
ಬೆಂಗಳೂರು, ಆ. ೧೧- ಜನರ ಸೇವೆಯ ನಾವೆಲ್ಲರೂ ಜನ ಸೇವೆಯೇ ಎಲ್ಲರ ಮೂಲ ಉದ್ದೇಶ. ಎಲ್ಲರೂ ಒಟ್ಟಾಗಿ ಟೀಮ್ ಕರ್ನಾಟಕ ಪರಿಕಲ್ಪನೆ ಮೂಲಕ ಜನ ಸೇವೆ ಮಾಡೋಣ ಎಂದು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಕರೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಭ್ರಷ್ಟಾಚಾರ ಸಹಿಸುವುದಿಲ್ಲ. ಭ್ರಷ್ಟಾಚಾರದ ಜತೆ ರಾಜಿ ಇಲ್ಲ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ವಿಧಾನಸೌಧದ ಬ್ಲಾಕ್ವೆಂಟ್ ಹಾಲ್‌ನಲ್ಲಿಂದು ರಾಜ್ಯ ಸರ್ಕಾರಿ ನೌಕರರ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಮಂತ್ರಿಗಳಿದ್ದರೂ ನಾವು ಮೂಲ ಸರ್ಕಾರಿ ನೌಕರರು ೭ ಕೋಟಿ ಜನರ ಸೇವೆ ಮಾಡುವ ಭಾಗ್ಯ ಐದೂವರೆ ಲಕ್ಷ ನೌಕರರಿಗೆ ಸಿಕ್ಕಿದೆ. ಜನಸೇವೆಯೆ ನಮ್ಮೆಲ್ಲರ ಮೂಲ ಉದ್ದೇಶವಾಗಬೇಕು ಎಂದು ಹೇಳಿದರು.
ಅಧಿಕಾರಿಗಳು ನೌಕರರ ಪ್ರತಿಯೊಬ್ಬರ ಚಲನವಲನಗಳ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಅವರ ಚಲನವಲಗಳ ಬಗ್ಗೆ ನಿಗಾ ಇಡುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ದೇವರು ಅವಕಾಶ ಕೊಟ್ಟಿದ್ದಾನೆ. ಜನರ ಕೆಲಸ ಮಾಡಿ ಎಂದರು.
ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಇಲ್ಲ. ಊಟ ಮಾಡಲು ಎಷ್ಟು ಖರ್ಚು ಮಾಡುತ್ತೀರೀ, ಎಷ್ಟು ಊಟ ಮಾಡಲು ಸಾಧ್ಯ. ಹಾಗಾಗಿ ದೇವರು ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಜನರ ಸೇವೆ ಮಾಡಿ ಎಂದು ನೌಕರರಿಗೆ ತಿಳಿ ಹೇಳಿದರು.
ಪ್ರತಿಯೊಬ್ಬ ಅಧಿಕಾರಿ, ನೌಕರರು ಕೇಂದ್ರ ಸ್ಥಾನದಲ್ಲಿ ಇರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರು ಸಮಸ್ಯೆಗಳನ್ನು ಹೊತ್ತು ಬಂದಾಗ ಏನೋ ಒಂದುಸಬೂಬು ಹೇಳಿ ಸಾಗಿ ಹಾಕುವ ಪ್ರಯತ್ನ ಬೇಡ. ಎಲ್ಲವನ್ನು ಕೌನೂನು ಚೌಕಟ್ಟಿನಲ್ಲೇ ಮಾಡಿ. ಕಾನೂನು ಬಿಟ್ಟು ಏನನ್ನೂ ಮಾಡುವುದು ಬೇಡ ಎಂದರು.
