Home ಜಿಲ್ಲೆ ಕುಂದಗೋಳ ತಾಲೂಕು ಬೆಳೆಹಾನಿ: ಪರಿಹಾರಕ್ಕೆ ಯತ್ನದ ಭರವಸೆ

ಕುಂದಗೋಳ ತಾಲೂಕು ಬೆಳೆಹಾನಿ: ಪರಿಹಾರಕ್ಕೆ ಯತ್ನದ ಭರವಸೆ

ಕುಂದಗೋಳ ಆ.೮: ತಾಲೂಕಿನಲ್ಲಿ ಹೊಲದಲ್ಲಿ ಹಸಿರಿದ್ದರೂ ಬೆಳೆ ಸರಿಯಿಲ್ಲ. ಕೆಲವೆಡೆ ಬಿತ್ತಿಗೆ ಇಲ್ಲ. ಕೊಯ್ಲಿಗೆ ಬಂದ ಅಲ್ಪಸ್ವಲ್ಪ ಹೆಸರು ಬೆಳೆಗೆ ತುಂತುರು ಮಳೆ ಕಾಟದಿಂದ ಅದೂ ಕೂಡ ನೆಲಕಚ್ಚಿದ್ದು ಒಟ್ಟಾರೆ ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ರಾಜ್ಯ ಸಂಪುಟ ದರ್ಜೆ ಸಚಿವ ಸಂತೋಷ ಲಾಡ್ ಹೇಳಿದರು.


ಬೆಳೆ ಸಮೀಕ್ಷೆ ಕುರಿತು ಧಾರವಾಡ ಜಿಲ್ಲೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮಳೆ ಅಭಾವದಿಂದ ಜಿಲ್ಲೆಯಲ್ಲಿ ೨.೮೦ ಲಕ್ಷ ಹೆಕ್ಟೇರ ಬಿತ್ತನೆಯಾಗಿದ್ದು, ಸುಮಾರು ೪೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು-ಉದ್ದು, ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ಮೆಕ್ಕೆಜೋಳ ಸೇರಿದಂತೆ ಸೋಯಾಬಿನ್, ಹತ್ತಿ ಹಾಗೂ ವಿವಿಧ ಬೆಳೆಗಳು ಸಂಕಷ್ಟಕ್ಕೀಡಾಗಿದ್ದು ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದರು


ಶಾಸಕ ಎನ್.ಎಚ್ ಕೋನರಡ್ಡಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್.ಅಕ್ಕಿ, ಷಣ್ಮುಖ ಶಿವಳ್ಳಿ, ಗ್ಯಾರಂಟಿ ಸಮಿತಿ ಮಾಜಿ ಅಧ್ಯಕ್ಷ ಶಿವಾನಂದ ಬೆಂತೂರ, ಅನಿಲಕುಮಾರ ಪಾಟೀಲ, ಅರವಿಂದ ಕಟಗಿ, ಚಂದ್ರಶೇಖರ ಜುಟ್ಟಲ, ರಮೇಶ ಕೊಪ್ಪದ, ಅಡಿವೆಪ್ಪ ಶಿವಳ್ಳಿ, ಗೌಡಪ್ಪಗೌಡ ಪಾಟೀಲ, ಜಗದೀಶ ಉಪ್ಪಿನ, ಶಿವಾನಂದ ಮುತ್ತಣ್ಣವರ ಸೇರಿದಂತೆ ಅನೇಕರಿದ್ದರು.