
ಲಕ್ಷೆ÷್ಮÃಶ್ವರ,ಜು೨೯: ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳು ಕಳೆದ ಎರಡು ತಿಂಗಳನಿAದ ಸಮರ್ಪಕ ಮಳೆಯಾಗಿದೆ ಕೊರತೆಯಿಂದಾಗಿ ಬಿತ್ತಿದ ಬೀಜಗಳು ಮೊಳಕೆ ನಾಟಿ ತೇವಾಂಶದ ಕೊರತೆಯಿಂದ ಬೆಳೆ ಸಂಪೂರ್ಣವಾಗಿ ಕುಂಠಿತಗೊAಡಿದ್ದು ಬಹುತೇಕ ತೋಟಗಾರಿಕಾ ಬೆಳೆಯಾದ ಈರುಳ್ಳಿ ಮತ್ತು ಮೆಣಸಿನಕಾಯಿ ನಾಶವಾಗುವ ಭೀತಿಯಲ್ಲಿದೆ.
ತಾಲೂಕಿನ ಮಾಡಳ್ಳಿ ಯಳವತ್ತಿ ಯತ್ತಿನಹಳ್ಳಿ ಲಕ್ಷೆ÷್ಮÃಶ್ವರ ಗೊಜನನೂರು ಅಡರ್ ಕಟ್ಟಿ ಬಟ್ಟೂರು ರಾಮಗಿರಿ ಬಸಾಪುರ ಭಾಗಗಳಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಯಾದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ರೈತರಿಗೆ ಕಣ್ಣೀರು ತರಿಸುತ್ತಿದೆ.
ತೋಟಗಾರಿಕಾ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಾಡಳ್ಳಿ ಯಳವತ್ತಿ ಮತ್ತು ಯತ್ನಳ್ಳಿ ಗ್ರಾಮ ಸೇರಿದಂತೆ ೫೦೦ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಈರುಳ್ಳಿ ಮತ್ತು ಮೆಣಸಿನಕಾಯಿ ಬೀಜ ಸಂಪೂರ್ಣವಾಗಿ ಹಾಳಾಗುವ ಸ್ಥಿತಿಯಲ್ಲಿದೆ.
ಈ ಕುರಿತು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ ಕುಲಕರ್ಣಿ ಅವರು ತಾಲೂಕಿನ ಮಾಡಳ್ಳಿ ಯಳವತ್ತಿ ಮತ್ತು ಯತ್ನಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ೫೦೦ ಎಕರೆಗೂ ಹೆಚ್ಚು ಈರುಳ್ಳಿ ಮತ್ತು ಮೆಣಸಿನಕಾಯಿ ಬೀಜ ಬಿತ್ತನೆಯಾಗಿದ್ದು ತೇವಾಂಶದ ಕೊರತೆಯಿಂದ ಬೆಳೆ ಸಂಪೂರ್ಣ ಕುಂಠಿತವಾಗಿದ್ದು ಇಳುವರಿ ಅತ್ಯಲ್ಪ ಬರಲಿದೆ ಎಂದು ಹೇಳಿದರು.
ಈ ಕುರಿತು ಭರಮ ಗೌಡ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಆಗಲೇ ಎರಡು ತಿಂಗಳಿನಿAದ ಸಂಪೂರ್ಣ ಮಳೆ ಯಾಗದಿರುವುದರಿಂದ ಬೆಳೆ ನಾಶವಾಗುವ ಭೀತಿಯಲ್ಲಿದೆ ಈ ಕೂಡಲೇ ಸರ್ಕಾರ ಮುಂಗಾರಿನ ಎಲ್ಲಾ ಬೆಳೆಗಳಿಗೂ ಮಧ್ಯಂತರ ಪರಿಹಾರ ಮತ್ತು ಬೆಳೆ ವಿಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.






