ಜನರಿಗೆ ಸರ್ಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ ತಲುಪಿಸುವ ಕೆಲಸ ಮಾಡಬೇಕು. ಸ್ಥಳೀಯ ಸಮಸ್ಯೆಗಳು ಅಲ್ಲಿಯೇ ಪರಿಹಾರವಾಗಬೇಕು. ಅವುಗಳನ್ನು ಮುಂದಕ್ಕೆ ಕಳುಹಿಸುವ ಪ್ರಯತ್ನಗಳು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಜನರಿಗೆ ಸಹಾಯ ಮಾಡಲೆಂದೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಈ ಗ್ಯಾರಂಟಿ ಯೋಜನೆಗಳಿಂದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ. ಈಗ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಬೆಂಗಳೂರು ಸೇರಿದಂತೆ ಇಂದು ೭೫೦ ಕಡೆಯಿಂದ ಈ ವಿಡಿಯೋ ಸಂವಾದವನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ನೌಕರರು ಜನಸೇವೆಯ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕರ್ನಾಟಕದ ಇಂದಿನ ಪ್ರಗತಿಗೆ ಈ ಹಿಂದೆ ಕೆಲಸ ಮಾಡಿರುವ, ಈಗ ಕೆಲಸ ಮಾಡುತ್ತಿರುವ ನೌಕರರ ಕೊಡುಗೆ ಬಹಳ ದೊಡ್ಡದು. ನಿಮ್ಮ ಪರಿಶ್ರಮವನ್ನು ಮೆಚ್ಚುತ್ತೇನೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರು ಸರ್ಕಾರಿ ನೌಕರರಿಗೆ ಗ್ಯಾರಂಟಿ ಯೋಜನೆಗಳು ಬೇಡ ಎಂದು ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಬಡವರಿಗೆ ಒಂದು ಸೂರು ಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ನೀವೆಲ್ಲಾ ಸಹಕಾರ ಕೊಟ್ಟು ಜನಸೇವೆ ಮಾಡಿ. ನಿಮ್ಮ ಕಚೇರಿಗೆ ಬರುವ ಜನರನ್ನು ಪ್ರೀತಿಯಿಂದ ಮಾತನಾಡಿಸಿ, ಗೌರವ ನೀಡಿ. ಜನಪ್ರತಿನಿಧಿಗಳು ಬಂದಾಗ ಗೌರವ ಕೊಡಿ ಎಂದರು
ಜನರ ಸಮಸ್ಯೆಗಳ ಪರಿಹಾರಕ್ಕಾಗಿಯೇ ನಾವು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ತಿಂಗಳಿಗೆ ಎರಡು ಬಾರಿ ತಾಲ್ಲೂಕಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ,ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು,ಗ್ರಾಮಗಳು, ಹೋಬಳಿಗಳಿಗೆ ತೆರಳಿ ಸ್ಥಳ ವೀಕ್ಷಣೆ ಮಾಡಬೇಕು ಎಂದು ಅವರು ಸೂಚಿಸಿದರು
ಪ್ರತಿಯೊಂದು ಪಂಚಾಯ್ತ್‌ನಲ್ಲಿ ಭಾರತ್ ಜೋಡೋ ಯುವಕ ಸಂಘ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಯುವಕರಿಗೆ ಇದರಿಂದ ಅನುಕೂಲವಾಗುತ್ತದೆ. ಪ್ರತಿಯೊಬ್ಬರೂ ದೇಶ ಸೇವೆ, ಸಂವಿಧಾನ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಬೇಕು ಎಂಬುದು ಈ ಸಂಘ ಸ್ಥಾಪನೆಯ ಉದ್ದೇಶವಾಗಿದೆ ಎಂದರು.
ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡಿ, ಗ್ಯಾರಂಟಿ ಯೋಜನೆಗಳು ದುರ್ಬಳಕೆಯಾಗಿವೆ. ಮರಣ ಹೊಂದಿದರೂ ಆ ಬಗ್ಗೆ ಮಾಹಿತಿ ಕೊಡದೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲಾಗುತ್ತಿದೆ. ಹಾಗಾಗಿ ನಾವು ತಂತ್ರಜ್ಞಾನ ಬಳಸಿ ದುರ್ಬಳಕೆಯನ್ನು ತಡೆಗಟ್ಟಲು ಮುಂದಾಗಿದ್ದೇವೆ. ಶಕ್ತಿ ಯೋಜನೆಯಡಿ ಗುರುತಿನ ಚೀಟಿ ನೀಡುವ ಚಿಂತನೆಯೂ ಇದೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಸವಲತ್ತುಗಳನ್ನು ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯದವರಿಗೆ ನಾವು ಸಹಾಯ ಮಾಡೋಣ ಎಂದರು.
ಪ್ರತಿಯೊಬ್ಬ ಅಧಿಕಾರಿಗಳು ಫಲಾನುಭವಿಗಳ ದಾಖಲೆ ಇಡಬೇಕು. ನಮ್ಮ ಲೀಡರ್‌ಗಳು ಛತ್ರಿಗಳಿದ್ದಾರೆ. ಎಲ್ಲವನ್ನು ಗಮನದಲ್ಲಿಟ್ಟುಕೊಳ್ಳಿ. ಇಂಜಿನಿಯರ್‌ಗಳು ಬೋಗಸ್ ಬಲ್‌ಗಳನ್ನು ಮಾಡುತ್ತಿದ್ದಾರೆ. ಇದನ್ನು ಬಡಿದು ಹಾಕಬೇಕು. ತಂತ್ರಜ್ಞಾನ ಮೂಲಕ ಬೋಗಸ್ ಬಿಲ್‌ಗಳಿಗೂ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.
