Home ಜಿಲ್ಲೆ ಸ್ಪರ್ಧಾ ವಿಜೇತರು

ಸ್ಪರ್ಧಾ ವಿಜೇತರು

ಹುಬ್ಬಳ್ಳಿ,ಸೆ೨೮: ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ನ್ಯಾಷನಲ್ ಪೇಜಂಟ್ ಸ್ಫರ್ಧೆಯಲ್ಲಿ ಹುಬ್ಬಳ್ಳಿಯ ಶಿಶು ಕೇರ್ ಆಸ್ಪತ್ರೆಯ ಉದರ ತಜ್ಞೆ ಡಾ.ರಶ್ಮಿ ಮಾನಿ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ರಶ್ಮಿ ಅವರು, ಬೆಂಗಳೂರಿನ ವಿದ್ಯಾರಣ್ಯಪುರಂನ ಕಿಂಗ್ ಮೆಡೋಸ್ ಲಕ್ಸುರಿ ವೆಡ್ಡಿಂಗ್ ವೆನ್ಯೂನಲ್ಲಿ ಪ್ರತಿಭಾ ಪಾಟೀಲ ಅವರ ಸಹಯೋಗದಲ್ಲಿ ಸೆ.೮ ರಿಂದ ೧೧ ವರೆಗೆ ನಡೆದ ಮಿಸೆಸ್ ಇಂಡಿಯಾ ನ್ಯಾಷನಲ್ ಪೇಜಂಟ್ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ೨೭ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ನಾನು ಫೈನ್‌ಲಿಸ್ಟ್ ಆಗಿ ಆಯ್ಕೆಯಾಗಿದ್ದು, ಅಂತಿಮ ಸುತ್ತಿನಲ್ಲಿ ಮಿಸೆಸ್ ಇಂಡಿಯಾ ನ್ಯಾಷನಲ್ ಕಿರೀಟ್ ಪಡೆದುಕೊಂಡೆನು ಎಂದರು.


ಮೊಟ್ಟಮೊದಲ ಬಾರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತೋಷ ನೀಡಿದೆ ಎಂದರು.