Home ಜಿಲ್ಲೆ ಕಲಬುರಗಿ ತಳವಾರರಿಗೆ ಎಸ್ಪಿ ಪ್ರಮಾಣಪತ್ರ ನೀಡಲು ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ತಳವಾರರಿಗೆ ಎಸ್ಪಿ ಪ್ರಮಾಣಪತ್ರ ನೀಡಲು ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಜೇವರ್ಗಿ, ಸೆ.೨೦: ತಳವಾರ ಸಮುದಾಯದ ಅರ್ಹರಿಗೆ ಪರಿಶಿಷ್ಟ ಪಂಗಡ (ಎಸ್ಪಿ) ಪ್ರಮಾಣಪತ್ರ ನೀಡುವ ಸರಕಾರಿ ಪ್ರಕ್ರಿಯೆಗೆ ಅಡ್ಡಿಪಡಿಸುವವರು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಜೇವರ್ಗಿ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿರುವ ಮಹಾಸಭಾದ ಮುಖಂಡರು, ಸರಕಾರದ ಆದೇಶ ಅಥವಾ ಅಧಿಸೂಚನೆಗೆ ಯಾರಿಗಾದರೂ ಆಕ್ಷೇಪಣೆ ಗಳಿದ್ದರೆ, ಅವರು ಕಾನೂನುಬದ್ದ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು.
ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ತಳವಾರಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ನೈಜ ತಳವಾರ ಸಮುದಾಯದ ಅರ್ಹ ವ್ಯಕ್ತಿಗಳಿಗೆ ಸ್ಥಳೀಯ ಪಂಚನಾಮೆ ವರದಿ ಹಾಗೂ ಶಾಲಾ ದಾಖಲಾತಿಗಳನ್ನು ಪರಿಗಣಿಸಿ, ಕಾಲಮಿತಿಯೊಳಗೆ ಎಸ್ಟಿಜಾತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರೇವಣಸಿದ್ದ ಕಮಾನಮನಿ ಭೀಮರಾಯ ಜನಿವಾರ ಮೈಲಾರಿ ಗುಡೂರ, ಮಲ್ಲೇಶಪ್ಪಗೌಡ ಮಾವನೂರ ತಳವಾರ ಮಹಾ ಸಭಾಅಧ್ಯಕ್ಷ ಗಿರೀಶ್ ತುಂಬಗಿ, ಸಂತೋಷ ಜೈನಪುರ ಸಿದ್ದಣ್ಣಗೌಡ ಮಾವನೂರ ರಾಜೇಂದ್ರ ರಾಜವಾಳ, ಭಾಗೇಶ್ ಹೊತಿನಮಡು , ಬಸು ತಳವಾರ, ಮರೆಪ್ಪ ತಳವಾರ, ರಾಜು ತಳವಾರ ಹಾಗೂ ಮೊದಲಾದವರು ಉಪಸ್ಥಿತರಿದ್ದರು.