Home ಜಿಲ್ಲೆ ಕಲಬುರಗಿ 3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜು.15-ಮನೆ ಬಾಗಿಲು ಕೊಂಡಿ ಮುರಿದು 3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಸೇಡಂ ರಸ್ತೆಯ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ಶಿವಪುತ್ರ ಕಾಡಾದಿಮಠ ಎಂಬುವವರ ಮನೆ ಬಾಗಿಲು ಕೊಂಡಿ ಮುರಿದು ಕಳ್ಳರು 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಒಂದು ಸುತ್ತುಂಗುರ, 80 ಸಾವಿರ ರೂ.ಮೌಲ್ಯದ 1 ಕೆಜಿ ಬೆಳ್ಳಿ ಸಾಮಾನು ಮತ್ತು 1.50 ಲಕ್ಷ ರೂ.ನಗದು ಸೇರಿ 3.10 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಶಿವಪುತ್ರ ಕಾಡಾದಿಮಠ ಅವರು ತಮ್ಮ ಪತ್ನಿಯ ಆರೋಗ್ಯ ತಪಾಸಣೆಗೆಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಗಾಂಜಾ ಮಾರಾಟ: ಬಂಧನ
ನಗರದ ಮಹ್ಮದ್ ರಫಿಕ್ ಚೌಕ್ ಹತ್ತಿರವಿರುವ ಪೀರ್ ಬಂಗಾಲಿ ಗ್ರೌಂಡ್ ಹತ್ತಿರ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಚಂದ್ರಕಾಂತ, ಗುಂಡೇರಾಯ, ಶಶಿಕಾಂತ ಅವರು ದಾಳಿ ನಡೆಸಿ ಮುಸ್ಲಿಂ ಸಂಘದ ಅಬ್ದುಲ್ ರಜಾಕ್ ಎಂಬಾತನನ್ನು ಬಂಧಿಸಿ 13000 ರೂ.ಮೌಲ್ಯದ 130 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ.
ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.