
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದುಗ್ಲಪ್ಪ ಸ್ಮಾರಕ ಸೇವಾ ಟ್ರಸ್ಟ್ (ರಿ. ) ಇವರ ಸಹಯೋಗದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಡಿ. ಉಮಾಶಂಕರ್ ರವರ ಗೃಹ ಕಛೇರಿ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣ ಶಿಬಿರವನ್ನು ಶಾಸಕ ಪ್ರಿಯಾ ಕೃಷ್ಣ ಉದ್ಘಾಟಿಸಿದರು. ಶಿಬಿರದಲ್ಲಿ ಸುಮಾರು ೪೫೦ ನಾಗರೀಕರು ನೇತ್ರ ಪರೀಕ್ಷೆ ಮಾಡಿಸಿಕೊಂಡರು. ಅವಶ್ಯಕತೆ ಇರುವ ಶಿಬಿರಾರ್ಥಿಗಳಿಗೆ ಸ್ಥಳದಲ್ಲೇ ಕನ್ನಡಕ ನೀಡಲಾಯಿತು ಹಾಗೂ ೪೦ ಶಿಬಿರಾರ್ಥಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಡಿ. ಉಮಾಶಂಕರ್, ಮುಖಂಡರುಗಳಾದ ಕೃಷ್ಣ ಮೂರ್ತಿ, ಹನುಮಂತರಾಜು, ವೆಂಕಟೇಶ್, ಚಿಕ್ಕಣ್ಣ ಹಾಗೂ ಮಹಿಳಾ ಮುಖಂಡರುಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.


























