Home ಜಿಲ್ಲೆ ಮಳೆರಾಯನ ಬರುವಿಕೆಗೆ ಪಾಡುಪಲ್ಲಿ ಗ್ರಾಮದಲ್ಲಿ ಕತ್ತೆಗಳ ಮದುವೆ !

ಮಳೆರಾಯನ ಬರುವಿಕೆಗೆ ಪಾಡುಪಲ್ಲಿ ಗ್ರಾಮದಲ್ಲಿ ಕತ್ತೆಗಳ ಮದುವೆ !

ಗುರುಮಠಕಲ್,ಜು.15-ತಾಲ್ಲೂಕಿನ ಪಾಡುಪಲ್ಲಿ ಗ್ರಾಮದಲ್ಲಿ ಗ್ರಾಮಸ್ಥರು ಮಳೆರಾಯನ ಬರುವಿಕೆಗಾಗಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕತ್ತೆಗಳ ಮದುವೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.
ಈ ವೇಳೆ ಹಿರಿಯರಾದ ಡಿ.ನಾರಾಯಣ ಕೊಂಕಲ್ ಅವರು ಮಾತನಾಡಿ, ಮಳೆಗಾಲವು ಪ್ರಾರಂಭವಾಗಿ ಇಷ್ಟು ದಿನಗಳಾದರು ಮಳೆಬಾರದ ಕಾರಣ, ಅಲ್ಪ ಸ್ವಲ್ಪ ಮಳೆಗೆ ಬಿತ್ತನೆ ಮಾಡಿರುವ ರೈತರ ಬೆಳೆಗಳು ಒಣಗಿ ಹೋಗಿವೆ. ಕತ್ತೆಗಳ ಮದುವೆ ಮಾಡಿದರೆ ಮಳೆ ಬರುವದೆಂಬ ನಂಬಿಕೆಯಿಂದ, ಎರಡು ಕತ್ತೆಗಳನ್ನು ತಂದು ಮೈ ತೊಳೆದು ಹೂ ಮಾಲೆಗಳಿಂದ ಶೃಂಗಾರಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಇಂತಹ ಮದುವೆ ಸಮಾರಂಭವು ಜರುಗುತ್ತಿದೆ ಎಂದು ಹೇಳಿದರು. ಶಶಿಕುಮಾರ್ ಅವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಪ್ರತಪರೆಡ್ಡಿ, ಮುನಿಚಂದ್ರ, ಕಿಷ್ಟರೆಡ್ಡಿ, ಶರಣಪ್ಪ ಕೊಂಕಲ್, ಮೋಹನರೆಡ್ಡಿ ಸೇಡಂ, ಶ್ರೀನಿವಾಸ ವಡವಟ, ರಾಜು ವಡವಟ್, ಸಾಯಿಲು ಸೆಟ್ಲ, ಸಿದ್ರಾಮಪ್ಪ, ಹಣಮಂತ ಸೆಟ್ಲ, ಬಾಬು ವಡವಟ್, ಶ್ರೀನಿವಾಸರೆಡ್ಡಿ ಜಿಲ್ಲಪೂರ, ಶಶಿಕುಮಾರ, ಬಸಪ್ಪ ಸೆಟ್ಲಾ, ಬೀಮಪ್ಪ ಪಿಡೆಮೊಳ, ಈಶಪ್ಪ ಸಾವುಕರ, ಅಂಜಪ್ಪ ವಡವಟ್, ಖದಿರ್, ಡಿ. ನಾರಾಯಣ ಕೊಂಕಲ್, ಕಾಶಪ್ಪ ಗ್ಯಾಂಗ್, ಶೇಕ್ ಇಮ್ರಾನ್, ಹಾಗೂ ಇತರರು ಇದ್ದರು. ಮಂಗಳ ವಾಧ್ಯಗಳಿಂದ ಗ್ರಾಮದ ಮುಖ್ಯ ಬಿದಿಗಳಲ್ಲಿ ಮೆರವಣಿಗೆಯನ್ನು ಮಾಡುತ್ತ, ಗ್ರಾಮದ ದೇವತೆಗಳಿಗೆ ಭಕ್ತಿಪೂರ್ವಕವಾಗಿ ಕಾಯಿ ಕರ್ಪೂರ ನೀಡಿದರು. ಹೆಣ್ಣು ಮಕ್ಕಳು ದೇವಾನು ದೇವತೆಗಳ ನಾಮದ ಕೀರ್ತನೆಗಳ ಗುಣಗಾನವನ್ನು ಮಾಡುತ್ತ ಬೊಡೆಮ್ಮ ಹಾಕಿದರು.