Home ಜಿಲ್ಲೆ ಬೆಂಗಳೂರು ಪ್ರತಿಭಾವಂತ ವಿದ್ಯಾರ್ಥಿಗೆ ಅಭಿನಂದನೆ

ಪ್ರತಿಭಾವಂತ ವಿದ್ಯಾರ್ಥಿಗೆ ಅಭಿನಂದನೆ

ಕೋಲಾರ,ಜು.೧೫- “ಸಾಕ್ಷಿ ತೆಲುಗು ದಿನ ಪತ್ರಿಕೆಯ ಕೋಲಾರ ಜಿಲ್ಲಾ ವರದಿಗಾರ ಡಿ.ಎಸ್.ಮಂಜುನಾಥ ಅವರ ಪುತ್ರ ಡಿ.ಎಂ.ಪವನ್ ಕುಮಾರ್ ಪಿಯುಸಿ ಯಲ್ಲಿ ಶೇಕಡಾ ೯೮ ಅಂಕ ಪಡೆದು ಸಾಧನೆ ಗೈದಿರುವುದಕ್ಕೆ ಕೆ.ಯು.ಡಬ್ಲ್ಯೂಜೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗೆ ಅಭಿನಂದನೆ


ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಂಘದ ವತಿಯಿಂದ ಶೇಕಡಾ ೯೦ ಕ್ಕಿಂತ ಮೇಲ್ಪಟ್ಟು ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕಳೆದ ಮೇ, ೩೧ ರಂದು ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆಯಿತು.


ಅಂದಿನ ದಿನ ನಡೆದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಪವನ್ ಕುಮಾರ್‌ಗೆ ಬರಲು ಸಾದ್ಯವಾಗದ ಕಾರಣ ಆ ಪ್ರಯುಕ್ತ ಆತನಿಗೆ ಸೋಮವಾರ ಬೆಂಗಳೂರು ರಾಜ್ಯ ಸಂಘದ ಕಚೇರಿಯಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.


ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪುರಸ್ಕೃತ ಪವನ್ ಕುಮಾರ್‌ನನ್ನು ಅಭಿನಂದಿಸಿ ಮಾತನಾಡಿ, ನಿನ್ನ ವಿದ್ಯಾರ್ಥಿ ಜೀವನದ ಮುಂದಿನ ಬದುಕು ಉಜ್ವಲವಾಗಿ ಬೆಳಗಲಿ ಇದೇ ಉತ್ಸಾಹದೊಂದಿಗೆ ಉನ್ನತ ಪದವಿ ಪಡೆಯುವಂತೆ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು. ಮಗನ ಉತ್ತಮ ಸಾಧನೆಗೆ ಪ್ರೋತ್ಸಾಹ ನೀಡಿದ ತಂದೆ- ತಾಯಿ ಯವರಾದ ಡಿ.ಎಸ್ ಮಂಜು ನಾಥ್ – ಚಂದ್ರಿಕಾ ದಂಪತಿಗಳನ್ನು ಸಹಾ ವೇದಿಕೆಯಲ್ಲಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಖಜಾಂಚಿ ಎಂ.ವಾಸುದೇವ ಹೊಳ್ಳ ಉಪಸ್ಥಿತರಿದ್ದರು.