ಅಧಿಕಾರಿಗಳು ಶಾಲೆಗಳು, ಹಾಸ್ಟೆಲ್‌ಗಳು, ನ್ಯಾಯಬೆಲೆ ಅಂಗಡಿ, ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಬೇಕು. ನಿಮಗೆ ನ್ಯಾಯ ಕೊಡುವ ಅಧಿಕಾರ ಇದೆ. ಯಾರ ಒತ್ತಡಕ್ಕೂ ಮಣಿಯದೆ ಜನರ ಸೇವೆ ಮಾಡಿ
ಬರ ಪರಿಹಾರ ಕಾಮಗಾರಿಗಳಿಗೂ ಗಮನಕೊಡಿ ಎಂದು ಹೇಳಿದರು.
ವಿದ್ಯಾರ್ಥಿನಿಲಯಗಳಲ್ಲಿ ಸಮಸ್ಯೆಗಳನ್ನು ಆಲಿಸಲು ಒಂದು ದೂರು ಬಾಕ್ಸ್ ಇಡುವ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರತಿಯೊಬ್ಬ ನೌಕರರು ಪ್ರಾಮಾಣಿಕವಾಗಿ, ಮನಸ್ಸಿನಿಂದ ಕೆಲಸ ಮಾಡಿ. ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುವ ಮೂಲಕ ಜನ ಸೇವೆ ಮಾಡಬೇಕು. ಸೇವೆಯಲ್ಲಿ ನಿಸ್ವಾರ್ಥ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ನಾನು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯ, ಸಮಾನತೆ ಮೇಲೆ ಕೆಲಸ ಮಾಡುತ್ತೇನೆ. ನೌಕರರು ಅಧಿಕಾರಿಗಳು ಸಹ ಸಮಾನತೆ, ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಅಧಿಕಾರ ಶಕ್ತಿಯ ಸಂಕೇತ ಅಲ್ಲ. ಅಧಿಕಾರ ಎನ್ನುವುದು ಜವಾಬ್ದಾರಿ. ಅಧಿಕಾರ ಸಿಂಹಾಸನ ಎನ್ನುವುದು ಬಿಟ್ಟ ಜನಸೇವೆಗೆ ಸಿಕ್ಕ ಅವಕಾಶ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಅವರು ಹೇಳಿದರು.
ಕರ್ನಾಟಕ ಉತ್ತಮ ಮಾನವ ಸಂಪನ್ಮೂಲ ಹೊಂದಿದೆ. ತಂತ್ರಜ್ಞಾನದಲ್ಲಿ ಮುಂದಿದೆ. ಇಡೀ ಜಗತ್ತಿನಲ್ಲೇ ನಮ್ಮ ರಾಜ್ಯ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಸಿದ್ಧಿ ಪಡೆದಿದೆ. ಇದಕ್ಕೆಲ್ಲಾ ಎಲ್ಲ ನೌಕರರ ಶ್ರಮವೂ ಇದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಚಿವರುಗಳಾದ ಲಕ್ಷ್ಮಣಸವದಿ, ಸಂತೋಷ್ ಲಾಡ್, ವಿಜಯಾನಂದ ಕಾಂಶಪುರ್, ಅಜೇಯ್ ಸಿಂಗ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಕುಣಿಗಲ್‌ನಿಂದ ಉಪಮಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಈ ವಿಡಿಯೋ ಸಂವಾದದಲ್ಲಿ ಭಾಗಿಯಾದರು.
ಇಂದು ಖಾತೆ ಹಂಚಿಕೆ
ನೂತನ ಸಚಿವರುಗಳಿಗೆ ಇಂದು ಸಂಜೆಯೊಳಗೆ ಖಾತೆ ಹಂಚಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಸರ್ಕಾರಿ ನೌಕರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ಸಚಿವರುಗಳಿಗೆ ಇಂದು ಖಾತೆ ಹಂಚಿಕೆ ಮಾಡುತ್ತಿದ್ದೇನೆ ಎಂದು ಹೇಳಿದರು.































