
ಕೋಲಾರ,ಜು,೧೫- ಕ್ರಿಭ್ಕೋ ರೈತರ ಅಭಿವೃದ್ಧಿ ಮತ್ತು ಸಹಕಾರ ಕ್ಷೇತ್ರದ ಬಲವರ್ಧನೆಗೆ ಸದಾ ಬದ್ಧವಾಗಿದೆ ಎಂದು ನವದೆಹಲಿ ಕ್ರಿಭ್ಕೋ ಅಧ್ಯಕ್ಷ ಸುಧಾಕರ್ ಚೌಧರಿ ತಿಳಿಸಿದರು
ಕಟ್ಟಡಕ್ಕೆ ಬೆಂಗಳೂರಿನ ಮಿಲ್ಲರ್ಸ್ ರೋಡ್‌ನಲ್ಲಿ ಜು. ೧೩ರಂದು ಕರ್ನಾಟಕ ರಾಜ್ಯ ಮಾರುಕಟ್ಟೆ ಕಚೇರಿ ನೂತನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ,. ಬೆಂಗಳೂರಿನಲ್ಲಿ ಸ್ವಂತ ರಾಜ್ಯ ಮಾರುಕಟ್ಟೆ ಕಚೇರಿ ನಿರ್ಮಾಣವಾಗುತ್ತಿರುವುದು ಕರ್ನಾಟಕದ ರೈತರು, ಸಹಕಾರ ಸಂಘಗಳು ಹಾಗೂ ಗ್ರಾಹಕರಿಗೆ ಇನ್ನಷ್ಟು ಪರಿಣಾಮಕಾರಿ ಮತ್ತು ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು
ಕರ್ನಾಟಕ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಎಂ. ಎಸ್. ಶ್ರೀನಿವಾಸ್ ಬಾಬು( ಮೂಲತಹ ಕೋಲಾರದವರಾದ) ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಕ್ರಿಭ್ಕೋ ತನ್ನ ಸ್ವಂತ ರಾಜ್ಯ ಮಾರುಕಟ್ಟೆ ಕಚೇರಿ ನೂತನ ಕಟ್ಟಡ ಶೀಘ್ರ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷರು ಹಾಗೂ ಹಿರಿಯ ಆಡಳಿತದ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದಲ್ಲಿ ಕ್ರಿಭ್ಕೋದ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿ, ರೈತರ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ .ಎಲ್. ಪಿ. ಗುಡ್‌ವಿನ್ ಮಾತನಾಡಿ ಕರ್ನಾಟಕ ತಂಡದ ಶ್ರಮ ಮತ್ತು ಸಾಧನೆಯನ್ನು ಶ್ಲಾಘಿಸಿ, ಹೊಸ ಕಚೇರಿ ರಾಜ್ಯದಲ್ಲಿ ಕೃಷಿಭ್ಕೋದ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಮತ್ತು ರೈತರಿಗೆ ಉತ್ತಮ ಸೇವೆಗಳನ್ನು ನೀಡಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಮಿಲ್ಲರ್ಸ್ ರೋಡ್‌ನಲ್ಲಿ ನಿರ್ಮಾಣವಾಗಲಿರುವ ಈ ಸ್ವಂತ ರಾಜ್ಯ ಮಾರುಕಟ್ಟೆ ಕಚೇರಿ ಕೃಷಿಭ್ಕೋದ ಕರ್ನಾಟಕದ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಲಿದ್ದು, ರೈತರಿಗೆ ಇನ್ನಷ್ಟು ಸಮೀಪದಿಂದ ಹಾಗೂ ಸಮರ್ಥವಾಗಿ ಸೇವೆ ಸಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದರು.
ಇದು ಕರ್ನಾಟಕದಲ್ಲಿ ಕ್ರಿಭ್ಕೋದ ಬೆಳವಣಿಗೆ ಮತ್ತು ಸಹಕಾರ ಚಳವಳಿಯ ಬಲವರ್ಧನೆಯತ್ತ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದೇ ಆಶಿಸಿದರು.
ಈ ಸಂದರ್ಭದಲ್ಲಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಶಿಎಲ್. ಪಿ. ಗುಡ್‌ವಿನ್, ಹಾಗೂ ಕ್ರಿಭ್ಕೋ ಕರ್ನಾಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
.

































