Home ಜಿಲ್ಲೆ ಕುಂಬರವಾಡ ಡಾ. ಬಿ ಆರ್ ಅಂಬೇಡ್ಕರ ಸಮುದಾಯ ಭವನಕ್ಕೆ ಜಾಗ ಮಂಜೂರಿ ಆಗ್ರಹ

ಕುಂಬರವಾಡ ಡಾ. ಬಿ ಆರ್ ಅಂಬೇಡ್ಕರ ಸಮುದಾಯ ಭವನಕ್ಕೆ ಜಾಗ ಮಂಜೂರಿ ಆಗ್ರಹ

ಬೀದರ: ಬಹುಜನ ದಲಿತ ಸಂಘರ್ಷ ಸಮಿತಿ ಬೀದರ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿ,ಬೀದರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕುಂಬರವಾಡ ಸರ್ವೆ ನಂ ೫೧/೧ ರಲ್ಲಿ ೨೫ ಎಕ್ಕರೆ ಸರ್ಕಾರಿ ಗೈರಾಣಿ ಜಮಿನಲ್ಲಿ ಮನೆಗಳು ತಮ್ಮ ಜನಾಂಗ ಜಾತಿ ಧರ್ಮಗಳಿಗೆ ಸಂಬAಧಿಸಿದ ರಾಮಮಂದಿರ ಮಜೀದ ಚರ್ಚುಗಳು ನಿರ್ಮಾಣ ಮಾಡಿಕೊಂಡಿದ್ದಾರೆ. ಅವರಿಗೆ ಯಾವುದೇ ರೀತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ (ಹೊಲೆಯ ) ಸಮುದಾಯದವರು ಯಾವುದೇ ರೀತಿಯಿಂದ ಅಡಿಪಡಿಸಿರುವುದಿಲ್ಲ.
ಸದರಿ ಸರ್ವೆ ನಂ ೫೧/೧ ರಲ್ಲಿ ಖಾಲಿ ಇರುವ ೭೫ ಮತ್ತು ೮೦ ವಿಸ್ತಿರ್ಣದ ಜಾಗದಲ್ಲಿ ಕಳೆದ ೨೫ ವರ್ಷಗಳಿಂದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಜಯಂತಿ, ರಮಾಬಾಯಿ ಅಂಬೇಡ್ಕರ ಜಯಂತಿ ಬುದ್ಧ ಪೂರ್ಣಿಮಾ, ವಿಜಯ ದಶಮಿ ಸಭೆ ಸಮಾರಂಭಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಈ ಜಾಗದಲ್ಲಿ ಕಟ್ಟಿಯನ್ನು ಕಟ್ಟಿ ನೀಳಾ ಝಂಡವನ್ನು ಕುಂಬರವಾಡದ ಎಸ್ ಸಿ ಹೊಲೆಯ ಸಮುದಾಯದ ಸಮಾನತೆಯ ಸಂಕೆತವಾಗಿರು. ನೀಳಾ ಝಂಡವನ್ನು ಕುಂಬರವಾಡದ ಅಂಗನವಾಡಿ ಕಾರ್ಯಕರ್ತೆ ಶೋಭಾರಾಣಿ ಗಂಡ ಜೋಷಪ್ಪ ಕೊಡೆಕರ ರವರು ಮೇ ೧೮-೨೦೨೬ ರಂದು ಮಧ್ಯಾಹ್ನ ೪-೩೦ ಗಂಟೆಗೆ ತೇಗೆದು ಹಾಕಿರುವ ಘಟನೆ ನಡೆದಿರುತ್ತದೆ. ಈ ಘಟನೆ ಖಂಡಿಸಿ, ಗಾಂಧಿ ಗಂಜ್ ಪೊಲೀಸ ಠಾಣಿ ವೃತ್ತ ನಿರೀಕ್ಷಕರಾದ ಶ್ರೀ ಆನಂದರಾವ ರವರಿಗೆ ದೂರು ಕೊಟ್ಟಿದ್ದಾರೆ. ಸಾಮಾನ್ಯ ಪ್ರಕರಣವನ್ನು ದಾಖಲಿಸಿ, ಮುಚ್ಚಳಿಕೆ ಬರದುಕೊಂಡು ಬಿಟ್ಟಿರುತ್ತಾರೆ. ಅಲ್ಲದೆ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯಕರ್ತೆಯಾಗಿ ನೀಳಾ ಝಂಡವನ್ನು ತೇಗೆದುಹಾಕುವ ಅಧಿಕಾರವನ್ನು ಶೋಭಾರಾಣಿ ಜೋಷಪ್ಪ ಕೊಡೆಕರ ರವರಿಗೆ ಕೊಟ್ಟವರು ಯಾರು? ಎಂದು ಸಂಬAಧಪಟ್ಟಿರುವ ಅಧಿಕಾರಿಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕರು ಬೀದರ ವರಿಗೆ ಕುಂಬರವಾಡ ಎಸ್ ಸಿ ಹೊಲೆಯ ಸಮುದಾಯದವರು ದಿನಾಂಕಃ ೧೯-೦೫-೨೦೨೬ ರಂದು ದೂರು ಕೊಟ್ಟಿದ್ದಾರೆ. ತಪ್ಪು ಮಾಡಿರುವ ಶೋಭಾರಾಣಿಯವರ ಮೇಲೆ ಕ್ರಮ ಜರುಗಿಸದ ಅಧಿಕಾರಿಗಳು ನಿರ್ಲಕ್ಷ ತೋರಿರುವುದು ಖಂಡನಿಯವಾಗಿದೆ. ದೂರು ಕೊಟ್ಟಾಗ ಕ್ರಮ ಜರುಗಿಸುವುದು ಮೇಲಾಧಿಕಾರಿಗಳ ಜವಬ್ದಾರಿಯಾಗಿದೆ. ಇಂತಹ ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ಮೇಲೆ ಕ್ರಮವನ್ನು ಜರುಗಿಸಲು ಸಂಘಟನೆಯಿAದ ಆಗ್ರಮವನ್ನು ಮಾಡುತ್ತಿದ್ದೇವೆ. ಒಂದುವಾರದ ಒಳಗಾಗಿ ಸದರಿ ಸರ್ವೆ ನಂ ೫೧/೧ ರಲ್ಲಿ ಖಾಲಿ ಇರುವ ೭೫ ಮತ್ತು ೮೦ ವಿಸ್ತಿರ್ಣದ ಜಾಗವನ್ನು ಮಂಜೂರು ಮಾಡಿ ನೀಡಬೇಕು. ಇಲ್ಲವಾದಲ್ಲಿ ಜಾಗ ಮಂಜೂರಾಗುವ ವರೆಗೂ ನಿರಂತರವಾದ ಹೋರಾಟವನ್ನು ಮಾಡಲಾಗುವುದೇಂದು ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗೌತಮ ಭೋಸ್ಲೆ ಕಾರ್ಯಕರ್ತರಾದ ದೀಪಕ ಸೈನೆ ಪವನ ಗಾಯಕವಾಡ ಸಂಜು ವಗ್ಗೆ ಸಂತೀಷ ದೀಪಕ ಭೋಸ್ಲೆ ಜೈ ಭೀಮ ದಳದ ಜಿಲ್ಲಾಧ್ಯಕ್ಷರಾದ ಅಂಬೇಡ್ಕರ ಸಾಗರ ಅಮಲಾಪೂರು ರಾಜಕುಮಾರ ಕಾರೆಮುಂಗಿ ಗುಣವಂತ ಸಿಂಧೆ, ವಿಜಯಕುಮಾರ ಸಾಮ್ರಾಟ್ ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.