Home ಜಿಲ್ಲೆ ಕಲಬುರಗಿ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಿ: ಡಾ. ಬಾಬನಕರ್

ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಿ: ಡಾ. ಬಾಬನಕರ್

ಆಳಂದ: ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳವಲ್ಲ. ಜ್ಞಾನ, ವಿಚಾರ, ಸಂಸ್ಕøತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರಿಸುವ ಜ್ಞಾನಮಂದಿರವಾಗಿದೆ. ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಸಮಾಜದ ಪ್ರಗತಿಯಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಗ್ರಂಥಪಾಲಕ ಡಾ. ವಿಜಯಕುಮಾರ ಬಾಬನಕರ್ ಅವರು ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಣೆಯಲ್ಲಿ ಓದುಗರ ಬಳಗದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಲಾಯಿತು.
ಗ್ರಂಥಾಲಯದ ಸೇವೆ, ಪುಸ್ತಕಗಳ ಮಹತ್ವ ಹಾಗೂ ಓದುವ ಹವ್ಯಾಸದ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಪುಸ್ತಕ ಓದುಗರಾದ ಬಸವರಾಜ ಪಂಡಿತ್, ಸೂರ್ಯಕಾಂತ, ನಾಗರಾಜ್ ದೇವನೂರ, ಶಿವರಾಜಕುಮಾರ ತೊಳೆ, ತಾನಾಜಿ ಲವಟೆ, ಮಹೇಬೂಬ, ಕಲ್ಪನಾ ಚನಗುಂಡೆ, ರತನ್ ಜಿಡಗಾ, ಖಾಲಿದ್ ದರೋಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.