬಜೆಟ್‌ನಲ್ಲಿ ೨೪.೧ ರಷ್ಟು ಪ್ರತ್ಯೇಕವಾಗಿ ಅನುದಾಯ ಇಟ್ಟು, ಈ ಹಣವನ್ನು ಪರಿಶಿಷ್ಟ ಜಾತಿ/ವರ್ಗದವರ ಅಭಿವೃದ್ಧಿ ಮಾತ್ರ ಬಳಸಬೇಕೆಂದು ಕಾಯ್ದೆ ಮಾಡಿರುತ್ತಾರೆ. ಅಲ್ಲದೆ ಈ ಪರಿಶಿಷ್ಟ ಜಾತಿ/ವರ್ಗಗಳಿಗೆ ಮಿಸಲಿಟ್ಟ ಹಣವನ್ನು ಬೇರೆ ಬಾಬುಗಳಿಗೆ ಬಳಸಿದಂತಹ ಅಧಿಕಾರಿಗಳಿಗೆ ೬ ತಿಂಗಳು ಜೈಲು ಶಿಕ್ಷೆ ಎಂಬಂತೆ ಕಾಯ್ದೆ ಮಾಡಿರುತ್ತಾರೆ.

ಅದೇ ರೀತಿ ಈ ಸಿದ್ಧರಾಮಯ್ಯರವರೇ ೭ಡಿ ಕಾಯ್ದೆ ತಂದು ಈ ಕಾಯ್ದೆಯ ಪ್ರಕಾರ ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಾದ ಅನುದಾಯದ ಹಣವನ್ನು ಬೇರೆ ಬಾಬುಗಳಿಗೆ ಬಳಸುವ ಪರಮಾಧಿಕಾರ ಮುಖ್ಯಮಂತ್ರಿಯವರಿಗೆ ಇರುತ್ತದೆ ಎಂದು ಹೇಳಿ ಶ್ರೀ. ಸಿದ್ಧರಾಮಯ್ಯರವರು ಹಿಂದೆ ೫ ವರ್ಷ ಮುಖ್ಯಮಂತ್ರಿಯಾಗಿದ್ದಾಗ, ಉನ್ನತ ಶಿಕ್ಷಣಕ್ಕೆ. ಲೋಕೋಪಯೋಗಿ ಇಲಾಖೆಗೆ, ಡ್ಯಾಂ ಕಟ್ಟಲು, ಮೆಟ್ರೋಗೆ, ಶ್ರೀಮಂತರ ಮನೆ ಮುಂದೆ ಗ್ರಾನೈಟ್ಸ್ ಹಾಕಲು ೧ ವರ್ಷಕ್ಕೆ ೧೦ ಸಾವಿರ ಕೋಟಿಯಂತೆ ೫ ವರ್ಷಕ್ಕೆ ೫೦ ಸಾವಿರ ಕೋಟಿ ಹಣ ಕೊಟ್ಟಿರುತ್ತಾರೆ ಎಂದು ಹೇಳಿದ್ದಾರೆ.


೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಅಭಿವೃದ್ಧಿಗೆ ಸುಮಾರು ೪೪ ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದ್ದು, ಶ್ರೀ. ಡಿ.ಕೆ.ಶಿವಕುಮಾರ್‌ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಈ ಹಣವನ್ನು ಬೇರೆ ಬಾಬುಗಳಿಗೆ ಬಳಸದೆ ಈ ಸಮುದಾಯದ ಅಭಿವೃದ್ಧಿಗಾಗಿ ಬಳಸಬೇಕೆಂದು ಇದೇ ರೀತಿ ಕೆ.ಐ.ಎ.ಡಿ.ಬಿ ಭೂಮಿಯಲ್ಲಿ ಯಾವ ರೀತಿ ೨೪.೧ ರಷ್ಟು ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲು ಮಾಡಲಾಗಿದೆಯೋ ಅದೇ ರೀತಿ ಸರ್ಕಾರದ ಎಲ್ಲಾ ೩೪ ಇಲಾಖೆಗಳಲ್ಲಿಯೂ ಸಹಾ ಪರಿಶಿಷ್ಟ ಜಾತಿ/ವರ್ಗದವರಿಗೆ ೨೪.೧ ರಷ್ಟು ಮಿಸಲಾತಿಯನ್ನು ನೀಡಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.