Home ಜಿಲ್ಲೆ ಬೆಂಗಳೂರು ಶಾಂತಿಯುತ ಗೌರಿ-ಗಣೇಶ ಆಚರಣಗೆ ಡಿಸಿ ಕರೆ

ಶಾಂತಿಯುತ ಗೌರಿ-ಗಣೇಶ ಆಚರಣಗೆ ಡಿಸಿ ಕರೆ

ಕೋಲಾರ,ಸೆ,೯-“ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ನಾವೆಲ್ಲರೂ ತಾಯಿ-ಮಕ್ಕಳಂತೆ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮೆರಯಬೇಕು” ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಸಾರ್ವಜನಿಕರಿಗ ಕರೆ ನೀಡಿದ್ದಾರೆ.


ಮುಂಬರುವ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಶಾಂತಿಪಾಲನಾ ಸಭಯ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ, ಹಬ್ಬದ ನೆಪದಲ್ಲಿ ಕಾನೂನು ಸುವ್ಯವಸ್ಥೆಗ ಧಕ್ಕಯಾಗದಂತೆ ಹಾಗೂ ಯಾರಿಗೂ ತೊಂದರಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗ ನಿರ್ದೇಶನ ನೀಡಿದರು.


ಗಣೇಶ ಮೂರ್ತಿ ಪ್ರತಿಷ್ಠಾಪನೆಗ ಸುಗಮವಾಗಿ ಅನುಮತಿ ನೀಡುವ ಉದ್ದೇಶದಿಂದ ನಗರಸಭ, ಪುರಸಭ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ’ಏಕಗವಾಕ್ಷಿ ವ್ಯವಸ್ಥೆ’ (ಸಿಂಗಲ್ ವಿಂಡೋ ಸಿಸ್ಟಮ್) ಜಾರಿಗೊಳಿಸಲಾಗುತ್ತಿದೆ. ಆಯೋಜಕರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಲಗತ್ತಿಸಿ ಏಕಕಾಲದಲ್ಲಿ ಅನುಮತಿ ಪಡೆಯಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರವನ್ನು ಗರಿಷ್ಠ ೫ ಅಡಿಗಳಿಗ ಮಾತ್ರ ಸೀಮಿತಗೊಳಿಸಲಾಗಿದ್ದು, ಟ್ರಾನ್ಸ್‌ಫಾರ್ಮರ್‌ಗಳ ಬಳಿ, ನೀರಿನ ಟ್ಯಾಂಕ್ ಕೆಳಗಡೆ, ರಸ್ತ ಮಧ್ಯದಲ್ಲಿ ಹಾಗೂ ಯಾವುದೇ ವಿವಾದಿತ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗ ಅವಕಾಶವಿಲ್ಲ ಎಂದು ಎಚ್ಚರಿಸಿದರು.


ಜೊತೆಗ, ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದಿನದ ೨೪ ಗಂಟೆಯೂ ಆಯೋಜಕರು ತಮ್ಮದೇ ಆದ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳುವುದು ಕಡ್ಡಾಯವಾಗಿದೆ.


ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಸಾಯನಿಕಯುಕ್ತ ಪಿಒಪಿ (PಔP) ಹಾಗೂ ಪ್ಲಾಸ್ಟಿಕ್ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಜಿಲ್ಲಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕೇವಲ ಪರಿಸರಕ್ಕ ಪೂರಕವಾದ ಮಣ್ಣಿನ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಹಬ್ಬದ ಮೆರವಣಿಗಗಳಲ್ಲಿ ಯುವಜನತೆ ಮತ್ತು ಮಕ್ಕಳ ಶ್ರವಣ ಶಕ್ತಿಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಅತಿ ಹೆಚ್ಚು ಶಬ್ದ ಮಾಡುವ ಡಿಜೆ (ಆಎ) ಬಳಕೆಗ ಸಂಪೂರ್ಣ ನಿಷೇಧ ಹೇರಲಾಗಿದೆ. ವಿವಾದಗಳಿಗ ಆಸ್ಪದ ನೀಡದಂತೆ, ಸ್ಥಳಯ ಆಡಳಿತದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವೇ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಬೇಕು ಎಂದು ಸಭಯಲ್ಲಿ ಆಯೋಜಕರಿಗ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.


ಮೂರ್ತಿ ವಿಸರ್ಜನಾ ಪ್ರಕ್ರಿಯೆಯನ್ನು ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಜೆ ೬ ಗಂಟೆಯೊಳಗ, ಅಂದರ ಸೂರ್ಯಾಸ್ತಕ್ಕೂ ಮುನ್ನವೇ ಕಡ್ಡಾಯವಾಗಿ ಪೂರ್ಣಗೊಳಿಸ ಬೇಕು. ಪ್ರಸ್ತುತ ಮಳಯ ಕೊರತೆಯಿರುವುದರಿಂದ, ಸ್ಥಳಯ ಆಡಳಿತ ಸೂಚಿಸಿದ ಅಥವಾ ಎಲ್ಲಲ್ಲಿ ನೀರಿನ ಲಭ್ಯತೆ ಇದೆಯೋ ಅಲ್ಲಿ ಮಾತ್ರ ಮೂರ್ತಿ ವಿಸರ್ಜನೆಗ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.


ಜಲಮೂಲಗಳಿಗ ಹಾನಿಯಾಗದಂತೆ ವಿಸರ್ಜನೆಗೂ ಮುನ್ನ ಮೂರ್ತಿಯ ಮೇಲಿರುವ ಹೂವು ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಪ್ರತ್ಯೇಕಿಸಿ ಸ್ವಚ್ಚಗೊಳಿಸಬೇಕು ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಅಗತ್ಯವಾದ ಫೇಡ್ ಲೈಟ್ (ದೀಪದ ವ್ಯವಸ್ಥೆ) ಜೊತೆಗ ಯಾವುದೇ ಅನಾಹುತಗಳನ್ನು ತಪ್ಪಿಸಲು ನುರಿತ ಈಜುಗಾರರನ್ನು ನಿಯೋಜಿಸಲು ಅಧಿಕಾರಿಗಳಿಗ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಸಭಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ಅಧೀಕ್ಷಕ ಶಿವಂಷು ರಜಪೂತ, ಅಪರ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.