
ಕೋಲಾರ,ಸೆ,೧೩- ಉತ್ತರಾಖಂಡದ ಹಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಸ್ಟ್ ೮ ರಂದು ಬಿಜೆಪಿ ಹಾಗೂ ಆರ್.ಎಸ್.ಎಸ್. ವಿರುದ್ದ ಮಾಡಿದ ಭಾಷಣದ ವೇದಿಕೆಯನ್ನು ಆಗಸ್ಟ್ ೧೦ ರಂದು ಗೋ ಮೂತ್ರ ಹಾಗೂ ಗಂಗಾಜಲ ಮೂಲಕ ಶುದಿಕರಣ ಮಾಡಿರುವುದು ದಲಿತರು ಮತ್ತು ಶೋಷಿತ ವರ್ಗಗಳಿಗೆ ಮಾಡಿದ ಅವಮಾನವಾಗಿದೆ ಎಂದು ಜಿಲ್ಲಾ ಕಾಂಗ್ರಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ರಮೇಶ್ ತೀವ್ರವಾಗಿ ಖಂಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾಂಗ್ರಸ್ ಪ್ರಚಾರ ಸಮಿತಿಯ ಸದಸ್ಯರು ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕ್ಕಿಯ ಅವರ ಆದೇಶದ ಮೇರೆಗೆ ಇಂದು ಕಪ್ಪು ಪಟ್ಟಿ ಧರಿಸಿ ಬಿ,ಆರ್,ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ನಂತರ ಸುಮಾರು ೭-೮ ದಶಕಗಳ ಇತಿಹಾಸದಲ್ಲಿ ಇಂಥಹ ಅಪಮಾಕರವಾದ ಘಟನೆ ನಡೆದಿಲ್ಲ.. ದಲಿತ ಸಮುದಾಯದ ಮುಖಂಡರಾಗಿ ಬಳದು ಬಂದ ಪಾರ್ಲಿಮೆಂಟ್ ವಿಪಕ್ಷದ ನಾಯಕರಾದ ಹಿರಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ಜಾತಿಯ ಕಾರಣಕ್ಕಾಗಿ ಅವಮಾನಿಸುವ ರೀತಿಯಲ್ಲಿ ವೇದಿಕೆ ಶುದ್ದೀಕರಣ ನಡೆಸಿರುವುದು ಸಮಾಜದಲ್ಲಿರುವ ಜಾತಿ ತಾರತಮ್ಯದ ಆಸ್ಪಶ್ಯತೆಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಮಾಜಿಕ ವಿಭಜನೆಯನ್ನು ಉತ್ತೇಜೆಸುತ್ತದೆ ಎಂದು ಅಕ್ಷೇಪಿಸಿದರು.
ವೇದಿಕೆ ಶುದ್ದೀಕರಣ ಹೆಸರಿನಲ್ಲಿ ನಡೆದಿರುವ ಕೃತ್ಯವು ಇಡೀ ದಲಿತ ಸಮುದಾಯದ ಭಾವನೆಗಳಿಗ ಧಕ್ಕ ತಂದಿದೆ ಎಂದು ಪಾರ್ಲಿಮೆಂಟ್‌ನಲ್ಲಿ ಆರೋಪಿಸಿ ರಾಹುಲ್ ಗಾಂಧಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ಅವರ ವಿರುದ್ದ ದಲಿತ ಎಂಬ ಪದ ಬಳಿಕೆಯನ್ನು ಮುಂದಿಟ್ಟು ಕೊಂಡು ಎಫ್‌ಐಆರ್ ಮಾಡಲಾಗಿದೆ. ಸಂವಿಧಾನಬದ್ಧವಾಗಿ ನ್ಯಾಯ ಕೇಳಿದ ನಮ್ಮ ನಾಯಕರಿಗ ಬ್ಲಾಕ್ ಮೇಲ್ ಬದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ವಿ.ರಾಜಪ್ಪ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಮಹತ್ವದ ಹಕ್ಕುಗಳನ್ನು ಕಲ್ಲಿಸಿದ್ದಾರ. ಸಂವಿಧಾನದ ೧೭ನೇ ವಿಧಿಯಡಿ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಸಾರ್ವಜನಿಕವಾಗಿ ಜಾತೀಯತೆಯನ್ನು ಪ್ರದರ್ಶಿಸುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನ ಅಪಮಾನಿಸುವಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ವಿಷಾಧಿಸಿದರು.
ಖರ್ಗೆ ಅವರು ಪರಿಶಿಷ್ಟಜಾತಿಗೆ ಸೇರಿದವರಾಗಿರುವ ಕಾರಣ ಅವರ ಉಪಸ್ಥಿತಿಯಿಂದ ಮೈದಾನ ಅಪವಿತ್ರವಾಗಿದೆ ಎಂಬ ರೀತಿಯಲ್ಲಿ ಬಿಂಬಿಸಿ ಶುದ್ದೀಕರಣ ನಡೆಸಲಾಗಿದೆ ಇದು ಕೇವಲ ರಾಜೀಕಿಯ ವಿರೋಧವಲ್ಲ ಜಾತಿ ಅಧಾರಿತ ಅವಮಾನ ಮತ್ತು ದಲಿತ ಸಮುದಾಯದ ಘನತೆಗೆ ಧಕ್ಕೆಯುಂಟು ಮಾಡಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಮಾಜಿಕ ಸೌಹಾರ್ದತೆಗ ಅಪಾಯಕಾರಿಯಾಗಿವೆ. ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಮೂಡಿಸುವಂತಹ ಕೃತ್ಯಗಳಿಗ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ವಿ,ರಮಾನುಜ, ಜಿಲ್ಲಾ ಸಂಯೋಜಕ ಗಿರೀಶ್, ಸದಸ್ಯರಾದ ನಾಗರಾಜ್ ಗೌಡ, ಪಿ.ನಾರಾಯಣಪ್ಪ, ವೆಂಕಟೇಶ್ ರಾಜು, ಸುಬ್ರಮಣಿ, ರಾಮಮೂರ್ತಿ ನಾಯ್ಡು, ರಂಜಿತ್ ಕುಮಾರ್, ಮುನಿಯಪ್ಪ, ದೇವಕುಮಾರ್, ಕೆ.ಎನ್. ಸುರೇಶ್, ಶ್ರೀರಾಮುಲು, ವಿ.ರೂಪ ಇದ್ದರು.
































