ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ೧೦೦ಕ್ಕೂ ಹೆಚ್ಚು ಕಾರ್ಮಿಕರಿಗೆ ಐಎನ್‌ಬಿಸಿಡಬ್ಲ್ಯುಎಫ್‌ನ ರಾಜ್ಯಾಧ್ಯಕ್ಷ ಬಿ.ಆರ್. ದಿನೇಶ್ ರವರು ಸೇಫ್ಟಿಕಿಟ್ ವಿತರಣೆ ಮಾಡಿದರು. ರಾಷ್ಟ್ರೀಯ ಐಎನ್‌ಬಿಸಿಡಬ್ಲ್ಯುಎಫ್ ಪ್ರಧಾನ ಕಾರ್ಯದರ್ಶಿ ಎಂ. ವಿಜಯ ನಾಯಕ್, ಮಹಿಳಾ ರಾಜ್ಯಾಧ್ಯಕ್ಷೆ ಸಂಗೀತ ನಾಡಗೌಡ, ಉಪಾಧ್ಯಕ್ಷರಾದ ಕೆ.ಎನ್. ದಯಾಲನ್, ಜಾಕೀರ್ ಹುಸೇನ್, ನಾಗರಾಜ್, ರೀಟಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ನವ್ಯ ಹಿರೇಮಠ, ಮತ್ತಿತರರು ಇದ್ದಾರೆ.