Home ಜಿಲ್ಲೆ ಕಾಲುವೆಗೆ ನೀರು ಹರಿಸಲು ಆಗ್ರಹ

ಕಾಲುವೆಗೆ ನೀರು ಹರಿಸಲು ಆಗ್ರಹ

ನವಲಗುಂದ,ಜು೩೦ : ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ತಾಲ್ಲೂಕು ಬಿಜೆಪಿಯಿಂದ ತಹಶೀಲ್ದಾರ ಸುಧೀರರ ಮೂಲಕ ಸಾಹುಕಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನಲ್ಲಿ ಬರಗಾಲದ ವಾತಾವರಣ ಸೃಷ್ಟಿಯಾಗಿರುವುದರಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿರುವುದರಿAದ ಕೂಡಲೇ ಮಲಪ್ರಭಾ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕು ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ. ಸಿದ್ದನಗೌಡ ಪಾಟೀಲ, ನಗರ ಅಧ್ಯಕ್ಷ ಸಾಯಿಬಾಬಾ ಆನೆಗುಂದಿ, ಬಸವರಾಜ ಕಾತರಾಕಿ, ಆನಂದ ಮುನೇನಕೊಪ್ಪ, ಸಂತೋಷ ಹೊಸಮನಿ, ಶ್ರೀಧರ್ ಪಟ್ಟಣಶೆಟ್ಟಿ, ವೀರೇಶ್ ಅಂಗಡಿ, ಶ್ರೀನಿವಾಸ್ ಮಾವಿನಕಾಯಿ, ಮೈಲಾರಪ್ಪ ವೈದ್ಯ ಇತರರು ಇದ್ದರು.