Home ಮುಖಪುಟ ಸುದ್ದಿ ಕ್ಷೇತ್ರ ಪುನರ್ ವಿಂಗಡಣೆ:ಸ್ಟಾಲಿನ್ ಪವಾರ್ ಮನವೊಲಿಕೆಗೆ ಕೈ ಕಸರತ್ತು

ಕ್ಷೇತ್ರ ಪುನರ್ ವಿಂಗಡಣೆ:ಸ್ಟಾಲಿನ್ ಪವಾರ್ ಮನವೊಲಿಕೆಗೆ ಕೈ ಕಸರತ್ತು

ನವದೆಹಲಿ, ನ.೨೯-ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿಚಾರದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದೊಳಗೆ ಭಿನ್ನಾಭಿಪ್ರಾಯ ಗಳು ತಲೆದೋರಿರುವ ಬೆನ್ನಲ್ಲೇ, ಮೈತ್ರಿಕೂಟದ ಒಗ್ಗಟ್ಟು ಕಾಪಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಮಿತ್ರಪಕ್ಷಗಳ ನಾಯಕರಾದ ಶರದ್ ಪವಾರ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.


ನಲ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗ ಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ರಾಜಕೀಯ ವಾಗಿ ಮಹತ್ವ ಪಡೆದುಕೊಂಡಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ವಿಚಾರದಲ್ಲಿ ಪ್ರತಿಪಕ್ಷಗಳು ಒಂದೇ ನಿಲುವು ಹೊಂದಿರಬೇಕು ಎಂಬುದು ಕಾಂಗ್ರೆಸ್ ನಾಯಕರ ಉದ್ದೇಶವಾಗಿದೆ.


ಶರದ್ ಪವಾರ್ ಜತೆ ಖರ್ಗೆ, ಸೋನಿಯಾ ಭೇಟಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಜೆ ಮುಂಬೈನಲ್ಲಿ ಎನ್‌ಸಿಪಿ (ಶರದ್ಚಂದ್ರ ಪವಾರ್) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ರಾತ್ರಿ ಸುಮಾರು ೮ ಗಂಟೆಗೆ ಮುಂಬೈನ ಬ್ರೀಚ್ ಕ್ಯಾಂಡಿ ಪ್ರದೇಶದಲ್ಲಿ ಈ ಭೇಟಿ ನಡೆಯುವ ಸಾಧ್ಯತೆಯಿದ್ದು ಸೋನಿಯಾ ಗಾಂಧಿ ಕೂಡ ಖರ್ಗೆ ಅವರೊಂದಿಗೆ ತೆರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.


ಹೀಗಾಗಿ ಪವಾರ್ ಅವರೊಂದಿಗೆ ಚರ್ಚಿಸಿ ಪ್ರತಿಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಕಾಂಗ್ರೆಸ್ ನಾಯಕತ್ವ ಪ್ರಯತ್ನಿಸುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶರದ್ ಪವಾರ್ ಅವರ ಆರೋಗ್ಯದ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಈ ಭೇಟಿ ಆಯೋಜಿಸಲಾಗುತ್ತಿದೆ .


ಸ್ಟಾಲಿನ್ ಮನವೊಲಿಕೆಗೂ ಕಾಂಗ್ರೆಸ್ ಪ್ರಯತ್ನ
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೂ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಲಿದ್ದಾರೆ.


ಕ್ಷೇತ್ರ ಪುನರ್ವಿಂಗಡಣೆಯ ಪರಿಷ್ಕೃತ ಪ್ರಸ್ತಾವನೆಗೆ ಡಿಎಂಕೆ ಬೆಂಬಲ ಸೂಚಿಸಿರುವುದು ಇಂಡಿಯಾ ಮೈತ್ರಿಕೂಟದಲ್ಲಿ ಮತ್ತೊಂದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಮತ್ತು ಕ್ಷೇತ್ರಗಳ ಸಂಖ್ಯೆಯ ವಿಚಾರದಲ್ಲಿ ಡಿಎಂಕೆ ತನ್ನದೇ ಆದ ನಿಲುವು ಹೊಂದಿದೆ.


ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರೊಂದಿಗೆ ಚರ್ಚಿಸಿ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸೋನಿಯಾ, ರಾಹುಲ್ ಮತ್ತು ಖರ್ಗೆ ಮುಂದಾಗಿದ್ದಾರೆ.


ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪ್ರಮುಖ ಚರ್ಚೆಯ ವಿಷಯವಾಗುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ತಮ್ಮ ಮಂಡಿಸಬೇ ಕೆಂಬುದೇ ಕಾಂಗ್ರೆಸ್‌ನ ನಿಲುವಾಗಿದೆ


ಆದರೆ, ಮಿತ್ರಪಕ್ಷಗಳಲ್ಲೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟು ಪರೀಕ್ಷೆಗೆ ಒಳಗಾಗಿದೆ.


ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರ ಈ ರಾಜಕೀಯ ಸಂಧಾನ ಪ್ರಯತ್ನ ಯಶಸ್ವಿಯಾಗುತ್ತದೆಯೇ? ಶರದ್ ಪವಾರ್ ಮತ್ತು ಸ್ಟಾಲಿನ್ ಅವರನ್ನು ಒಂದೇ ವೇದಿಕೆಗೆ ತರಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತದೆಯೇ? ಎಂಬುದು ಈಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.