
ಕೋಲಾರ,ಸೆ.7: ಸೆ, ೧೭ ರಂದು ನಡೆಯುವ ಭಗವಾನ್ ವಿಶ್ವಕರ್ಮರ ಜಯಂತಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಹಾಗೂ ಹಿರಿಯರನ್ನು ಗೌರವಿಸುವಂತ ಕೆಲಸ ಈ ಬಾರಿ ಕಾರ್ಯಕ್ರಮದಲ್ಲಿ ಮಾಡಬೇಕೆಂದು ಸಭೆಯಲ್ಲಿ ಒಕ್ಕೂರಲಿನ ತೀರ್ಮಾನವಾಯಿತು.
ಭಗವಾನ್ ವಿಶ್ವಕರ್ಮರ ಜಯಂತಿ ಸಂಬಂಧ ಕಾಳಿಕಾಂಭ ಕಮ್ಮಠೇಶ್ವರ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರುಗಳು, ಜಿಲ್ಲಾಧಿಕಾರಿಗಳು ಜಯಂತಿಯ ಪೂರ್ವಭಾವಿ ಸಭೆಯನ್ನು ಕರೆಯುವಾಗ ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನೊಳಗೊಂಡಂತೆ ಸಭೆ ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಕಾಳಿಕಾಂಭ ಕಮ್ಮಠೇಶ್ವರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಪ್ರಭಾಕರಾಚಾರಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಲಾವಿದ ವಿಷ್ಣು, ಶಿಲ್ಪಿ ಸೋಮಶೇಖರಾಚಾರಿ, ವಿಜಯಕುಮಾರ್, ಮಂಜುನಾಥಚಾರಿ, ಮುರಳಿಮೋಹನ್ ಸಾಂಭಶಿವಾಚಾರಿ, ಶೇಖರ್, ಬಸವಾಚಾರಿ, ಬಂಗಾರಪೇಟೆ ಗಿರಿಶೇಖರಚಾರಿ, ನಾಗಾರಾಜಾಚಾರಿ, ರಘುನಾಥಾಚಾರಿ, ರಾಘವೇಂದ್ರಾಚಾರಿ, ಕೆ.ಜಿ.ಎಫ್‌ನ ರಾಮಕೃಷ್ಣಾಚಾರಿ, ಶ್ರೀನಿವಾಸಪುರದ ಮೋಹನಾಚಾರಿ ಸೇರಿದಂತೆ ಇನ್ನಿತರರು ಇದ್ದರು.
































