
ಯಾದಗಿರಿ: ಮಾದಿಗ ಸಮಾಜದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು, ಪದ್ಮಶ್ರೀ ಮಂದ ಕೃಷ್ಣ ಮಾದಿಗ ಅವರ 61ನೇ ಜನ್ಮದಿನವನ್ನು ಮಾದಿಗ ದಂಡೋರ (ಎಂಆರ್‍ಪಿಎಸ್) ಜಿಲ್ಲಾ ಸಮಿತಿ ಹಾಗೂ ಅಭಿಮಾನಿಗಳು ನಗರದ ನೇತಾಜಿ ಸುಭಾಷ್‍ಚಂದ್ರ ಬೋಸ್ ವೃತ್ತದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು. ಬಳಿಕ ಹಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಆರ್‍ಪಿಎಸ್ ರಾಜ್ಯಾಧ್ಯಕ್ಷ ಬಿ. ನರಸಪ್ಪ, ಕಳೆದ 35 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ಮಾದಿಗ ಸಮಾಜದ ನ್ಯಾಯಯುತ ಹಕ್ಕುಗಳಿಗಾಗಿ ಶ್ರಮಿಸಿದ ಮಂದ ಕೃಷ್ಣ ಮಾದಿಗ ಅವರ ಸೇವೆ ಸಮಾಜಕ್ಕೆ ಅಪಾರವಾಗಿದೆ. ಅವರ ಹೋರಾಟದಿಂದ ಸಮಾಜದ ಅನೇಕ ಬೇಡಿಕೆಗಳು ಈಡೇರಿದ್ದು, ಅವರ ನಾಯಕತ್ವ ಸಮಾಜದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ ಎಂದು ಹೇಳಿದರು.
ಎಂಆರ್‍ಪಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ನಗರಸಭೆಯ ಮಾಜಿ ಸದಸ್ಯ ಗಣೇಶ್ ದುಪ್ಪಲ್ಲಿ ಮಾತನಾಡಿ, ಸಮಾಜದ ಹೆಸರು ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಬೇಕಾದರೆ ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಇಡೀ ಜೀವನವನ್ನು ಸಮಾಜದ ಅಭಿವೃದ್ಧಿಗೆ ಸಮರ್ಪಿಸಿದ ಮಂದ ಕೃಷ್ಣ ಮಾದಿಗ ಅವರ ಹೋರಾಟ ಮತ್ತು ತ್ಯಾಗ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.
ಸಮಾಜದ ಹಿರಿಯ ಮುಖಂಡ ಮಲ್ಲಣ್ಣ ದಾಸನಕೇರಿ ಮಾತನಾಡಿ, ಸಮಾಜದ ಮೇಲೆ ನಡೆಯುವ ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಹೋರಾಡಿ, ಸಮುದಾಯದ ಏಳ್ಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಂದ ಕೃಷ್ಣ ಮಾದಿಗ ಅವರು ಎಲ್ಲರಿಗೂ ಆದರ್ಶ ವ್ಯಕ್ತಿತ್ವ ಎಂದು ಹೇಳಿದರು.
ಹಿರಿಯ ಮುಖಂಡ ಖಂಡಪ್ಪ ದಾಸನ್ ಮಾತನಾಡಿ, ಸಮಾಜದ ಪ್ರಗತಿಗೆ ಇಂತಹ ಮಹಾನ್ ನಾಯಕರ ಕೊಡುಗೆ ಅಮೂಲ್ಯವಾಗಿದ್ದು, ಅವರ ಸೇವೆಯನ್ನು ಸಮಾಜ ಸದಾ ಸ್ಮರಿಸಲಿದೆ ಎಂದರು.
ಲಿಂಗಪ್ಪ ಹತ್ತಿಮನಿ ಮಾತನಾಡಿ, ಸಮಾಜಕ್ಕಾಗಿ ದುಡಿದು, ಸಮಾಜದ ಏಳ್ಗೆಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡ ಮಹಾನ್ ನಾಯಕ ಮಂದ ಕೃಷ್ಣ ಮಾದಿಗ ಅವರ ಕಾರ್ಯಚಟುವಟಿಕೆಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು. ಹಿರಿಯ ಮುಖಂಡ ಗೋಪಾಲ ದಾಸನಕೇರಿ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ, ಹಣಮಂತ ಸೌರಾಷ್ಟ್ರಹಳ್ಳಿ, ಆಂಜನೇಯ ಬಬಲಾದಿ, ಹಣಮಂತ ಅಚ್ಚೋಲ, ವಿಜಯಕುಮಾರ್ ಕಡೆಚೂರ್, ಅಯ್ಯಳಪ್ಪ ಕಂದಕೂರ, ನಾಗರಾಜ್ ಕೊಡೆಕಲ್, ಪೌಡಪ್ಪ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮುಂಡರಗಿ, ಉಪಾಧ್ಯಕ್ಷ ಮಲ್ಲು ಬೇಳಗೇರಿ, ಕಾರ್ಯದರ್ಶಿ ಭೀಮಣ್ಣ ಹತ್ತಿಕುಣಿ, ಖಜಾಂಚಿ ಬ್ರಹ್ಮಾನಂದ ಯಾದಗಿರಿ, ಜಿಲ್ಲಾ ಕಾರ್ಯಾಧ್ಯಕ್ಷ ದೇವು ಲಿಂಗೇರಿ, ತಿಪ್ಪಣ್ಣ ಗೋಂದೇನೂರ್, ಯಾದಗಿರಿ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ದಾಸನಕೇರಿ, ಸುರಪುರ ತಾಲೂಕು ಅಧ್ಯಕ್ಷ ಬಸ್ಸು ಹಾದಿಮನಿ, ಶಹಾಪುರ ತಾಲೂಕು ಅಧ್ಯಕ್ಷ ಪರಶುರಾಮ ಪೂಜಾರಿ, ವೆಂಕಟೇಶ್ ಫುಟ್‍ಪಾಕ್, ನರಸಪ್ಪ ಇಟಗಲ್ಲು, ಅನಿಲ್ ಗುರುಮಿಠಕಲ್, ಮಧು ಗಾಜರಕೋಟ್, ವಿಲ್ಸನ್ ಹಾಲಗೇರಾ, ಶರಣಪ್ಪ ಗುಂದೆನೂರ್, ಮಲ್ಲು ಅಚಿಕೇರಿ, ಶ್ಯಾಮ ಅಚಿಕೇರಿ, ಮಲ್ಲು ನಡುವಿನಮನಿ, ಮಲ್ಲು ಕುಮನೂರು, ಮಲ್ಲಪ್ಪ ಕುಮನೂರು, ದುರ್ಗಪ್ಪ ಹೊರುಂಚ ಸೇರಿದಂತೆ ಹಲವರು ಭಾಗವಹಿಸಿದ್ದರು.



























