
ಕಲಬುರಗಿ,ಜು.15-ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಪ್ರಾಂಗಣದಲ್ಲಿ ವಿಶ್ವ ಜನಸಂಖ್ಯೆ ದಿನಚರಣೆಯನ್ನು ಹೆರಿಗೆ ಮತ್ತು ಸ್ತ್ರೀ ಸಂತಾನೋತ್ಪತ್ತಿ ಕೇಂದ್ರದ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವಿಭಾಗವಾಗಿದಲ್ಲಿ ಹೊರ ರೋಗಿಗಳ ಗರ್ಭಿಣಿಯಾರಿಗೆ ಹಾಗೂ ಆರೈಕೆ ಸಹಾಯಕರಿಗೆ, ಆರೋಗ್ಯಕರ ಸಮುದಾಯದಲ್ಲಿ ಗರ್ಭಧಾರಣೆಗಳು ಮತ್ತು ಮಕ್ಕಳ ಜನನದ ನಡುವೆ ಸಮರ್ಪಕ ಅಂತರ ಕಾಪಾಡಿಕೊಳ್ಳುವುದರಿಂದ ತಾಯಿ ಹಾಗೂ ಮಕ್ಕಳ ಆರೋಗ್ಯ ಸುಧಾರಿಸಿ, ಅನಗತ್ಯ ಗರ್ಭಧಾರಣೆಗಳನ್ನು ತಡೆಯಲು ಸಹಾಯವಾಗುತ್ತದೆ ಎಂದು ನಸಿರ್ಂಗ್ ಆಫೀಸರ್ ಸೀತಾ ಬಡಿಗೇರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಮ್ಸ್ ಜಿಲ್ಲಾ ಆಸ್ಪತ್ರೆ. ಸಹಯೋಗದಲ್ಲಿ ವಿಶ್ವ ಜನಸಂಖ್ಯೆ ದಿನದ ಅರಿವು ಕಾರ್ಯಕ್ರಮದಲ್ಲಿ ಮಾತಾಡಿದ ಅವರು ವಿಶ್ವದ ಜನಸಂಖ್ಯೆ 1987 ರ ಜುಲೈ 11 ರಂದು 5 ಬಿಲಿಯನ್ ತಲುಪಿದ ಸಂದರ್ಭವನ್ನು ನೆನಪಿಸಿ, 1989 ರಲ್ಲಿ ಆಯೋಜಕರು ಈ ದಿನವನ್ನು ಅಧಿಕೃತವಾಗಿ ಘೋಷಿಸಿದರು.
ಆರೋಗ್ಯಕರ ಜೀವನ ನಡೆಸಲು ಗರ್ಭ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸುವುದರಿಂದ ತಾಯಿ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ನಂತರ ಆರ್‍ಎಂಎನ್‍ಸಿ ಪ್ಲಸ್ ಸಮಾಲೋಚಕಿ ಗೀತಾ ಕುಂಬಾರ ಅವರು ಮಾತನಾಡುತ್ತ, ವಿಶ್ವ ಜನಸಂಖ್ಯಾ ದಿನವು ಕುಟುಂಬ ಯೋಜನೆ, ಆರೋಗ್ಯ ಸೇವೆಗಳು, ಲಿಂಗ ಸಮಾನತೆ, ಬಾಳಿಕೆ ಗುಣಮಟ್ಟ ಮತ್ತು ಉಸಿರಾಟದ ಸಂಪನ್ಮೂಲಗಳ ಮೇಲಿನ ಒತ್ತಡದಂತಹ ವಿಷಯಗಳ ಮೇಲೆ ಜಾಗೃತಿ ಮೂಡಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ್ ಅವರು ಮಾತನಾಡುತ್ತ ತಂಬಾಕು ಮತ್ತು ಧೂಮಾಪಾನ ಸೇವನೆ ದುಷ್ಟಪರಿಣಾಮದಿಂದ ಬಾಣಂತಿಯರ ಮೇಲೆ ಪ್ರಭಾವ ಬೀರುತ್ತಿದೆ ಅದರಿಂದ ಉತ್ತಮ ಹಾಗೂ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ಹುಟ್ಟುವ ಮಗು ಆರೋಗ್ಯವಾಗಿರುತ್ತದೆ ಹಾಗೆ ಐಇಸಿ ಕರ ಪತ್ರನೀಡಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಓಬಿಜಿ ಸೋಶಿಯಲ್ ವರ್ಕರ್ ದೀಪಾಶ್ರೀ ಸಿಂಗೆ, ನಸಿರ್ಂಗ್ ಆಫೀಸರ್ ವಸಂತಾ , ನಸಿರ್ಂಗ್ ಉಪನ್ಯಾಸಕ ಬಿಭಿಮಾ ಭಗ್ಬಾನ್, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಬಾಣಂತಿ ಆರೈಕೆದಾರರು ಭಾಗವಹಿಸಿದ್ದರು.































