
ಕೋಲಾರ.ಸೆ,೮- ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಶಸ್ತ್ರಾಸ್ತ್ರಗಳೊಂದಿಗ ನಿಯೋಜಿಸುವಂತೆ ಸೂಚಿಸಿರುವುದಾಗಿ ಹೇಳಲಾದ ವಾಟ್ಸ್‌ಪ್ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ರತರು ಭಯಭೀತರಾಗಿದ್ದಾರೆ ಸಂದೇಶದ ಕುರಿತು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರತ ಸಂಘದ ಪದಾಧಿಕಾರಿಗಳು ಎಸ್ಪಿ ಕನ್ನಿಕಾ ಸಿಕ್ರಿವಾಲ್ ಸೋಮವಾರ ಮನವಿ ನೀಡಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್ ಮಾತನಾಡಿ, ಇಂದು ಎಲ್ಲ ರೇಂಜ್‌ಗಳಿಂದ ಸಿಬ್ಬಂದಿಯನ್ನು ಶ್ರೀನಿವಾಸಪುರಕ್ಕ ಕಳುಹಿಸಿ, ಒತ್ತುವರಿ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವಂತೆ ಸೂಚಿಸಲಾಗಿದೆ ಎನ್ನಲಾದ ಸಂದೇಶ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದರಿಂದ ಈಗಾಗಲೇ ಅರಣ್ಯ ಇಲಾಖೆ ಹಾಗೂ ಕಂದಾಯ ಭೂಮಿ ವಿಚಾರದಲ್ಲಿ ಆತಂಕದಲ್ಲಿರುವ ರತರಲ್ಲಿ ಮತ್ತಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಎಸ್ಪಿಗ ತಿಳಿಸಿದರು
ಸಂದೇಶದ ಮೂಲ ಹಾಗೂ ಅದನ್ನು ಕಳುಹಿಸಿದವರ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ರತರ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಯ ನೋಟಿಫಿಕೇಷನ್ ಹೆಸರಿನಲ್ಲಿ ಸಾವಿರಾರು ಎಕರ ಭೂಮಿಯನ್ನು ರತರಿಗ , ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಕುರಿತು ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗ ಮಾತುಕತೆ ನಡೆಸಿದ್ದು, ವಾಟ್ಸಾಆಪ್ ಸಂದೇಶದ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಅವರು ತಿಳಿಸಿದ್ದಾರೆ ವಿಷಯ ಸೂಕ್ಷ್ಮವಾಗಿರುವುದರಿಂದ ತಕ್ಷಣ ಸರ್ಕಾರದ ಗಮನಕ್ಕೂ ತರಲಾಗುವುದದು. ರತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ಪ್ರಾಂತ ರತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಮುಖಂಡರಾದ ಹರಟಿ ಪ್ರಕಾಶ್, ಭಟ್ರಹಳ್ಳಿ ಮಂಜುನಾಥ್, ವೆಂಕಟರಾಣಪ್ಪ, ಗಂಗಮ್ಮ, ಮಂಜುಳ, ಮುನಿರತ್ನಮ್ಮ, ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.
































