
ಗದಗ,ಜು೩೧: ಶ್ರೀ ಕೆ.ಎಚ್ ಪಾಟೀಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ಗದಗ ವತಿಯಿಂದ ಸ್ಕಿಲ್ ಆ್ಯಟ್ ಸ್ಕೂಲ್ ಕಾರ್ಯಕ್ರಮದಡಿ ಸರಕಾರಿ ಪದವಿಪೂರ್ವ ಕಾಲೇಜ್ ಗದಗನಲ್ಲಿ ಪ್ರಮಾಣಪತ್ರ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಮಲ್ಲೂರ ಬಸವರಾಜರವರು ಅತಿಥಿಗಳಾಗಿ ಪಾಲ್ಗೊಂಡು ಯುವಜನತೆಗೆ ಸ್ಕಿಲ್(ಕೌಶಲ್ಯದ)ನ ಅವಶ್ಯಕತೆ ಬಗ್ಗೆ ಸವಿವರವಾಗಿ ತಿಳಿಸಿದರು.
ಸರಕಾರಿ ಪದವಿಪೂರ್ವ ಕಾಲೇಜ್ ಗದಗನ ಪ್ರಾಂಶುಪಾಲರಾದ ಶ್ರೀಮತಿ.ಪೂರ್ಣಿಮಾ ಹೊಸಮನಿ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಸ್ಕಿಲ್ ಆ್ಯಟ್ ಸ್ಕೂಲ್‌ನ ವಿಶೇಷತೆ ಹಾಗೂ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು. ಸದರಿ ಯೋಜನೆಯಡಿಯ ಪ್ರಥಮ ಶಿಬಿರದಲ್ಲಿ ಒಟ್ಟು ೩೦ ವಿದ್ಯಾರ್ಥಿಗಳು ೩೦೦ ಘಂಟೆಯ “ಜೂನಿಯರ್ ಟೆಕ್ನೀಷಿಯನ್ ಇಲೆಕ್ಟಿçಕ್ ವೆಹಿಕಲ್” ಕುರಿತಾದ ತರಬೇತಿಯನ್ನು ಪೂರ್ಣಗೊಳಿಸಿದ್ದರು.
ಕಾರ್ಯಕ್ರಮದಲ್ಲಿ ಸ.ಕೈ.ತ.ಸಂಸ್ಥೆಯ ತರಬೇತಿ ಅಧಿಕಾರಿ ಮುದಕಪ್ಪಾ ಕುರಿ ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಶ್ರೀಮತಿ.ಸುನೀತಾ ಸಾಕೇನವರ, ಕಿ.ತ.ಅ ರವರು ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದ ಬೋಧಕರಾದ ಮಹೇಶ ಸಿ.ಎಸ್, ಸ್ವಾಗತಿಸಿದರು. ಸರಕಾರಿ ಪದವಿಪೂರ್ವ ಕಾಲೇಜು ಹಿರಿಯ ಬೋಧಕರಾದ ಹೆಚ್.ಎ ಕರ್ನೂಲ ಕಾರ್ಯಕ್ರಮ ನಿರೂಪಿಸಿದರು.






























