
ಅಫಜಲಪುರ: ಸಾಹಿತ್ಯ ಕ್ಷೇತ್ರವು ಪ್ರತಿಯೊಬ್ಬರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಈ ನಿಟ್ಟಿನಲ್ಲಿ ವಿವಿಧ ಭಾಷೆಗಳ ಕೃತಿಗಳು ಭಾಷಾಂತರ ಮಾಡುವುದರಿಂದ ಓದುಗರ ಜ್ಞಾನವೃದ್ದಿಗೆ ಸಹಕಾರವಾಗುತ್ತದೆ ಎಂದು ಖ್ಯಾತ ಭಾಷಾಂತರಕಾರ ಡಾ.ಸೂರ್ಯಕಾಂತ ಸುಜ್ಯಾತ್ ಹೇಳಿದರು.
ಪಟ್ಟಣದ ಮದರ್ ತೆರೆಸಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾಷಾಂತರ ಕೃತಿಗಳಿಂದ ನಾಡಿನ ಬರಹಗಾರ ಕೃತಿ ಆಸೆಯ ಪರಿಚಯ ಮಾಡಿದಂತಾಗುತ್ತದೆ. ಕೃತಿಗಳು ಓದುವದರಿಂದ ಬದುಕು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ನಿಕಟ ಪೂರ್ವ ಕಸಾಪ ತಾಲೂಕಾಧ್ಯಕ್ಷ ಡಿ.ಎಂ.ನದಾಫ್ ಮಾತನಾಡಿ ಅವರು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಸಾಹಿತ್ಯಿಕ ಕುರಿತಾಗಿರುವ ಕೃತಿಗಳು ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನದ ಶಕ್ತಿ ವೃದ್ಧಿಸುತ್ತದೆ ಎಂದ ಅವರು ಪ್ರಸ್ತುತದಲ್ಲಿ ಪುಸ್ತಕಗಳು ಓದುವ ಅಭಿರುಚಿ ಕ್ಷೀಣಿಸುತ್ತಿದೆ ಈ ನಡುವೆ ವಿದ್ಯಾರ್ಥಿಗಳು ಪುಸ್ತಕಗಳು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ವಿರೇಂದ್ರ ಪಾಟೀಲ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೆ. ನಾರಾಯಣ, ನಿವೃತ್ತ ಪ್ರಾಧ್ಯಾಪಕ ನಾಮದೇವ ಕಡಕೋಳ, ಸಾಹಿತಿ ಡಾ. ಸಂಗಣ್ಣ ಸಿಂಗೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಲೀಂ ಶೇಖ ವಹಿಸಿ ಮಾತನಾಡಿದರು.
ಪಂಕಜ ನಾಯ್ಕೋಡಿ ಸ್ವಾಗತಿಸಿದರು. ಶಿವಲೀಲಾ ಪಾಟೀಲ ನಿರೂಪಿಸಿದರು. ಸುಮೀತ್ ಶಿಂಧೆ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶಿವಾನಂದ ಮುಗಳಿ ಹಾಗೂ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರ ಸಂವಾದದಲ್ಲಿ ಭಾಗಿಯಾಗಿದ್ದರು.






























