Home ಜಿಲ್ಲೆ ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹ: ಅಮಲಾಪುರ ಗ್ರಾಮಸ್ಥರ ಧರಣಿ

ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹ: ಅಮಲಾಪುರ ಗ್ರಾಮಸ್ಥರ ಧರಣಿ

ಬೀದರ್: ತಾಲೂಕಿನ ಅಮಲಾಪುರ ಗ್ರಾಮದ ರ‍್ವೇ ನಂ. ೭೧ರಲ್ಲಿರುವ ರ‍್ಕಾರಿ ಜಮೀನನ್ನು ಪರಿಶಿಷ್ಟ ಜಾತಿ (ಹೊಲೆಯಾ) ಸಮುದಾಯದ ಸ್ಮಶಾನ ಭೂಮಿಯಾಗಿ ಅಧಿಕೃತವಾಗಿ ಮಂಜೂರು ಮಾಡಿ, ಪಹಣಿ ಪತ್ರಿಕೆಯಲ್ಲಿ ಸ್ಮಶಾನ ಭೂಮಿ ಎಂದು ನಮೂದಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ನಿರಂತರ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಸ್ಮಶಾನ ಭೂಮಿ ಮಂಜೂರಾತಿ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಮಲಾಪುರ ಗ್ರಾಮದ ರ‍್ವೇ ನಂ.೭೧ರ ರ‍್ಕಾರಿ ಜಮೀನಿನಲ್ಲಿ ಕಳೆದ ೫೦-೬೦ ರ‍್ಷಗಳಿಂದ ಪರಿಶಿಷ್ಟ ಜಾತಿ (ಹೊಲೆಯಾ) ಸಮುದಾಯದವರು ಅಂತ್ಯಸAಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಈವರೆಗೆ ಸದರಿ ಜಮೀನು ಅಧಿಕೃತವಾಗಿ ಸ್ಮಶಾನಕ್ಕಾಗಿ ಮಂಜೂರಾಗಿಲ್ಲ. ಇದರಿಂದ ಗ್ರಾಮಸ್ಥರು ಹಲವು ರ‍್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ೨೦೧೧ರಿಂದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ್ ಸೇರಿದಂತೆ ಸಂಬAಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ, ಇತ್ತೀಚೆಗೆ ಸ್ಮಶಾನ ಭೂಮಿ ಮಂಜೂರಾತಿಗೆ ಸಂಬAಧಿಸಿದAತೆ ತಹಸೀಲ್ದಾರ್ ಅವರು ಸ್ಥಳದ ನೈಜ ಸ್ಥಿತಿಗತಿ ಕುರಿತು ವರದಿ ಕೇಳಿದ ಸರ‍್ಭದಲ್ಲಿ, ಕಂದಾಯ ನಿರೀಕ್ಷಕ ರಾಜಕುಮಾರ ಬಾವಗಿ ಹಾಗೂ ವಿಷಯ ರ‍್ವಾಹಕ ಅರುಣ ಸಿತಾಳಗೇರಾ ಅವರು ವಾಸ್ತವಾಂಶಕ್ಕೆ ವಿರುದ್ಧವಾಗಿ ಸುಳ್ಳು ಹಾಗೂ ತಪ್ಪು ಮಾಹಿತಿ ಒಳಗೊಂಡ ವರದಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಧಿಕಾರಿಗಳ ವಿಳಂಬ ಧೋರಣೆಯಿಂದ ಗ್ರಾಮಸ್ಥರ ಮಧ್ಯೆ ಗೊಂದಲ ಮತ್ತು ಜಗಳಕ್ಕೆ ಕಾರಣವಾಗುವ ಪರಿಸ್ಥಿತಿ ರ‍್ಮಾಣವಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಅನುಮಾನವೂ ಗ್ರಾಮಸ್ಥರಲ್ಲಿ ಮೂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ರ‍್ವೇ ನಂ.೭೧ರ ಜಮೀನನ್ನು ಕೂಡಲೇ ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನಕ್ಕಾಗಿ ಅಧಿಕೃತವಾಗಿ ಮಂಜೂರು ಮಾಡಿ, ಪಹಣಿ ಪತ್ರಿಕೆಯಲ್ಲಿ ಸ್ಮಶಾನ ಭೂಮಿ ಎಂದು ದಾಖಲಿಸಬೇಕು. ಬೇಡಿಕೆ ಈಡೇರುವವರೆಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅಮಲಾಪುರ ಗ್ರಾಮಸ್ಥರು ಎಚ್ಚರಿಸಿದ್ದಾರೆ.