Home ಜಿಲ್ಲೆ ಬೆಂಗಳೂರು ವೆಂಕಟರಮಣ ಸ್ವಾಮಿ ದೇವಸ್ಥಾನದ ಇಒ ಮಂಜುನಾಥ್ ವಿರುದ್ಧ ಭ್ರಷ್ಟಾಚಾರ

ವೆಂಕಟರಮಣ ಸ್ವಾಮಿ ದೇವಸ್ಥಾನದ ಇಒ ಮಂಜುನಾಥ್ ವಿರುದ್ಧ ಭ್ರಷ್ಟಾಚಾರ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 39;

ಕೆಜಿಎಫ್: ಆ. ೩೧. “ನಾವು ಪ್ರತಿದಿನ ದೇವಸ್ಥಾನಕ್ಕೆ ಹೋದರೆ “ಅಲ್ಲಿ ದೇವರು ಇಲ್ಲದಂತಾಗಿದೆ, ದೇವರ ನಾಮ ಬಿದ್ದು ಹೋಗಿದ್ದು ಗಭ೯ಗುಡಿಯ ಲ್ಲಿ ವಾಸನೆ ಬರುತ್ತಿದೆ ” ಎಂದು ಅಳಲು ತೋಡಿಕೊಂಡ ಅವರು, ದೇವಸ್ಥಾನದ ಆಡಳಿತಾಧಿಕಾರಿ (ಇಒ) ಮಂಜುನಾಥ್ ಅವರ ಕಾರ್ಯವೈಖರಿಯಿಂದ ದೇವಸ್ಥಾನದ ಪವಿತ್ರತೆ ಮತ್ತು ನಿರ್ವಹಣೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಶ್ರೀ ವಾರಿ ಸಮಿತಿ ಸದಸ್ಯ ಹಿಂದುಳಿದ ವಗ೯ಗಳ ತಾಲ್ಲೂಕು ಕಾಯ೯ದಶಿ೯ ಎಸ್ ಬಾಬು ಆರೋಪಿಸಿದ್ದಾರೆ.


ನಗರದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ದೇವಸ್ಥಾನದ ದುರಸ್ತಿ ಹಾಗೂ ಖರ್ಚು-ವೆಚ್ಚಗಳ ಬಗ್ಗೆ ಸ್ಪಷ್ಟ ಆದೇಶಗಳು ಹಾಗೂ ಅನುಮೋದನೆಗಳಿದ್ದರೂ ಸಹ, ಇಒ ಮಂಜುನಾಥ್ ಅವರು ಅದಕ್ಕೆ ತಕ್ಕಂತೆ ಸ್ಪಂದಿಸುತ್ತಿಲ್ಲ ಹಾಗೂ ಯಾವುದೇ ಅನುಮತಿಗಳನ್ನು ನೀಡುತ್ತಿಲ್ಲ ಎಂದು ದಾಖಲೆಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತದಲ್ಲಿ ಏಕಪಕ್ಷೀಯ ನಿರ್ಧಾರಗಳು ಮತ್ತು ತಾರತಮ್ಯ: ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಮತ್ತು ಅಂಗಡಿಗಳ ಬಾಡಿಗೆ ವಸೂಲಾತಿ ವಿಚಾರದಲ್ಲಿ ಕಾನೂನುಬದ್ಧ ಪ್ರಕ್ರಿಯೆಗಳನ್ನು ಪಾಲಿಸದೆ, ತಮ್ಮ ಇಚ್ಛೆಯಂತೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಾಬು ದೂರಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಅದನ್ನು ಜಾರಿಗೊಳಿಸದಿರುವುದು, ಬಾಡಿಗೆ ವಸೂಲಿಯಲ್ಲಿ ವೈಫಲ್ಯ, ಮತ್ತು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಉದಾಸೀನತೆ ತೋರುತ್ತಿರುವ ಇಒ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಣಕಾಸಿನ ಅಕ್ರಮ ಹಾಗೂ ದೇವಸ್ಥಾನದ ಜಮೀನು ಒತ್ತುವರಿ ಆರೋಪ: ದೇವಸ್ಥಾನಕ್ಕೆ ಬರುವ ಆದಾಯ ಹಾಗೂ ಖರ್ಚು-ವೆಚ್ಚಗಳ ಲೆಕ್ಕಪತ್ರಗಳಲ್ಲಿ ಅಪಾರ ವ್ಯತ್ಯಾಸವಿರುವುದಲ್ಲದೆ, ದೇವಸ್ಥಾನದ ಆಸ್ತಿಗಳನ್ನು ರಕ್ಷಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ.

ಈ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಎಲ್ ಬಾಬು ಮಾತನಾಡಿ ಪೇಷ್ಕರ್ ದೇವಸ್ಥಾನಕ್ಕೆ ಬಂದರು ಏಕೆ ಅಧಿಕಾರ ಸ್ವೀಕಾರ ಮಾಡಲಿಲ್ಲ ಇದರ ಹಿಂದೆ ಯಾರ ಕುತಂತ್ರ ಇದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ದೇವಾಲಯದ ಮುಂಭಾಗದಲ್ಲಿ ನಿಮೀ ೯ಸಲಾಗಿರುವ ಮಳಿಗೆಗಳಿಂದ ಬಾಡಿಗೆ ಹಣ ೧.೨೦ ಕೋಟಿ ಭಾಕಿ ಬರಬೇಕಿದ್ದು ಏಕೆ ವಸೂಲಿ ಮಾಡುತ್ತಿಲ್ಲ ಹಾಗೂ ಶ್ವತ್ ಕಟ್ಟೆ ದುರಸ್ಥಿಪಡಿಸಲು ಧಾನಿಗಳು ಮುಂದೆ ಬಂದರು ಏಕೆ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ದೇಗುಲಕ್ಕೆ ಲಕ್ಷಾಂತರ ಹಾಗೂ ಕೋಟ್ಯಂತರ ರೂಪಾಯಿಗಳ ಮೌಲ್ಯದ ದೇಣಿಗೆ ಮತ್ತು ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಸೂಕ್ತ ರಸೀದಿಗಳನ್ನು ಒದಗಿಸದಿರುವುದು ಭ್ರಷ್ಟಾಚಾರದ ಶಂಕೆಗೆ ಎಡೆಮಾಡಿಕೊಟ್ಟಿದ್ದು. ಈ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ ಎಂದು ಹೇಳಿದರು.


ಇಓ ಮಂಜುನಾಥ್ ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ ಅವರು, ದೇವಸ್ಥಾನದ ಆಸ್ತಿಪಾಸ್ತಿಗಳು, ಚಿನ್ನ-ಬೆಳ್ಳಿ ಮತ್ತು ಇತರೆ ಕಾಣಿಕೆಗಳ ಲೆಕ್ಕಪತ್ರದಲ್ಲಿ ಭಾರೀ ವ್ಯತ್ಯಾಸವಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀವಾರಿ ಸೇವಕರ್ತರಾದ ಎಸ್ ಬಾಬು, ಮಾಜಿ ನಗರಸಭೆ ಸದಸ್ಯ ನಟರಾಜನ್,ಡೇವಿಡ್, ಮುಖಂಡರಾದ ಹನುಮಾನ್ ದಾಸ್ , ಮುನಿಸ್ವಾಮಿ, ಮಂಜುನಾಥ್ ಎಂ.ಆರ್, ಮಾನವ ಹಕ್ಕುಗಳ ಅಧ್ಯಕ್ಷ ಎಲ್ ಬಾಬು ಇತರರಿದ್ದರು.