
ಹುಬ್ಬಳ್ಳಿ,ಆ೪: ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳು ಸಾರಿದ ಮಾನವೀಯತೆ, ಸಾಮರಸ್ಯ, ಸಹೋದರತ್ವ ಹಾಗೂ ಭಕ್ತಿ ಸಂದೇಶಗಳು ಸಮಾಜಕ್ಕೆ ಶಾಶ್ವತ ಮಾರ್ಗದರ್ಶನವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಹೇಳಿದರು.
ನಗರದ ಸಿದ್ಧಾರೂಢ ಮಠದ ಯಾತ್ರಿ ನಿವಾಸದಲ್ಲಿ ಶ್ರೀ ಕಾಲಕಾಲೇಶ್ವರ ಕಲಾ ಹಾಗೂ ಸಾಂಸ್ಕöÈತಿಕ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ ೨೦೭ನೇ ಜಯಂತಿ ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾನಿಧ್ಯವನ್ನು ಶ್ರೀ ಅಭಿನವ ಬಸವಣ್ಣಜ್ಜನವರು ವಹಿಸಿದ್ದರು. ಶ್ರೀಮತಿ ಲೀಲಾಂಬಿಕ ತುಪ್ಪದಗೌಡ, ಎಸ್.ಎಸ್. ಪಾಟೀಲ್, ಗಂಗಾಧರ್ ದೊಡ್ಡವಾಡ, ಅಶೋಕ್ ಗಾಣದಾಳ್, ಬಸವರಾಜ ಕೋಲೇರಿ ಪಾಲ್ಗೊಂಡಿದ್ದರು.






























