
ಮುನವಳ್ಳಿ,ಜು.೩೦: ಪಟ್ಟಣದ ಜೆ.ಎಸ್.ಪಿ ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಜರುಗಿತು.
ಪ್ರಾಸ್ತಾವಿಕ ವಾಗಿ ಪ್ರಾಚಾರ್ಯ ಡಾ ಎಮ್.ಎಸ್.ಬಾಗೇವಾಡಿ, ಮಾತನಾಡಿ ನಮ್ಮ ಶರಿರಗಳಲ್ಲಿ ಹಲವಾರು ರೋಗಗಳು ಉಂಟು ಅವುಗಳನ್ನು ನಾಶಮಾಡುವ ನಿರೊದಕ ಶಕ್ತಿ ನಮ್ಮ ದೇಹದಲ್ಲಿ ಇರುತ್ತದೆ ಆ ಶಕ್ತಿ ಕಡಿಮೆ ಆದಾಗ ಇತಂಹ ರೋಗಗಳು ಕಾನಿಸಿಕೊಳ್ಳುತ್ತವೆ ಆದ ಕಾರಣ ವೈಧ್ಯರಕಡೆ ತಪಾಸಣೆ ಮಾಡಿಕೊಂಡಾಗ ಯಾವ ರೋಗ ಎಂದು ತಿಳಿಯುವದು ವೈಧ್ಯರ ಸಲಹೆ ಇಂದ ಆ ರೋಗಗಳನ್ನು ಕಡಮೆ ಮಾಡಿಕೊಳ್ಳಬೇಕೆಂದರು.
ಡಾ|| ನಯನಾ ಭಸ್ಮೆ ಮಾತನಾಡಿ ಮಹಿಳೆಯರು ಆರೋಗ್ಯದ ಬಗ್ಗೆ ನಿರ್ಲಕ್ಷö್ಯ ವಹಿಸದೆ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಪ್ರಸ್ತುತ ದಿನಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಅಗತ್ಯ. ಎಚ್‌ಪಿವಿ ಲಸಿಕೆ ಹಾಗೂ ಆರೋಗ್ಯಕರ ಜೀವನಶೈಲಿ ಮೂಲಕ ಗರ್ಭಕಂಠ ಕ್ಯಾನ್ಸರ್ ಬಹುಮಟ್ಟಿಗೆ ತಡೆಗಟ್ಟಬಹುದು ವಿದ್ಯಾರ್ಥಿನಿಯರು ಆರೋಗ್ಯದ ಅರಿವು ಬೆಳೆಸಿಕೊಂಡು ಕುಟುಂಬ ಸಮಾಜದಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಗರ್ಭಕಂಠ ಕ್ಯಾನ್ಸರ್ ಲಕ್ಷಣ, ಕಾರಣ, ತಡೆಗಟ್ಟುವ ಕ್ರಮ ಹಾಗೂ ಸಮಯೋಚಿತ ತಪಾಸಣೆ ಮಹತ್ವದ ಬಗ್ಗೆ ತಿಳಿಸಿದರು.
ಅತಿಥಿ ಪೋಲಿಸ್ ಅಧಿಕಾರಿ ಮಂಜುನಾಥ ನಡಮನಿ ಮಾತನಾಡಿ ಲೈಂಗಿಕ ದೌರ್ಜನ್ಯ ಕರುಕುಳ ಹಾಗೂ ದುರುಪಯೋಗದಂತಹ ಪ್ರಕರಣಗಳಲ್ಲಿ ಕಾನೂನು ನೀಡಿರಿವ ರಕ್ಷಣೆ ಕುರಿತು ಮಾಹಿತಿ ತಿಳಿಸಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುಷ್ಮಾ ಗೋಮಾಡಿ, ಶಾರದಾ ದ್ಯಾಮನಗೌಡ್ರ, ಗೌರಿ ಜಾವೂರ, ಅನುರಾದಾ ಬೆಟಗೇರಿ, ಪ್ರೀತಿ ಕರೀಕಟ್ಟಿ, ಸುಮಾ ಯಲಿಗಾರ, ಭಾರತಿ ಕಟಿಗೆನ್ನವರ, ಸಹನಾ ನಲವಡೆ, ಸುಜಾತಾ ಕೋರಿ, ಅಶ್ವಿನಿ ಬಾಳಿ, ಶೀಲಾ ಕರಿಕಟ್ಟಿ, ವೈಷ್ಣವಿ ಶೆಟ್ಟರ, ಉಮಾ ಹಂಪಣ್ಣವರ, ವಿಜಯ ಜಂತ್ಲಿ, ಪತ್ರಕರ್ತರು ಪ್ರಾಚಾರ್ಯರು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಲಕ್ಷಿö್ಮÃ ಬಾಗನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೆ ಸಂಧರ್ಬದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಪತ್ರಕರ್ತರಾದ ಟಿ.ಎನ್.ಮುರಂಕರ, ವೀರಣ್ಣ ಕೊಳಕಿ, ಪ್ರಶಾಂತ ತುಳಜನ್ನವರ, ವೈದ್ಯರಾದ ನಯನಾ ಬಷ್ಮೆ, ಹವಾಲ್ದಾರ ಮಂಜುನಾಥ ನಡವಿನಮನಿ, ಇವರನ್ನು ಸನ್ಮಾನಿಸಲಾಯಿತು.






























