Home ಜಿಲ್ಲೆ ಬೆಂಗಳೂರು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

ಕೆ.ಆರ್.ಪುರ,ಜು.೧೫-ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿದ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳು ವಾಹನ ನಿಲ್ದಾಣ ಹಾಗೂ ಗಾರ್ಡನ್ ಗಳನ್ನು ನಿರ್ಮಾಣ ಮಾಡಿದ್ದು,ಬೀದಿ ಬದಿ ವ್ಯಾಪಾರಿಗಳಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಭಾರತೀಯ ಸೇವಾ ಸಮಿತಿ ಅಧ್ಯಕ್ಷ ಹೂಡಿ ರಾಮಚಂದ್ರ(ಚಿನ್ನಿ) ನೇತೃತ್ವದಲ್ಲಿ ಕಾರ್ಯಕರ್ತರು ಜಿಬಿಎ ಪೂರ್ವ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಭಾರತೀಯ ಸೇವಾ ಸಮಿತಿ ಅಧ್ಯಕ್ಷ ಹೂಡಿ ರಾಮಚಂದ್ರ(ಚಿನ್ನಿ)ಅವರು ಮಾತನಾಡಿ ಹೂಡಿ,ಐಟಿಪಿಎಲ್,ವೈಟ್ ಫೀಲ್ಡ್ ಬಳಿ
ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿದ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ದರ್ಬಾರ್ ಪ್ರಾರಂಭಿಸಿದ್ದು,ಇದು ಖಂಡನೀಯ ಎಂದರು.

ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಸಲ್ಲಿಸಲು, ಜಿ.ಬಿ.ಎ ಅಧಿಕಾರಿಗಳು ಮುಂದಾಗಬೇಕು ಆ ಮೂಲಕ ಬಡವರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.


ತಾವು ಹೊರಡಿಸಿರುವ ಆದೇಶವನ್ನು ಮುಂದಿಟ್ಟುಕೊಂಡು ತೆರೆವುಗೊಳಿಸಿ ಅವರ ಜೀವನಗಳನ್ನು ಬೀದಿ ಪಾಲು ಮಾಡುತ್ತಿದ್ದಾರೆ.


ಮಕ್ಕಳ ವ್ಯಾಸಂಗ ಮಾಡಿಸಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದು, ವ್ಯಾಪಾರವೇ ಇವರ ಜೀವನಾಧಾರವಾಗಿರುತ್ತದೆ. ತಾವು ಆದೇಶಿಸಿರುವಂತೆ ಮುಖ್ಯರಸ್ತೆಗಳಲ್ಲಿ ಬೀದ ಬದಿ ವ್ಯಾಪಾರ ಮಾಡಬಾರದೆಂದು ಆದೇಶ ಹೊರಡಿಸಿರುತ್ತೀರಿ. ಆದರೆ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಗೋಮಾಳದ ಜಮೀನುಗಳನ್ನು ಕಳೆದುಕೊಂಡು ಉಪ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಆದರೆ ಜಿ.ಬಿ.ಎ ಅಧಿಕಾರಿಗಳು ಖಾಸಗಿ ಕಂಪನಿಗಳವರ ಹಾಗೂ ಖಾಸಗಿ ಹೋಟೆಲ್‌ನವರ ಜೊತೆ ಶಾಮೀಲಾಗಿ ಕಂಪನಿಗಳ ಹಾಗೂ ಹೊಟೇಲ್ ಮಾಲೀಕರ ಅನುಕೂಲಕ್ಕಾಗಿ ಪಾರ್ಕಿಂಗ್, ಗಾರ್ಡನ್‌ಗಳನ್ನು ಹಾಗೂ ಇನ್ನಿತರೆ ರೀತಿಯ ಅನುಕೂಲಕ್ಕಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಹಕಾರ ನೀಡಿದ್ದಾರೆ ಎಂದು ದೂರಿದರು.